ಹಳೆ ವೈಷಮ್ಯ: ಮನೆಯಲ್ಲಿ ಮಲಗಿದ್ದ ವೇಳೆ ಕತ್ತು ಕೊಯ್ದು ಹತ್ಯೆ, ನೆರೆ ಮನೆಯ ವ್ಯಕ್ತಿ ಮೇಲೆ ಶಂಕೆ
ಹಳೆ ವೈಷಮ್ಯದಿಂದಾಗಿ ನೆರೆ ಮನೆಯ ಶ್ರೀನಿವಾಸ್ ರಮೇಶ್ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಡಿವೈಎಸ್ಪಿ ರೋಷನ್ ಜಮೀರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಶ್ರವಣಗೆರೆ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಮಲಗಿದ್ದ ರಮೇಶ್(45) ಕತ್ತು ಕೊಯ್ದು ಹತ್ಯೆ ಮಾಡಲಾಗಿದ್ದು ನೆರೆ ಮನೆಯ ಶ್ರೀನಿವಾಸ್ ವಿರುದ್ಧ ಹತ್ಯೆ ಮಾಡಿದ ಆರೋಪ ಕೇಳಿ ಬಂದಿದೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ರಮೇಶ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹಳೆ ವೈಷಮ್ಯದಿಂದಾಗಿ ನೆರೆ ಮನೆಯ ಶ್ರೀನಿವಾಸ್ ರಮೇಶ್ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಡಿವೈಎಸ್ಪಿ ರೋಷನ್ ಜಮೀರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊಲಕ್ಕೆ ನೀರು ಬಿಡುವ ವಿಚಾರಕ್ಕೆ ಅಣ್ಣನ ಕೊಲೆ ಮಾಡಿದ ಸಹೋದರ ಇನ್ನು ಮತ್ತೊಂದು ಕಡೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಪೈದೊಡ್ಡಿ ಗ್ರಾಮದಲ್ಲಿ ಹೊಲಕ್ಕೆ ನೀರು ಬಿಡುವ ವಿಚಾರಕ್ಕೆ ನಡೆದಿದ್ದ ಗಲಾಟೆಯಲ್ಲಿ ಸಹೋದರ ಹತ್ಯೆ ಮಾಡಲಾಗಿದೆ. ಅಮರಪ್ಪ(50) ಕೊಲೆಯಾದ ವ್ಯಕ್ತಿ. ಈ ಪ್ರಕರಣ ಸಂಬಂಧ ಹಟ್ಟಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಅಮರಪ್ಪನ ಸಹೋದರ ರಂಗಪ್ಪ, ರಂಗಪ್ಪನ ಪತ್ನಿ ಯಲ್ಲಮ್ಮ, ಸಂಬಂಧಿ ದುರಗಪ್ಪ ಹಾಗೂ ವೆಂಕಟೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಂಗಪ್ಪನ ಮಕ್ಕಳಾದ ಹನುಮಂತ, ಶಿವರಾಯ, ಹುಲ್ಲೇಶ್ ಕೂಡ ಈ ಕೇಸ್ನಲ್ಲಿ ಭಾಗಿಯಾಗಿದ್ದಾರೆ. ಮಾರ್ಚ್ 12ರಂದು ಒಣಗಿಹೋಗಿದ್ದ ಶೇಂಗಾಗೆ ನೀರು ಬಿಡಲು ಹೋಗಿದ್ದ ಅಮರಪ್ಪನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ವಾರಕ್ಕೊಮ್ಮೆ ನೀರು ಹಾಯಿಸೊ ಪದ್ದತಿ ಮಾಡಿಕೊಂಡಿದ್ದರು. ಅದರಂತೆ ಶೇಂಗಾಗೆ ನೀರು ಬಿಡಲು ಅಮರಪ್ಪ ಬಂದಿದ್ದ. ಈ ವೇಳೆ ಆರೋಪಿ ರಂಗಪ್ಪ ಹಾಗೂ ಆತನ ಮಕ್ಕಳಿಂದ ಗಲಾಟೆ ಶುರುವಾಗಿದೆ. ರಂಗಪ್ಪ ಹಾಗೂ ಮಕ್ಕಳು ಪದ್ದತಿ ಮೀರಿ ಪದೇ ಪದೇ ನೀರು ಹಾಯಿಸಿಕೊಳ್ಳುತ್ತಿದ್ದರು. “ಶೇಂಗಾ ಒಣಗಿದೆ. ನನ್ನ ಪಾಳಯವಿದೆ” ಎಂದು ಹೇಳಿ ನೀರು ಬಿಟ್ಟುಕೊಳ್ಳಲು ಅಮರಪ್ಪ ಮುಂದಾಗಿದ್ದ. ಆಗ ಏಕಾಏಕಿ ರಂಗಪ್ಪ ಆಂಡ್ ಟೀಂ ಹಲ್ಲೆ ನಡೆಸಿದೆ. ಒಟ್ಟು 7 ಜನ ಆರೋಪಿಗಳು ಕಲ್ಲು, ದೊಣ್ಣೆಗಳಿಂದ ಅಮರಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಎರಡು ಕುಟುಂಬಗಳ ನಡುವೆ ಕಾದಾಟವಾಗಿದ್ದು ಗಲಾಟೆಯಲ್ಲಿ ಶೇಂಗಾ ಹೊಲದಲ್ಲಿ ಅಟ್ಟಾಡಿಸಿ ಹೊಡೆದು ಅಮರಪ್ಪನ ಕೊಲೆ ಮಾಡಲಾಗಿದೆ. ಘಟನೆ ಬಳಿಕ ಹಂತಕರನ್ನು ಕೊಲ್ಲದೇ ಬಿಡಲ್ಲ ಅಂತ ದೂರುದಾರರು ಶಪಥ ಮಾಡಿದ್ದರು. ತಲೆಗೆ ತಲೆ ಹೋಗ್ಬೇಕು, ಮುಯ್ಯಿಗೆ ಮುಯ್ಯಿ ಅಂತ ಶಪಥ ಮಾಡಿದ್ದರು. ಪೈದೊಡ್ಡಿ ಗ್ರಾಮದ ಈ ಅಡವಿಯಲ್ಲಿ ನೆಟ್ ವರ್ಕ್ ಇಲ್ಲ, ಟಿವಿ ಇಲ್ಲ. ಅಲ್ಲಿ ಮರ್ಡರ್ಗೆ ಕೌಂಟರ್ ಮರ್ಡರ್ ಸರ್ವೇ ಸಾಮಾನ್ಯ. ಹೀಗಾಗಿ ಅವರಲ್ಲಿ ಕಾನೂನು ಅರಿವು ಮೂಡಿಸುತ್ತೇವೆ ಎಂದ ರಾಯಚೂರು ಎಸ್ಪಿ ನಿಖಿಲ್ ತಿಳಿಸಿದ್ದಾರೆ. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ಆ್ಯಂಕರ್ಗಳಿಗೆ ಬೈಯ್ಯುತ್ತಿದ್ದೆ, ಆದ್ರೆ ಈಗ ನಾನೇ ಆ್ಯಂಕರ್’: ಹೊಸ ಜರ್ನಿ ಆರಂಭಿಸಿದ ಬಿಗ್ ಬಾಸ್ ಮಂಜು
Literature: ನೆರೆನಾಡ ನುಡಿಯೊಳಗಾಡಿ; ಮಾಲತಿ ಮುದಕವಿ ಅನುವಾದಿಸಿದ ವಿಜಯಾ ಬ್ರಾಹ್ಮಣಕರ ಕಥೆ ‘ಋಣಾನುಬಂಧ’