ಕೊರೊನಾ ಮೂರನೇ ಅಲೆಯ ಆತಂಕದ ನಡುವೆಯೂ ಶಾಲೆ ಓಪನ್; ಇಂದೇ ನಿರ್ಧಾರವಾಗುತ್ತೆ ಶಾಲೆಗಳ ಭವಿಷ್ಯ

| Updated By: preethi shettigar

Updated on: Aug 14, 2021 | 8:36 AM

ತಜ್ಞರ ಸಲಹೆ ಆಧರಿಸಿ ಶಾಲೆ ತೆರೆಯುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇಂದು ತಜ್ಞರು ಒಪ್ಪಿಗೆ ನೀಡಿದರೆ 9 ರಿಂದ 12ನೇ ತರಗತಿಗಳ ಭೌತಿಕ ತರಗತಿ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ.

ಕೊರೊನಾ ಮೂರನೇ ಅಲೆಯ ಆತಂಕದ ನಡುವೆಯೂ ಶಾಲೆ ಓಪನ್; ಇಂದೇ ನಿರ್ಧಾರವಾಗುತ್ತೆ ಶಾಲೆಗಳ ಭವಿಷ್ಯ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಶಾಲಾ ಕಾಲೇಜುಗಳು ಆಗಸ್ಟ್ 23 ರಿಂದ ಆರಂಭ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಕೊವಿಡ್ ನಿರ್ವಹಣೆ ಕುರಿತು ಪರಿಣಿತರ ಜತೆ ಸಭೆ ನಡೆಸಿದ ನಂತರ ತಿಳಿಸಿದ್ದರು. ಶಾಲಾ-ಕಾಲೇಜುಗಳು ಆಗಸ್ಟ್‌ 23 ರಿಂದ ಆರಂಭ ಆಗಲಿದೆ. 9, 10, 12ನೇ ತರಗತಿಗಳು ಆರಂಭವಾಗಲಿವೆ. ನಂತರ 1 ರಿಂದ 8 ರವರೆಗಿನ ಶಾಲೆಗಳ ಆರಂಭದ (School Opening) ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇಂದು ಅಂತಿಮವಾಗಿ ಶಾಲೆ ಆರಂಭದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಹತ್ವ ಸಭೆ ನಡೆಸಲಿದ್ದಾರೆ.

ತಜ್ಞರ ಸಲಹೆ ಆಧರಿಸಿ ಶಾಲೆ ತೆರೆಯುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇಂದು ತಜ್ಞರು ಒಪ್ಪಿಗೆ ನೀಡಿದರೆ 9 ರಿಂದ 12ನೇ ತರಗತಿಗಳ ಭೌತಿಕ ತರಗತಿ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 9 ರಿಂದ 12ನೇ ತರಗತಿ ಪ್ರಾರಂಭ ಮಾಡಲಿದ್ದು, ಸಾಧಕ‌ ಬಾಧಕಗಳನ್ನು ಆಧರಿಸಿ ಸೆಪ್ಟೆಂಬರ್​ನಲ್ಲಿ 1 ರಿಂದ 8ನೇ ತರಗತಿ ಪ್ರಾರಂಭ ಮಾಡುವ ಸಾಧ್ಯತೆ ಇದೆ.

ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರ ಹಿಂದೇಟು
ಸಿಲಿಕಾನ್ ಸಿಟಿ ಸೇರಿದಂತೆ ಹಲವಡೆ ಕೊರೊನಾ ಏರಿಕೆ ಹಿನ್ನಲೆ, ಮೂರನೇ ಅಲೆಯ ಆತಂಕದಲ್ಲಿ ಶಾಲೆ ಬೇಕಾ ಎಂದು ಪೋಷಕರು ಒಂದು ಕಡೆ ಒತ್ತಡ ಹೇರುತ್ತಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಸರ್ಕಾರ ಈಗ ಶಾಲೆಗಳ ಆರಂಭದ ಸಾಹಸಕ್ಕೆ ಕೈಹಾಕಿದೆ. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಅಪಾಯ ಎಂದು ಗೊತ್ತಿದ್ದು, ಶಾಲೆ ಆರಂಭ ಸರಿನಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಲೆ ಆರಂಭಕ್ಕೆ ಮಾರ್ಗಸೂಚಿ ಏನಿರುತ್ತೆ ?
ಕಳೆದ ವರ್ಷದ ಮಾರ್ಗಸೂಚಿಯೇ ಈ ವರ್ಷವು ಜಾರಿ ಮಾಡುವ ಸಾಧ್ಯತೆ ಇದೆ ಆ ಪ್ರಕಾರ,
1.. ಶಾಲೆ, ಕಾಲೇಜು ಆವಾರಣದಲ್ಲಿ ಸಾಮಾಜಿಕ ಆಂತರ ಕಡ್ಡಾಯ
2. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಾಸ್ಕ್ ಕಡ್ಡಾಯ
3. ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ತರಬೇಕು
4. ವಿದ್ಯಾರ್ಥಿಗೆ ಕೊವಿಡ್ ಲಕ್ಷಣಗಳಿಲ್ಲವೆಂದು ದೃಢೀಕರಿಸಬೇಕು
5. ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿರುವ 72 ಗಂಟೆಗಳ ಅಂತರದಲ್ಲಿ ಕೊವಿಡ್ ನೆಗೇಟಿವ್ ವರದಿಯನ್ನು ಸಲ್ಲಿಸಬೇಕು
6. ಶಾಲೆ-ಕಾಲೇಜಿಗೆ ಹಾಜರಾತಿ ಕಡ್ಡಾಯವಲ್ಲ
7. ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಆನ್​ಲೈನ್​, ಯುಟ್ಯೂಬ್ ಚಾನೆಲ್ ಮತ್ತು ಇತರ ಮೂಲಗಳಿಂದಲೂ ಅಭ್ಯಾಸಕ್ಕೆ ಅವಕಾಶ
8. ಶೇ.50 ರಷ್ಟು ಮಾತ್ರ ಶಾಲೆಗಳಲ್ಲಿ ವಿದ್ಯಾರ್ಥಿಗಳ ತರಗತಿಗೆ ಅವಕಾಶ
9. ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ
10. ಬ್ಯಾಚ್ ಮಾದರಿಯಲ್ಲಿ ತರಗತಿ ಭೋದನೆ
11. ಶಿಕ್ಷಕ ಹಾಗೂ ಶಾಲಾ ಸಿಬ್ಬಂದಿಗೆ ಕಡ್ಡಾಯ ವ್ಯಾಕ್ಸಿನ್
12. ಸಾಮಾಜಿಕ ಅಂತರದ ದೃಷ್ಟಿಯಿಂದ ಕಲಿಕೆಗೆ ಶಾಲೆಯ ಎಲ್ಲಾ ಕೊಠಿಡಿಗಳ ಬಳಕೆ
13. ಶಾಲೆಗಳಲ್ಲಿ ಬಿಸಿ ನೀರು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ
14. ಹೊರಗಡೆಯ ಜನರಿಗೆ ಶಾಲಾ ಪ್ರವೇಶ ನಿರ್ಬಂಧ
15. ಶಾಲೆಯ ಸುತ್ತಮುತ್ತ ತಿಂಡಿ ವ್ಯಾಪರಕ್ಕೆ ನಿರ್ಬಂಧ ಸಾಧ್ಯತೆ
16. ಹೊರೊಂಗಣ ಆಟಕ್ಕಿಲ್ಲ ಅವಕಾಶ

ಇದನ್ನೂ ಓದಿ:

School Opening: 9, 10, 12ನೇ ತರಗತಿಗಳಿಗೆ ಶಾಲಾ ಕಾಲೇಜುಗಳು ಆಗಸ್ಟ್‌ 23ರಿಂದ ಆರಂಭ: ಬಸವರಾಜ ಬೊಮ್ಮಾಯಿ

School Reopen: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಪ್ರಾರಂಭದ ಕುರಿತು ಮಹತ್ವದ ಮಾಹಿತಿ ನೀಡಿದ ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್