ದಾವಣಗೆರೆಯಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಂದೆಯನ್ನೇ ಕೊಲೆ ಮಾಡಿದ ಮಗ! ಆರೋಪಿ ಅರೆಸ್ಟ್
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಸಮೀಪದ ಗೊಲ್ಲರಹಳ್ಳಿ ಬಳಿಯ ಭದ್ರಾ ಕಾಲುವೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಅನುಮಾನ ಮೂಡಿದೆ. ಪೊಲೀಸರು ಶವ ಗುರುತು ಪತ್ತೆಗೆ ಮುಂದಾಗಿದ್ದಾರೆ.
ದಾವಣಗೆರೆ: ಮದ್ಯ (Alcohol) ಸೇವನೆಗೆ ಹಣ (Money) ಕೊಡದ ತಂದೆಯನ್ನೇ ಮಗ ಕೊಲೆ ಮಾಡಿದ್ದಾನೆ. ಈ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿಹಾಕಿ ಪುತ್ರ ನರಸಿಂಹಪ್ಪ(46) ತಂದೆ ಮಂಜಪ್ಪ(65) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನರಸಿಂಹಪ್ಪ ಮನೆಗೆ ಬಂದು ಹಣ ನೀಡುವಂತೆ ಪೀಡಿಸಿದ್ದ. ದುಡ್ಡಿಲ್ಲ ಊಟ ಮಾಡು ಎಂದು ಹೇಳಿದ್ದಕ್ಕೆ ಮಂಜಪ್ಪನನ್ನು ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಪರಿಚಿತ ಮಹಿಳೆ ಶವ ಪತ್ತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಸಮೀಪದ ಗೊಲ್ಲರಹಳ್ಳಿ ಬಳಿಯ ಭದ್ರಾ ಕಾಲುವೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಅನುಮಾನ ಮೂಡಿದೆ. ಪೊಲೀಸರು ಶವ ಗುರುತು ಪತ್ತೆಗೆ ಮುಂದಾಗಿದ್ದಾರೆ. ಮಗಿಳೆಗೆ ಸುಮಾರು 25 ರಿಂದ 30 ವರ್ಷ ಎಂದು ಅಂದಾಜಿಸಲಾಗಿದ್ದು, ಮಹಿಳೆಯ ಶವ ಬಹುತೇಕ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಮಹಿಳೆ ಕೇಸರ ಬಣ್ಣದ ಚೂಡಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಹಾಕಿದ್ದಾರೆ. ಕಾಲುಂಗುರು ಹಾಗೂ ಕೈಯಲ್ಲಿ ಮೂರು ತಾಮ್ರದ ಉಂಗುರು ಇರುವುದು ಪತ್ತೆಯಾಗಿದೆ. ಸದ್ಯ ಪ್ರಕರಣ ಸಂತೆಬೆನ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಬೈಕ್ ಕಳ್ಳನ ಬಂಧನ: ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ಆರೋಪಿ ತುಮಕೂರಿನಿಂದ ಬೆಂಗಳೂರಿಗೆ ಬಂದು ಸಾಲು ಸಾಲು ಕಳ್ಳತನ ಮಾಡಿದ್ದಾನೆ. ಶ್ರೀನಿವಾಸ್ ಬಂಧಿತ ಆರೋಪಿ ತುಮಕೂರು ಜಿಲ್ಲೆ ಗುಬ್ಬಿ ನಿವಾಸಿ. ಬಂಧಿತನಿಂದ 10 ಬೈಕ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
ಸಾಮಾಜಿಕ ಜಾಲತಾಣದಲ್ಲಿ ಜನರನ್ನು ರಂಜಿಸುತ್ತಿರುವ ಉತ್ತರ ಕರ್ನಾಟಕದ ಪ್ರತಿಭೆ ವಾದಿರಾಜ
Published On - 10:24 am, Sat, 9 April 22