ಜೆ.ಜೆ.ನಗರದಲ್ಲಿ ಹತ್ಯೆಯಾದ ಯುವಕ ಚಂದ್ರು ಪ್ರಕರಣದ ತನಿಖೆ ಶುರು ಮಾಡಿದ ಸಿಐಡಿ

ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇಸ್ ಫೈಲ್ ಪಡೆದು ತನಿಖೆ ಶುರು ಮಾಡಿದ್ದಾರೆ. ಡಿಎಸ್ಪಿ ತಿಮ್ಮಯ್ಯ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಜೆ.ಜೆ.ನಗರದಲ್ಲಿ ಹತ್ಯೆಯಾದ ಯುವಕ ಚಂದ್ರು ಪ್ರಕರಣದ ತನಿಖೆ ಶುರು ಮಾಡಿದ ಸಿಐಡಿ
ಯುವಕ ಚಂದ್ರು
Edited By:

Updated on: Apr 13, 2022 | 1:28 PM

ಬೆಂಗಳೂರು: ಜೆ.ಜೆ.ನಗರದಲ್ಲಿ ನಡೆದ ಯುವಕ ಚಂದ್ರು ಹತ್ಯೆ (Murder) ಪ್ರಕರಣ ರಾಜ್ಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇಸ್ ಫೈಲ್ ಪಡೆದು ತನಿಖೆ ಶುರು ಮಾಡಿದ್ದಾರೆ. ಡಿಎಸ್ಪಿ ತಿಮ್ಮಯ್ಯ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಎಸ್ಪಿ ವೆಂಕಟೇಶ್ ತನಿಖೆಯನ್ನು ನೋಡಿಕೊಳ್ಳಲಿದ್ದಾರೆ. ಎಸ್ಎಸ್ಪಿ ರಮೇಶ್ ಬಾನೋತ್ ತನಿಖೆ ಮಾರ್ಗದರ್ಶನ ನೀಡಲಿದ್ದಾರೆ. ಜೆಜೆ ನಗರ ಪೊಲೀಸರು ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿದ್ದರೂ ಸಿಐಡಿ ಆರಂಭ ಹಂತದಿಂದ ತನಿಖೆ ನಡೆಸಲಿದೆ. ದೂರುದಾರರು ಮತ್ತು ಸಾಕ್ಷಿಗಳಾದ ಸೈಮನ್ ಸೇರಿ ಹಲವರನ್ನು ಸಿಐಡಿ ವಿಚಾರಣೆ ನಡೆಸಲಿದೆ. ಸಿಸಿಟಿವಿ ಡಿವಿಆರ್ ಎಲ್ಲವನ್ನೂ ವಶಕ್ಕೆ ಪಡೆಯಲಿದೆ. ಸಂಪೂರ್ಣ ತನಿಖೆ ನಡೆಸಲು ಈಗಾಗಲೇ ಸಿಐಡಿ ತಂಡ ಫೀಲ್ಡ್ ಗೆ ಇಳಿದಿದೆ.

ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ನಾಲ್ವರು ಅರೆಸ್ಟ್
ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಇರ್ಫಾನ್, ಯೋಗೀಶ್, ಅನುದೀಪ್, ಸುಧನ್ನನ್ನು ಬಂಧಿಸಲಾಗಿದೆ. ಆರೋಪಿಗಳು ಬಸವನಗುಡಿ, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯಲ್ಲಿ ವಿವಿಧ ಆ್ಯಪ್ಗಳ ರೆಶ್ಯೂ ಆಧಾರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಆರೋಪಿಗಳಿಂದ ₹5 ಲಕ್ಷ ನಗದು, ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಯುವಕ ಸಾವು
ದಾವಣಗೆರೆ: ಚನ್ನಗಿರಿ ತಾಲೂಕಿನ ಕೆಂಗಾಪುರದಲ್ಲಿ ರಥೋತ್ಸವದ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅರ್ಜುನ್(24) ಮೃತ ಯುವಕ. ಗಾಯಾಳುಗಳಿಗೆ ಚನ್ನಗಿರಿ, ಹೊನ್ನಾಳಿ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಥೋತ್ಸವ ನಡೆಯುವ ಮಾರ್ಗದಲ್ಲಿ ವಿದ್ಯುತ್ ಕಡಿತ ಮಾಡಲು ಗ್ರಾಮ ಪಂಚಾಯಿತಿಯಿಂದ ಮನವಿ ಮಾಡಲಾಗಿತ್ತು. ಆದರೆ, ಸಿಬ್ಬಂದಿಯ ಬೇಜವಾಬ್ದಾರಿಯಿಂದ ದುರ್ಘಟನೆ ನಡೆದಿರುವ ಆರೋಪ ಕೇಳಿ ಬಂದಿದೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಸರ್ಕಾರವೇ ಕೊಲೆ ಮಾಡಿದೆ: ಗುತ್ತಿಗೆದಾರರ ಸಂಘ ಆಕ್ರೋಶ, ಮುಷ್ಕರಕ್ಕೆ ನಿರ್ಧಾರ

ಉರ್ದು ಬರಲ್ಲ ಅಂದಿದ್ದಕ್ಕೆ ಕೊಲೆ ನಡೆಯಿತಾ? ಚಂದ್ರು ಸ್ನೇಹಿತ ಸೈಮನ್ ಮಹತ್ವದ ಹೇಳಿಕೆ