Wheeling menace: ಬೆಂಗಳೂರಿನ ಗೋರಿಪಾಳ್ಯದಲ್ಲಿ ವೀಲಿಂಗ್ ಶೋಕಿ; ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಗುದ್ದಿದ ಪುಂಡರು
Wheeling: ಬೆಂಗಳೂರಿನ ಗೋರಿಪಾಳ್ಯದ ನರಸಿಂಹ ಸ್ವಾಮಿ ದೇವಾಲಯ ರಸ್ತೆಯಲ್ಲಿ ಕಳೆದ ಬುಧವಾರ ಮಧ್ಯಾಹ್ನ ಪುಂಡರು ವಿಲ್ಹಿಂಗ್ ಶೋಕಿ ಮಡುತ್ತಾ, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ವಾಹನ ಸಮೇತ ಗುದ್ದಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಪುಂಡರ ವೀಲಿಂಗ್ ಹಾವಳಿ (Wheeling menace) ಯಾವುದೇ ಅಂಕುಶವಿಲ್ಲದೆ ಮುಂದುವರಿದಿದೆ! ಜೊತೆಗೆ ಅನಾಹುತಗಳಿಗೂ ಕಾರಣವಾಗುತ್ತಿದೆ. ಬೆಂಗಳೂರು ಪೊಲೀಸರು ಎಷ್ಟೇ ನಿಗಾ ವಹಿಸಿದರು ವೀಲಿಂಗ್ ಪುಂಡರ ಹಾವಳಿಗೆ ಲಗಾಮು ಹಾಕಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಗೋರಿಪಾಳ್ಯದ (Goripalya) ನರಸಿಂಹ ಸ್ವಾಮಿ ದೇವಾಲಯ ರಸ್ತೆಯಲ್ಲಿ ಕಳೆದ ಬುಧವಾರ ಮಧ್ಯಾಹ್ನ ಇಂತಹುದೇ ಅನಾಹುತಕಾರಿ ಘಟನೆ ನಡೆದಿದೆ.
ಇಬ್ಬರು ಪುಂಡರು ವೀಲಿಂಗ್ ಶೋಕಿ ಮಡುತ್ತಾ, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ (woman) ವಾಹನ ಸಮೇತ ಗುದ್ದಿದ್ದಾರೆ. ವೀಲಿಂಗ್ ಮಾಡಲು ಹೋಗಿ ಮಹಿಳೆಯ ಮೇಲೆ ಬೈಕ್ ಬೀಳಿಸಿ ಅನಾಹುತ ಮಾಡಿದ್ದಾರೆ. ಮಹಿಳೆಯ ತಲೆ ಮತ್ತು ಬೆನ್ನಿಗೆ ಪೆಟ್ಟು ಬಿದ್ದಿದೆ. ಮಹಿಳೆ ಮೇಲೆ ವೀಲಿಂಗ್ ಮಾಡುತ್ತ ಹೋಗಿ ಬೈಕ್ ಸವಾರರು ಬಿದ್ದಿದ್ದಾರೆ. ಆದರೆ ಮಹಿಳೆಗೆ ತಕ್ಷಣ ಆರೈಕೆ ಮಾಡದೆ, ಕ್ಷಣಾರ್ಧದಲ್ಲಿ, ಜನ ಗಲಾಟೆ ಮಾಡುತ್ತಾರೆ ಅನ್ನೋ ಭಯದಿಂದ ಬೈಕ್ ಸಮೇತ ಏಸ್ಕೇಪ್ ಆಗಿದ್ದಾರೆ. ಕೊನೆಗೆ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಭಟ್ಕಳದಲ್ಲಿ ಶುಕ್ರವಾರ ರಾತ್ರಿ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕರಿಂದ ಇಬ್ಬರ ಮೇಲೆ ಮೊಟ್ಟೆ ಎಸೆದು ದುಷ್ಕೃತ್ಯ ಭಟ್ಕಳದಲ್ಲಿ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕರು ನಿನ್ನೆ ಶುಕ್ರವಾರ ರಾತ್ರಿ 9.30 ಹಾಗೂ 9.45ರ ಸಮಯದಲ್ಲಿ ಇಬ್ಬರು ಸಾರ್ವಜನಿಕರ ಮೇಲೆ ಮೊಟ್ಟೆ ಎಸೆದಿದ್ದಾರೆ. ಭಟ್ಕಳದ ಬಂದರು ಪ್ರದೇಶದ ನಿವಾಸಿಗಳಾದ ಸುಮಾರು 17 ವರ್ಷ ಪ್ರಾಯದ 6 ಮಂದಿ ಯುವಕರಿಂದ ಈ ಕುಕೃತ್ಯ ನಡೆದಿದೆ ಎನ್ನಲಾಗಿದೆ. ಮೂರು ಪ್ರತ್ಯೇಕ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ಬಾಲಕರು ಕೃತ್ಯವೆಸಗಿದ್ದಾರೆ. ಭಟ್ಕಳ ಪುರವರ್ಗದ ಮಂಜುನಾಥ್ (29) ಹಾಗೂ ಹನುಮಾನ್ ನಗರದ ಕೃಷ್ಣ (50) ಎಂಬುವವರ ಮೇಲೆ ಮೊಟ್ಟೆ ಎಸೆದಿದ್ದಾರೆ.
ಪಿಯುಸಿ ಪರೀಕ್ಷೆ ಬಳಿಕ ಉಳಿದ ಮೂವರು ಆರೋಪಿಗಳ ಅರೆಸ್ಟ್: ಮಂಜುನಾಥ್ ಕೂಲಿ ಕೆಲಸ ಮಾಡುತ್ತಿದ್ದರೆ, ಕೃಷ್ಣಾ ರಿಕ್ಷಾ ಚಾಲಕರಾಗಿದ್ದಾರೆ. ರಾತ್ರಿ 9.30ರಲ್ಲಿ ಮೊದಲು ಕೃಷ್ಣ ಎದೆಯ ಮೇಲೆ ಮೊಟ್ಟೆ ಬಿಸಾಕಿದ್ದ ಆರೋಪಿಗಳು, ಬಳಿಕ 9.45ರ ಸುಮಾರಿಗೆ ಮಂಜುನಾಥ್ ಅವರನ್ನು ಅವಾಚ್ಯವಾಗಿ ನಿಂದಿಸಿ ಕೈ ಹಾಗೂ ಎಡಕಾಲಿನ ತೊಡೆಯ ಮೇಲೆ ಮೊಟ್ಟೆ ಎಸೆದಿದ್ದಾರೆ ಇದೇ ಆರೋಪಿಗಳು. ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ವೇಳೆ ಜನರ ಕೈಗೆ ಸಿಕ್ಕಿದ ಓರ್ವ ಹುಡುಗ ಅಪ್ರಾಪ್ತ ವಯಸ್ಸಿನವ. ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳ ಪೊಲೀಸರು ಈಗಾಗಲೇ ಮೂರು ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಪಿಯುಸಿ ಪರೀಕ್ಷೆಯ ಬಳಿಕ ಉಳಿದ ಮೂವರನ್ನು ವಶಕ್ಕೆ ಪಡೆಯುವುದಾಗಿ ಭಟ್ಕಳ ಪೊಲೀಸರು ತಿಳಿಸಿದ್ದಾರೆ. ಮೊಟ್ಟೆ ಎಸೆಯುವ ಹಿಂದೆ ಯುವಕರ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದೂ ಓದಿ: ಮುಸ್ಲಿಮರ ವಿರುದ್ಧ ಹಿಂದೂ ಕಾರ್ಯಕರ್ತರ ಅಭಿಯಾನಗಳಿಂದ ಬೇಸತ್ತ ವ್ಯಕ್ತಿಯಿಂದ ಆತ್ಮಹತ್ಯೆ ಬೆದರಿಕೆ!
ಇದೂ ಓದಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಲು ಒನ್ ನೇಷನ್ – ಒನ್ ಎಲೆಕ್ಷನ್ ಅಗತ್ಯ; ಪ್ರಹ್ಲಾದ್ ಜೋಶಿ
Published On - 3:49 pm, Sat, 9 April 22