ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಲು ಒನ್ ನೇಷನ್ – ಒನ್ ಎಲೆಕ್ಷನ್ ಅಗತ್ಯ; ಪ್ರಹ್ಲಾದ್ ಜೋಶಿ
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆ. ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಇರುತ್ತದೆ. 70 ವರ್ಷ ಆಡಳಿತ ಮಾಡಿದವರು ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಕೊಟ್ಟಿರಲಿಲ್ಲ.
ಬೆಂಗಳೂರು: ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ (Democratic) ರಾಷ್ಟ್ರ. ನಮ್ಮ ಪ್ರಜಾಪ್ರಭುತ್ವ ಈಗ ಬಹಳ ಪಕ್ವಗೊಂಡಿದೆ ಎಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಒಂದು ರಾಷ್ಟ್ರ – ಒಂದು ಚುನಾವಣೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. 1999 ಮತ್ತು 2004 ರಲ್ಲಿ ಸಂಸತ್ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆದಿವೆ. ಒರಿಸ್ಸಾದಲ್ಲೂ ಚುನಾವಣೆಗಳು ಒಟ್ಟಿಗೆ ನಡೆದವು. ಜನರಿಗೆ ಹತ್ತು ಬ್ಯಾಲೆಟ್ ಪೇಪರ್ ಕೊಟ್ರೂ ವಿವೇಚಿಸಿ ಮತ ಹಾಕ್ತಾರೆ. ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆ ನಡೆಯಿತು. ಮುಂದಿನ ಅಕ್ಟೋಬರ್ನಲ್ಲಿ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ನಡೆಯಲಿದೆ. 2023 ರ ಮಾರ್ಚ್ ನಲ್ಲಿ ಕರ್ನಾಟಕ ಚುನಾವಣೆ ಇದೆ. ಅದರ ನಂತರ ಮಧ್ಯಪ್ರದೇಶ, ಛತ್ತೀಸ್ ಗಢ ಸೇರಿ ನಾಲ್ಕು ರಾಜ್ಯಗಳಿಗೆ ಚುನಾವಣೆ ಇದೆ. ಬಳಿಕ ಸಂಸತ್ ಚುನಾವಣೆ ಬರುತ್ತದೆ. ಮುಂದೆ ಬರೀ ಚುನಾವಣೆಗಳೇ, ನಾವು ಎತ್ತ ಹೋಗುತ್ತಿದ್ದೇವೆ? ಎಂದರು. ದೇಶದಲ್ಲಿ ಬೇರೆ ಬೇರೆ ಮತದಾರರ ಪಟ್ಟಿಯಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರ ಪಟ್ಟಿ ಬೇರೆ ಇರುತ್ತೆ. ವಿಧಾನಸಭೆ ಚುನಾವಣೆಗಳಲ್ಲಿ ಮತದಾರರ ಪಟ್ಟಿ ಬೇರೆ ಇರುತ್ತದೆ. ಇದಕ್ಕೆ ಜನಜಾಗೃತಿ ಅಗತ್ಯವಿದೆ. ದೇಶದಲ್ಲಿ ಮೋದಿ ಮೇನಿಯಾ ಶುರುವಾಗಿದೆ. ಮೋದಿ ಏನೇ ಹೇಳಿದರೂ ಚರ್ಚೆಗೂ ಮುನ್ನವೇ ವಿರೋಧಿಸುತ್ತಾರೆ ಎಂದು ಹೇಳಿದರು.
ಒಂದು ದೇಶ ಒಂದು ಚುನಾವಣೆ ಸಾಧ್ಯನಾ ಎಂದು ಪ್ರಶ್ನಿಸುತ್ತಾರೆ. ಸಂಸತ್ ಅಧಿವೇಶನ ಇದ್ದಾಗ ಅವರ ಶಿಸ್ತು ಕಠಿಣವಾಗಿರುತ್ತದೆ. ಹಲವು ಸಂಸದರು ಚುನಾವಣೆ ಇದೆ ಎಂದು ಹೇಳಿ ರಜೆ ಕೇಳಿದ್ರು. ಬಹಳ ಜನ ಸಂಸತ್ ಅಧಿವೇಶನಕ್ಕೆ ಬರಲಿಲ್ಲ. ಅವರ ರಾಜ್ಯಗಳಲ್ಲಿ ಚುನಾವಣೆ ಇದೆ ಅನ್ನೋ ಕಾರಣ ನೀಡಿದ್ದರು. ಹಲವು ಚುನಾವಣೆಗಳಿಂದ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ಪ್ರಜಾಪ್ರಭುತ್ವ, ರಾಜಕಾರಣಿಗಳ ಮೇಲೆ ವಿಶ್ವಾಸ ಕಡಿಮೆ ಆಗುತ್ತಿದೆ. ಸಮರ್ಥ ಪ್ರಜಾಪ್ರಭುತ್ವ ಇದ್ದರೆ ಒಂದೇ ಕಡೆ ಅಧಿಕಾರ ಇರಲ್ಲ. ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಲು ಒನ್ ನೇಷನ್ ಒನ್ ಎಲೆಕ್ಷನ್ ಅಗತ್ಯವಿದೆ. ಸದಾ ಕಾಲಕ್ಕೂ ಚುನಾವಣೆ ಸರಿಯಲ್ಲ, ಬದಲಾವಣೆ ಆಗಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆ. ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಇರುತ್ತದೆ. 70 ವರ್ಷ ಆಡಳಿತ ಮಾಡಿದವರು ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಕೊಟ್ಟಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅವಕಾಶ ಮಾಡಿಕೊಟ್ಟಿದ್ದೇವೆ. ಇಂಗ್ಲಿಷ್ಗೆ ನೂರು ಇನ್ನೂರು ವರ್ಷಗಳ ಇತಿಹಾಸವಿದೆ ಅಷ್ಟೇ. ದೇಶದ ಬಹುತೇಕ ಜನರಿಗೆ ಇಂಗ್ಲಿಷ್ ಬರುವುದಿಲ್ಲ. ಮೊಘಲರಷ್ಟೇ ಹಾಳುಮಾಡಿದ ಇಂಗ್ಲಿಷರ ಇಂಗ್ಲಿಷ್ ಬೇಕಿದೆ. ಆದರೆ ಹಿಂದಿ ಬೇಡ ಅಂದ್ರೆ ಹೇಗೆ! ಇಂಗ್ಲಿಷ್ ಬದಲು ಹಿಂದಿ ಬಳಸಿ ಎಂದು ಅಮಿತ್ ಶಾ ಹೇಳಿದ್ದಾರೆ. ಕೇಂದ್ರ ಗೃಹ & ಸಹಕಾರ ಸಚಿವ ಅಮಿತ್ ಶಾ ತಪ್ಪೇನೂ ಹೇಳಿಲ್ಲ. ನಿಮ್ಮ ರಾಜ್ಯದಲ್ಲಿ ನಿಮ್ಮ ಭಾಷೆ ಇರಲಿ ಎಂದು ಶಾ ಹೇಳಿದ್ದಾರೆ. ರಾಷ್ಟ್ರೀಯವಾಗಿ ಇಂಗ್ಲಿಷ್ ಬದಲು ಹಿಂದಿ ಬಳಸಿ ಅಂದಿದ್ದಾರೆ. ಅಮಿತ್ ಶಾ ಹೇಳಿದರು ಎಂದು ವಿರೋಧ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈ ಹಿಂದೆ ಸಾಂಕ್ರಾಮಿಕ ರೋಗ ಬಂದಾಗ 5 ಕೋಟಿ ಜನ ಸಾವನ್ನಪ್ಪಿದ್ದರು. 5 ಕೋಟಿ ಜನರ ಪೈಕಿ ಹಸಿವಿನಿಂದ 1.5 ಕೋಟಿ ಜನ ಸತ್ತಿದ್ದರು. ಕೊವಿಡ್ ಸಂಕಷ್ಟ ಕಾಲದಲ್ಲಿ ಒಬ್ಬರೂ ಹಸಿವಿನಿಂದ ಸಾಯಲಿಲ್ಲ. ಇದು ಈ ದೇಶದ ಸಾಧನೆಯಾಗಿದೆ. ಒಂದು ರಾಷ್ಟ್ರ ಒಂದು ಚುನಾವಣೆಗೆ ಹಲವು ಪಕ್ಷಗಳ ವಿರೋಧವಿದೆ. ನಮ್ಮ ದೇಶದಲ್ಲಿ ಎಲ್ಲಾ ಇದ್ದರೂ ಅಭಿವೃದ್ಧಿ ಶೀಲ ರಾಷ್ಟ್ರವಾಗಿದೆ. ನಮ್ಮ ರಾಷ್ಟ್ರ ಈ ಶತಮಾನದ ರಾಷ್ಟ್ರವಾಗಬೇಕು. ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ಆದರೆ ಮಾತ್ರ ಸಾಧ್ಯವಿದೆ.
ಇದನ್ನೂ ಓದಿ:
Air Coolers below Rs 5,000: ಈ ಬೇಸಿಗೆಯಲ್ಲಿ ಕೇವಲ 5,000 ರೂ. ಒಳಗೆ ಬೆಸ್ಟ್ ಕೂಲರ್ ಖರೀದಿಸಿ ಕೂಲ್ ಆಗಿರಿ