ಸಾಮಾಜಿಕ ಜಾಲತಾಣದಲ್ಲಿ ಜನರನ್ನು ರಂಜಿಸುತ್ತಿರುವ ಉತ್ತರ ಕರ್ನಾಟಕದ ಪ್ರತಿಭೆ ವಾದಿರಾಜ
ವಾದಿರಾಜ ಬಬಲಾದಿ ಅವರು ಹಾಸ್ಯ ಅನ್ನುವುದು ತಂದೆಯಿಂದ ರೂಢಿಯಲ್ಲಿ ಬಂದ ವರ, ತಂದೆ ನಾಟಕ, ರಂಗಭೂಮಿಯ ಕಲಾವಿದರು. ಶಾಲೆಯಲ್ಲಿರುವಾಗಲೇ ಆಕ್ಟಿಂಗ್, ಸ್ಟೇಜ್ ಸ್ಕಿಟ್ ಗಳನ್ನು ಮಾಡುತ್ತಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯದ ಮೂಲಕ ರಂಜಿಸುತ್ತಿರುವ ಉತ್ತರ ಕರ್ನಾಟಕದ ಪ್ರತಿಭೆ, ವಾದಿರಾಜ ಬಬಲಾದಿ ಕಿರಿಯ ವಯಸ್ಸಿನಲ್ಲೇ ಹಾಸ್ಯದ ಮುಖಾಂತರ ಜನರನ್ನು ರಂಜಿಸುತ್ತಾ ಇನ್ಸ್ಟಾಗ್ರಾಮ್ ನಲ್ಲಿ ಪ್ರಸ್ತುತ ಒಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು, ಜೊತೆಗೆ ಯೂಟ್ಯೂಬ್ ನಲ್ಲಿ 36 ಸಾವಿರಕ್ಕೂ ಅಧಿಕ ಚಂದಾದಾರರನ್ನು ಹೊಂದಿರುವ, ರೋಸ್ಟ್ರಮ್ ಡೈರೀಸ್ ಅವರಿಂದ ಪ್ರಶಸ್ತಿ ಪಡೆದಿರುವ ವ್ಯಕ್ತಿ ಇವರು. ಪ್ರಶಸ್ತಿ ವಿಜೇತ, ವಾದಿರಾಜ ಬಬಲಾದಿ ನಮ್ಮ ಜೊತೆ ಹಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಕೆಲ ಮಾತು ಪದಗಳಲ್ಲಿ ಸಾಮಾಜಿಕ ಜಾಲತಾಣ ಅಪಾಯಕಾರಿ ಎಂದು ಹಲವರು ವಾದಿಸುತ್ತಾರೆ. ಆದ್ರೆ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಿರ್ಧಾರವಾಗುತ್ತೆ. ಅನೇಕರು ಫೇಸ್ಬುಕ್, ಇನ್ಸ್ಟಾಗ್ರಾಂ ಅನ್ನು ಕೇವಲ ಇತರರು ಹಾಕಿದ ಪೋಸ್ಟ್‌ಗಳನ್ನು ಸ್ಕ್ರಾಲ್ ಮಾಡುತ್ತಾ ಇರುತ್ತಾರೆ. ಆದ್ರೆ ನಾನು ಉತ್ತರ ಕರ್ನಾಟಕದ ಶೈಲಿಯಲ್ಲಿಯೇ ಕನ್ನಡ ಮಾತನಾಡಿ, ಹಾಸ್ಯ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಜನಮನ್ನಣೆ ಗಳಿಸಿದ್ದೇನೆ. ಇವರು ಪ್ರಸ್ತುತ ಬೆಳಗಾವಿಯ ಗೋಗಟೆ ಕಾಮರ್ಸ್ ಕಾಲೇಜ್ B.COM ವ್ಯಾಸಂಗ ಮಾಡುತ್ತಿದ್ದಾರೆ.
ಹಾಸ್ಯದಲ್ಲಿ ಆಸಕ್ತಿ ವಾದಿರಾಜ ಬಬಲಾದಿ ಅವರು ಹಾಸ್ಯ ಅನ್ನುವುದು ತಂದೆಯಿಂದ ರೂಢಿಯಲ್ಲಿ ಬಂದ ವರ, ತಂದೆ ನಾಟಕ, ರಂಗಭೂಮಿಯ ಕಲಾವಿದರು. ಶಾಲೆಯಲ್ಲಿರುವಾಗಲೇ ಆಕ್ಟಿಂಗ್, ಸ್ಟೇಜ್ ಸ್ಕಿಟ್ ಗಳನ್ನು ಮಾಡುತ್ತಿದ್ದರು. ಬಬ್ರುವಾಹನ, ಡಾ.ರಾಜಕುಮಾರ್, ಉಪೇಂದ್ರ ಹೀಗೆ ಹಲವು ನಟರ ಮಿಮಿಕ್ರಿ ಸಹ ಮಾಡಲಾರಂಭಿಸಿದರು.
“ಜಾಲತಾಣದಲ್ಲಿ ವಿಡಿಯೋ ಪಯಣ” ಇವರು ಕಾಲೇಜಿಗೆ ಬಂದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚುಕೊಳ್ಳಿತ್ತಿದ್ದರು. 2019 ರಲ್ಲಿ ಟೈಮ್ ಪಾಸ್‌ಗಾಗಿ ವಿಡಿಯೋ ಮಾಡುವುದನ್ನು ಪ್ರಾರಂಭಿಸಿದ ಇವರು ಇದೀಗ ಅದನ್ನು ತನ್ನ ಹಾವ್ಯಸವನ್ನಾಗಿ ಮಾಡಿಕೊಂಡಿದ್ದಾರೆ ಇವರು ಉತ್ತರ ಕರ್ನಾಟಕ ಶೈಲಿಯಲ್ಲಿ ಆಡುವ ಭಾಷೆ ಜನರಿಗೆ ಬಹುಬೇಗ ಇಷ್ಟವಾಯಿತು. ಸೋಶಿಯಲ್ಮೀ ಡಿಯಾ ಬಗ್ಗೆ ಹೆಚ್ಚಿನ ಪರಿಕಲ್ಪನೆಯೂ ಇರಲಿಲ್ಲ. ಯೂಟ್ಯೂಬ್ ಚಾನಲ್ ನಲ್ಲೂ ಹೆಚ್ಚು ಜನಮನ್ನಣೆ ಯೂಟ್ಯೂಬ್ ಮಾತ್ರವಲ್ಲದೆ, ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ, ಹಲವು ಸ್ಟ್ಯಾಂಡ್ ಅಪ್ ಕಾಮಿಡಿ ಶೋ ನೀಡಿತ್ತಿದ್ದಾರೆ.
ಪ್ರಸ್ತುತ “ಸ್ಪೂಕಿ ಕಾಲೇಜ್” ಕನ್ನಡ horror comedy ಸಿನೆಮಾದಲ್ಲಿ ಹಾಸ್ಯದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಲವು ಅವಕಾಶಗಳು ಬರುತ್ತಿದ್ದು, ವಿದ್ಯಾಭ್ಯಾಸದ ಕಡೆಯಲ್ಲೂ ಗಮನ ಕೊಡುತ್ತಿದ್ದೇನೆ. ಕಲಾ ಕ್ಷೇತ್ರದಲ್ಲಿ ಬೆಳೆಯಬೇಕು ಎನ್ನುವುದು ಆಸೆ ಇವರದ್ದು.
ಆನಂದ ಜೇವೂರ್,ಕಲಬುರಗಿ