ಉರ್ದು ಬರಲ್ಲ ಅಂದಿದ್ದಕ್ಕೆ ಕೊಲೆ ನಡೆಯಿತಾ? ಚಂದ್ರು ಸ್ನೇಹಿತ ಸೈಮನ್ ಮಹತ್ವದ ಹೇಳಿಕೆ
ಗಾಂಜಾ ಹೊಡಿದಿದ್ರು ಅನಿಸುತ್ತೆ ಎಂದು ತಿಳಿಸಿದ ಚಂದ್ರು ಸ್ನೇಹಿತ ಸೈಮನ್ ನಾನು ಅವನು ಬಾಲ್ಯದ ಸ್ನೇಹಿತರು. ಘಟನೆಯಾದ ವೇಳೆ ಆತಂಕದಲ್ಲಿದ್ದ ನಾನು ಅದೆಲ್ಲವನ್ನು ಆಗ ಪೊಲೀಸರ ಮುಂದೆ ಹೇಳಿರಲಿಲ್ಲ.
ಬೆಂಗಳೂರು: ಜೆಜೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಂದ್ರು ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿ ಮೃತ ಚಂದ್ರು ಸ್ನೇಹಿತ ಸೈಮನ್ ಟಿವಿ9 (Tv9 Kannada) ಜೊತೆ ಮಾತನಾಡಿದ್ದಾನೆ. ಅವತ್ತು ನನ್ನ ಹುಟ್ಟುಹಬ್ಬ ಇತ್ತು. ಹೀಗಾಗಿ ಆ ರಸ್ತೆಯಲ್ಲಿ ಬರ್ತಾ ಇದ್ವಿ. ಅದೇ ವೇಳೆ ಮಚ್ಚು ಹಿಡಿದು ಅಲ್ಲಿ ನಿಂತಿದ್ದರು. ಬೈಕ್ ಕೂಡಾ ಟಚ್ ಆಗಿಲ್ಲ. ನಾವೇ ಅಲ್ಲಾ, ಬೇರೆ ಯಾರೇ ಬಂದಿದ್ರು ಹೊಡಿತಿದ್ದರು. ಟಚ್ ಆಗಿಲ್ಲ ಬಿಡಪ್ಪಾ ಅಂದ್ವಿ. ಅವರು ಉರ್ದುನಲ್ಲಿ ಹೇಳು ಅರ್ಥ ಆಗಲ್ಲ ಅಂದರು. ನಾವು ಇಲ್ಲ ಬಿಡಿ ಟಚ್ ಆಗಿಲ್ಲ ಅಂದವಿ. ಗಲಾಟೆ ಶುರುವಾಯ್ತು. ಆಗ ಓಡಿದ್ವಿ. ನಾನು ಮುಂದೆ ಓಡಿದೆ. ಹಿಂದೆ ಚಂದ್ರುಗೆ ಲಾಂಗ್ನಲ್ಲಿ ಚುಚ್ಚಿದ್ರು ಅಂತ ಹೇಳಿಕೆ ಸೈಮನ್ ಹೇಳಿಕೆ ನೀಡಿದ್ದಾನೆ.
ಅಲ್ಲಿ ಜನ ನಿಂತು ನೋಡುತ್ತಿದ್ದರು. ಒಬ್ರೂ ಕೂಡಾ ಸಹಾಯಕ್ಕೆ ಬರಲಿಲ್ಲ. ಮತ್ತೆ ನಾನು ಹಿಂದೆ ಬಂದು ಚಂದ್ರುನನ್ನ ಎತ್ತಿಕೊಂಡು ಆಸ್ಪತ್ರೆಗೆ ಹೋದೆ. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಪ್ರಾಣ ಹೋಗಿತ್ತು. ಗಾಂಜಾ ಹೊಡಿದಿದ್ರು ಅನಿಸುತ್ತೆ ಎಂದು ತಿಳಿಸಿದ ಚಂದ್ರು ಸ್ನೇಹಿತ ಸೈಮನ್ ನಾನು ಅವನು ಬಾಲ್ಯದ ಸ್ನೇಹಿತರು. ಘಟನೆಯಾದ ವೇಳೆ ಆತಂಕದಲ್ಲಿದ್ದ ನಾನು ಅದೆಲ್ಲವನ್ನು ಆಗ ಪೊಲೀಸರ ಮುಂದೆ ಹೇಳಿರಲಿಲ್ಲ. ಪೊಲೀಸರು ಈಗ ಎಲ್ಲವನ್ನೂ ತನಿಖೆ ಮಾಡುತಿದ್ದಾರೆ. ನನಗೆ ಪೊಲೀಸರು ಕರೆದಿದ್ದಾರೆ. ಪೊಲೀಸರ ಬಳಿ ಹೋದಾಗ ಘಟನೆ ವೇಳೆ ವಿಚಾರಗಳನ್ನು ನಾನು ಪೊಲೀಸರಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾನೆ.
ಕಮಲ್ ಪಂಥ್ ವಿರುದ್ಧ ಆರೋಪ: ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಪೊಲೀಸ್ರಿಗೆ ದೂರು ನೀಡುತ್ತಿರುವ ಮಧ್ಯೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ತಿನ ಸದಸ್ಯ ರವಿಕುಮಾರ್ (Ravikumar) ಈ ಕುರಿತು ಹೇಳಿಕೆ ನೀಡಿದ್ದಾರೆ. “ತಮ್ಮ ತಲೆ ಮೇಲೆ ಬರುತ್ತೆ ಎಂದು, ಬೆಂಗಳೂರು ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ. ಗೃಹ ಸಚಿವರು ಹೇಳಿದ್ದು ಸರಿ ಇದೆ. ಉರ್ದು ಬರಲ್ಲ ಅಂದಿದ್ದಕ್ಕೆ ಚಂದ್ರುನನ್ನ ಕೊಲೆ ಮಾಡಲಾಗಿದೆ. ಯುವಕ ಚಂದ್ರು ಹತ್ಯೆ ಮಾಡಿರುವುದು ಗೂಂಡಾ ಮುಸ್ಲಿಮರು. ಬೈಕ್ಗೆ ಆ್ಯಕ್ಸಿಂಡೆಂಟ್ ಆಗಿದ್ದು ನಿಜ, ಆಗ ಗಲಾಟೆ ನಡೆದಿದೆ. ಉರ್ದುವಿನಲ್ಲಿ ಮಾತನಾಡಿ ಎಂದು ಚಂದ್ರುಗೆ ಹೇಳಿದ್ದಾರೆ. ಉರ್ದು ನಹೀ ಹೈ ಅಂತ ಹೇಳಿದಾಗ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ,” ಎಂದು ರವಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ
ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?
CSK vs SRH Playing XI: CSK ತಂಡದಲ್ಲಿ 1 ಬದಲಾವಣೆ, SRH ಟೀಮ್ನಲ್ಲಿ 2 ಬದಲಾವಣೆ..!
Published On - 4:40 pm, Sat, 9 April 22