AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂವನ್ನೇ ಹೊದ್ದು ನಿಂತ ಮರಗಳು; ರಂಗುರಂಗಾಗಿರುವ ನಮ್ಮ ಬೆಂಗಳೂರಿನ ಅಂದ ನೋಡಲು ಎರಡು ಕಣ್ಣು ಸಾಲದು!

Bengaluru in Springs: ಉದ್ಯಾನ ನಗರಿಯ ಮರಗಿಡಗಳಿಗೆ ಈಗ ವಸಂತದ ಸಂಭ್ರಮ. ಹೂವನ್ನು ಹೊದ್ದು ನಿಂತಿರುವ ಮರಗಳು ಬೆಂಗಳೂರಿನ ಬೀದಿಗಳನ್ನು ರಂಗುರಂಗಾಗಿಸಿವೆ. ಇಂತಹ ಹೂವಿನ ಮರಗಳಿರುವ ಬೀದಿಗಳನ್ನು ಜನರು ಹೆಚ್ಚಾಗಿ ದಕ್ಷಿಣ ಕೊರಿಯಾ, ಜಪಾನ್​ನಂತಹ ದೇಶಗಳಲ್ಲಿ ನೋಡಿರುತ್ತಾರೆ. ಬೆಂಗಳೂರು ಅವ್ಯಾವುದಕ್ಕೂ ಕಡಿಮೆಯಿಲ್ಲ.

ಹೂವನ್ನೇ ಹೊದ್ದು ನಿಂತ ಮರಗಳು; ರಂಗುರಂಗಾಗಿರುವ ನಮ್ಮ ಬೆಂಗಳೂರಿನ ಅಂದ ನೋಡಲು ಎರಡು ಕಣ್ಣು ಸಾಲದು!
ವಸಂತ ಕಾಲದಲ್ಲಿ ಬೆಂಗಳೂರು (ಸಂಗ್ರಹ ಚಿತ್ರ)
TV9 Web
| Edited By: |

Updated on: Apr 09, 2022 | 12:25 PM

Share

ಜನರು ಪ್ರಕೃತಿ ಸೌಂದರ್ಯವನ್ನು ಅರಸಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅದರಲ್ಲೂ ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿರುವವರು ವಾರಾಂತ್ಯದಲ್ಲಿ ಹಲವು ಪ್ರದೇಶಗಳಿಗೆ ತೆರಳುತ್ತಾರೆ. ಆದರೆ ಈ ವಸಂತಕಾಲದಲ್ಲಿ ಬೆಂಗಳೂರು ನಗರ ಅಕ್ಷರಶಃ ಸ್ವರ್ಗವೇ ಆಗಿದೆ. ಹೌದು. ಉದ್ಯಾನ ನಗರಿಯ ಮರಗಿಡಗಳಿಗೆ ಈಗ ವಸಂತದ ಸಂಭ್ರಮ. ಹೂವನ್ನು ಹೊದ್ದು ನಿಂತಿರುವ ಮರಗಳು ಬೆಂಗಳೂರಿನ ಬೀದಿಗಳನ್ನು ರಂಗುರಂಗಾಗಿಸಿವೆ. ಇಂತಹ ಹೂವಿನ ಮರಗಳಿರುವ ಬೀದಿಗಳನ್ನು ಜನರು ಹೆಚ್ಚಾಗಿ ದಕ್ಷಿಣ ಕೊರಿಯಾ, ಜಪಾನ್​ನಂತಹ ದೇಶಗಳಲ್ಲಿ ನೋಡಿರುತ್ತಾರೆ. ಬೆಂಗಳೂರು ಅವ್ಯಾವುದಕ್ಕೂ ಕಡಿಮೆಯಿಲ್ಲ. ಬೀಸುವ ಗಾಳಿಗೆ ಉದುರುವ ಹೂವಿನ ಪಕಳೆಗಳು ಜನರಿಗೆ ಹಿಮವನ್ನು ನೆನಪಿಸಲೂ ಸಾಕು. ಕಾರಣ, ಅಂತಹ ವಾತಾವರಣವನ್ನು ಜನರಿಗೆ ನೀಡುತ್ತಿದೆ ‘ನಮ್ಮ ಬೆಂಗಳೂರು’ (Bengaluru). ಹೂವುಗಳು ಸಾಮಾನ್ಯವಾಗಿ ಗುಲಾಬಿ ಬಣ್ಣದ ವಿವಿಧ ಛಾಯೆಗಳಲ್ಲಿ ಕಂಡುಬರುತ್ತವೆ. ನೇರಳೆ ಬಣ್ಣದ ಹೂವಿನ- ಟಬೆಬುಯಾ ರೋಸಿಯಾ (Tabebuia Rosea) ಎಂಬ ನಿಯೋಟ್ರೋಪಿಕಲ್ ಮರ ಅರಳಿದೆ. ಇದನ್ನು ‘ಪಿಂಕ್ ಪೌಯಿ’ ಮತ್ತು ‘ರೋಸಿ ಟ್ರಂಪೆಟ್ ಟ್ರೀ’ ಎಂದೂ ಕರೆಯಲಾಗುತ್ತದೆ. ಈ ಮರಗಳು 30 ಮೀ (98 ಅಡಿ) ವರೆಗೆ ಬೆಳೆಯುತ್ತವೆ. ಈ ಮರಗಳು ವಸಂತ ಕಾಲವಾದ್ದರಿಂದ ಈಗ ಭಾರತದಲ್ಲಿ ಅರಳುತ್ತಿವೆ.

ಮರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ:

ಹಿಂದಿಯಲ್ಲಿ ಇದನ್ನು ಹೆಚ್ಚಾಗಿ ‘ಬಸಂತ್ ರಾಣಿ’ ಎಂದು ಕರೆಯಲಾಗುತ್ತದೆ. ಟಬೆಬುಯಾ ರೋಸಿಯಾ ಸಸ್ಯಗಳು ಶೀಘ್ರವಾಗಿ ಬೆಳೆಯುತ್ತವೆ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್​ನಲ್ಲಿ ಸಾಮಾನ್ಯವಾಗಿ ಹೂಬಿಡುತ್ತವೆ. ಈ ಮರಗಳು ಬೆಚ್ಚಗಿನ ಮತ್ತು ಶುಷ್ಕ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಸಸ್ಯಗಳು 2 ರಿಂದ 3 ವರ್ಷಗಳಲ್ಲಿ ಹೂವುಗಳನ್ನು ಬಿಡಲು ಪ್ರಾರಂಭಿಸುತ್ತವೆ. ವಸಂತ ಕಾಲದಲ್ಲಿ ಹೂ ಬಿಡುವ ಇವುಗಳ ಎಲೆಗಳು ಚಳಿಗಾಲದಲ್ಲಿ ಉದುರುತ್ತವೆ.

ಬೆಂಗಳೂರಿಗರಿಗೆ ಈ ಮರಗಳ ಪ್ರಾಮುಖ್ಯತೆ ಅರಿವಾಗಿರುತ್ತದೆ. ಕಾರಣ, ಇವುಗಳು ರಸ್ತೆಬದಿಗೆ ಉತ್ತಮ ಮರಗಳಾಗಿದ್ದು, ನೆರಳನ್ನು ನೀಡುತ್ತವೆ. ಜತೆಗೆ ನಗರಕ್ಕೆ ಅಂದವನ್ನೂ ನೀಡುತ್ತವೆ. ಪರಿಸರದ ದೃಷ್ಟಿಯಿಂದ ಮಾಲಿನ್ಯ ಭರಿತ ನಗರಗಳಿಗೆ ಇದರ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳಬೇಕಿಲ್ಲವಲ್ಲ.. ಉದ್ಯಾನಗಳಲ್ಲಿ ಇವು ಮತ್ತಷ್ಟು ವಿಶಾಲವಾಗಿ ಬೆಳೆಯುತ್ತವೆ.

ಬೆಂಗಳೂರು ನಗರ ಈಗ ಹೇಗಿದೆ? ಇಲ್ಲಿವೆ ನೋಡಿ ಚಿತ್ರಗಳು

ಹಿಮವನ್ನು ನೆನಪಿಸುವ ಹೂವುಗಳು; ವಿಡಿಯೋ ಇಲ್ಲಿದೆ:

ಟಬೆಬುಯಾ ರೋಸಿಯಾ ಬೆಂಗಳೂರಿನ ಮೂಲ ಮರವೆ?

ಇದು ಬೆಂಗಳೂರಿನ ಮೂಲ ಮರವಲ್ಲ. ಬ್ರಿಟಿಷರಿಂದ ಭಾರತಕ್ಕೆ ಆಗಮಿಸಿದ ಇವುಗಳು, ಕಾಲೋನಿಗಳಲ್ಲಿ ಅಂದಕ್ಕಾಗಿ ನೆಡಲಾಗುತ್ತಿತ್ತು. ಇದೀಗ ಇವು ಬೆಂಗಳೂರಿನವೇ ಆಗಿವೆ. ಜಪಾನ್​ನಲ್ಲಿ ‘ಚೆರ್ರಿ’ ಮರಗಳು ಹೀಗೆಯೇ ಇವೆ. ಅವುಗಳೊಂದಿಗೆ ಬೆಂಗಳೂರಿನ ಈ ಮರಗಳನ್ನು ಕೂಡ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್​ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು

Health Tips : ಸುಸ್ಥಿರ ಆಹಾರ ಪದ್ಧತಿಗಳಿಂದ ಈ ಎಲ್ಲ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?