ಉರ್ದು ಬರಲ್ಲ ಅಂದಿದ್ದಕ್ಕೆ ಚಂದ್ರು ಕೊಲೆ ನಡೆದಿದೆ, ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ- ಎಂಎಲ್ಸಿ ರವಿಕುಮಾರ್ ಆರೋಪ
ತಮ್ಮ ತಲೆ ಮೇಲೆ ಬರುತ್ತೆ ಎಂದು ನಾಡಿಗೆ ಸುಳ್ಳು ಹೇಳಿದ್ದಾರೆ. ಗೃಹ ಸಚಿವರು ಹೇಳಿದ್ದು ಸರಿ ಇದೆ. ಉರ್ದು ಬರಲ್ಲ ಅಂದಿದ್ದಕ್ಕೆ ಚಂದ್ರುನನ್ನ ಕೊಲೆ ಮಾಡಲಾಗಿದೆ.
ಬೆಂಗಳೂರು: ಜೆಜೆ ನಗರದಲ್ಲಿ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ (Chandru Murder Case) ಹೊಸ ತಿರುವು ಸಿಕ್ಕಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಪೊಲೀಸ್ರಿಗೆ ದೂರು ನೀಡುತ್ತಿರುವ ಮಧ್ಯೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ತಿನ ಸದ್ಸ್ಯ ರವಿಕುಮಾರ್ (Ravikumar) ಈ ಕುರಿತು ಹೇಳಿಕೆ ನೀಡಿದ್ದಾರೆ. “ತಮ್ಮ ತಲೆ ಮೇಲೆ ಬರುತ್ತೆ ಎಂದು, ಬೆಂಗಳೂರು ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ. ಗೃಹ ಸಚಿವರು ಹೇಳಿದ್ದು ಸರಿ ಇದೆ. ಉರ್ದು ಬರಲ್ಲ ಅಂದಿದ್ದಕ್ಕೆ ಚಂದ್ರುನನ್ನ ಕೊಲೆ ಮಾಡಲಾಗಿದೆ. ಯುವಕ ಚಂದ್ರು ಹತ್ಯೆ ಮಾಡಿರುವುದು ಗೂಂಡಾ ಮುಸ್ಲಿಮರು. ಬೈಕ್ಗೆ ಆ್ಯಕ್ಸಿಂಡೆಂಟ್ ಆಗಿದ್ದು ನಿಜ, ಆಗ ಗಲಾಟೆ ನಡೆದಿದೆ. ಉರ್ದುವಿನಲ್ಲಿ ಮಾತನಾಡಿ ಎಂದು ಚಂದ್ರುಗೆ ಹೇಳಿದ್ದಾರೆ. ಉರ್ದು ನಹೀ ಹೈ ಅಂತ ಹೇಳಿದಾಗ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ,” ಎಂದು ರವಿಕುಮಾರ್ ಹೇಳಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಪತ್ರಕರ್ತರ ಜೊತೆ ಅವರು ಮಾತನಾಡುತ್ತಿದ್ದರು. ರವಿಕುಮಾರ್ ಅವರು ಹೇಳುವ ಪ್ರಕಾರ, ಘಟನೆ ನಡೆದ ದಿನ ಚಂದ್ರುವಿನ ಜೊತೆ ಇದ್ದ ಗೆಳೆಯ ಸೈಮನ್ ಈ ಕುರಿತು ಮಾಹಿತಿ ನೀಡಿದ್ದಾರೆ. “ನಾವು ಚಂದ್ರುವಿನ ಮನೆಗೆ ಹೋಗಿದ್ದೆವು. ಆಗ ಅವರ ತಾಯಿ ಮತ್ತು ಗೆಳೆಯ ಸೈಮನ್ ನಮಗೆ ಹೇಳಿದ್ದಾರೆ. ಉರ್ದು ಬರಲ್ಲ ಎಂಬ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದನ್ನು ಅವರು ಹೇಳಿದ್ದಾರೆ,” ಎಂದು ರವಿಕುಮಾರ್ ಹೇಳಿದರು ಮತ್ತು ಈ ಕುರಿತು ವಿವರವಾದ ತನಿಖೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಹಿಂದಿ ಹೇರಿಕೆ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು ಫಸ್ಟ್. ದೇಶದ ವಿಚಾರ ಬಂದಾಗ ರಾಷ್ಟ್ರೀಯ ಭಾಷೆ ಹಿಂದಿ ಫಸ್ಟ್. ಈ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಹೆಚ್ಡಿ ಕುಮಾರಸ್ವಾಮಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅಲಿಖಿತವಾಗಿ ಇದ್ರೂ ಬಹುಜನರು ಬಳಸುವ ಭಾಷೆ ಹಿಂದಿ ಎಂದರು.
ಪುತ್ತೂರಲ್ಲಿ ಮುಸ್ಲಿಮರ ಆಟೋ ಬಳಸದಂತೆ ಅಭಿಯಾನ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು, ಇದು ಕ್ಷುಲ್ಲಕ ಕಾರಣ. ಇಂತಹ ವಿಚಾರಗಳನ್ನ ಇಲ್ಲಿ ತರಬಾರದು. ಆಟೋ ಬ್ಯಾನ್, ಮಾವಿನ ಹಣ್ಣು ಬ್ಯಾನ್ ಇಲ್ಲಿ ತರಬಾರದು. ಇದರಲ್ಲಿ ಹಿಂದೂ, ಮುಸ್ಲಿಂ ಎಂದು ತರಬಾರದು. ಮೊದಲು ಬರುವ ಆಟೋವನ್ನು ಜನರು ಬಳಸುತ್ತಾರೆ ಎಂದು ಹೇಳಿದ್ದಾರೆ.
ಚಂದ್ರು ಸ್ನೇಹಿತ ಸೈಮನ್ ಹೇಳಿಕೆ ಆಧರಿಸಿ ಮಾಹಿತಿ ನೀಡಿದ್ದೆ: ಕಮಲ್ ಪಂತ್
ಹತ್ಯೆಯಾದ ಚಂದ್ರು ಸ್ನೇಹಿತ ಸೈಮನ್ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಹತ್ಯೆ ನಡೆದಾಗ ಚಂದ್ರು ಜತೆಗಿದ್ದ ಸೈಮನ್ ಹೇಳಿಕೆ ನೀಡಿದ್ದಾನೆ. ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದ ಚಾಕು ಇರಿಯಲಾಗಿದೆ. ಚಂದ್ರುಗೆ ಚಾಕುವಿನಿಂದ ಇರಿದು ಕೊಂದಿದ್ದಾರೆಂದು ಹೇಳಿದ್ದ. ಚಂದ್ರು ಸ್ನೇಹಿತ ಸೈಮನ್ ಹೇಳಿಕೆ ಆಧರಿಸಿ ಮಾಹಿತಿ ನೀಡಿದ್ದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಉರ್ದು ಮಾತನಾಡಲಿಲ್ಲ ಅನ್ನುವ ಕಾರಣಕ್ಕೆ ಕೊಲೆ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಆರೋಪ ಮಾಡಿದ್ದರು. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುಳ್ಳು ಹೇಳಿದ್ದಾರೆ ಎಂದೂ ಅವರು ಆರೋಪಿಸಿದ್ದರು.
ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದೇವೆ. ಇ- ಮೇಲ್ ಪೋರ್ಟಲ್ ಬೇರೆ ದೇಶದಲ್ಲಿರುವ ಕಾರಣ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ, ಬೇರೆ ಬೇರೆ ಸಂಸ್ಥೆಗಳು ತನಿಖೆಗೆ ಸಹಕಾರ ನೀಡುತ್ತಿವೆ. ಬೇರೆ ಬೇರೆ ಇ-ಮೇಲ್ ಐಡಿಯಿಂದ ಮೇಲ್ಗಳು ಬಂದಿವೆ. ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ
ಬೆಂಗಳೂರು: 3 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಜೈಲಿನ ಒಳಗೆ ಆತ್ಮಹತ್ಯೆ
Published On - 1:07 pm, Sat, 9 April 22