AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lockdown: ನಿಯಂತ್ರಣಕ್ಕೆ ಬಾರದ ಕೊರೊನಾ; ಬೆಂಗಳೂರಿಗೆ ಭಾಗಶಃ ಬೀಗ ಹಾಕಲು ಬಹುತೇಕ ತಯಾರಿ – ಇಂದು ಸಿಎಂ ಸಭೆ

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನಲೆ ಇಂದು (ಆಗಸ್ಟ್​ 14) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಏರ್ಪಡಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ನಿಯಮಾವಳಿಗಳು ಅಗತ್ಯ ಎಂದು ತಿಳಿಯಲು ತಜ್ಞರ ಅಭಿಪ್ರಾಯ ಕೇಳಲಿದ್ದಾರೆ.

Lockdown: ನಿಯಂತ್ರಣಕ್ಕೆ ಬಾರದ ಕೊರೊನಾ; ಬೆಂಗಳೂರಿಗೆ ಭಾಗಶಃ ಬೀಗ ಹಾಕಲು ಬಹುತೇಕ ತಯಾರಿ - ಇಂದು ಸಿಎಂ ಸಭೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Skanda|

Updated on: Aug 14, 2021 | 7:16 AM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಭೀತಿ ಕಾಡುತ್ತಿದೆ. ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರು ಉಳಿದೆಡೆಗಿಂತ ತುಸು ಹೆಚ್ಚೇ ಅಪಾಯದಲ್ಲಿದೆ. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನಲೆ ಇಂದು (ಆಗಸ್ಟ್​ 14) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಏರ್ಪಡಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ನಿಯಮಾವಳಿಗಳು ಅಗತ್ಯ ಎಂದು ತಿಳಿಯಲು ತಜ್ಞರ ಅಭಿಪ್ರಾಯ ಕೇಳಲಿದ್ದಾರೆ. ಬೆಂಗಳೂರಿನಲ್ಲಿ ಮಕ್ಕಳಿಗೆ ಸೋಂಕು ಹಬ್ಬುತ್ತಿರುವ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಆತಂಕ ಎದುರಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮೂರನೇ ಅಲೆ ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ಏರಿಕೆಯಾಗುತ್ತಿರುವ ಸೋಂಕನ್ನು ಈಗಿನಿಂದಲೇ ಕಟ್ಟಿಹಾಕಲು ಸರ್ಕಾರ ಹೆಣಗಾಡುತ್ತಿದ್ದು, ಹಂತ ಹಂತವಾಗಿ ಕೊರೊನಾ ನಿಯಂತ್ರಣಕ್ಕೆ ಮುಂದಾಗುತ್ತಿದೆ.

ಆದರೆ, ಈ ಬಾರಿ ಏಕಾಏಕಿ ಲಾಕ್​ಡೌನ್ (Karnataka Lockdown) ಮಾಡದಿರಲು ಸರ್ಕಾರ ನಿರ್ಧರಿಸಿದಂತೆ ಕಾಣುತ್ತಿದ್ದು, ಹಂತ ಹಂತವಾಗಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡು ಪರಿಸ್ಥಿತಿ ಮೀತಿ ಮೀರುವಂತಿದ್ದಾಗ ಲಾಕ್​ಡೌನ್ (Lockdown) ಹೇರುವ ಸಾಧ್ಯತೆ ಇದೆ. ಸದ್ಯ ಬೆಂಗಳೂರಿನಲ್ಲಿ (Bengaluru) ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಪ್ರಮಾಣ 350ರಿಂದ450ರ ಆಸುಪಾಸಿನಲ್ಲಿದ್ದು, ಅದು ಎರಡು ಸಾವಿರಕ್ಕೆ ಏರಿಕೆಯಾದಲ್ಲಿ 7 ದಿನ ಲಾಕ್​ಡೌನ್ ಜಾರಿಯಾಗುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ (Corona Positivity Rate) ಶೇ. 0.57ರಷ್ಟು ಇದ್ದು, ಪ್ರತಿದಿನ 350 ರಿಂದ 450 ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಮಕ್ಕಳಿಗೆ ಸೋಂಕು ತಗುಲುವಿಕೆ ಶೇ.5ರಷ್ಟಿದೆ. ಅಂದರೆ ಸೊಂಕಿತರಾಗುವ 100 ಜನರ ಪೈಕಿ 5 ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಂದೊಮ್ಮೆ ನಿತ್ಯದ ಸೋಂಕಿನ ಪ್ರಮಾಣ 2 ಸಾವಿರದ ಗಡಿ ದಾಟಿದರೆ ಲಾಕ್​ಡೌನ್​ ಅನಿವಾರ್ಯವಾಗಲಿದೆ. ತಜ್ಞರ ಲೆಕ್ಕಾಚಾರದ ಪ್ರಕಾರ ಸೋಂಕಿತರ ಪ್ರಮಾಣ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಏರಿಕೆಯಾಗಲು ಕೇವಲ 15 ದಿನ ಮಾತ್ರ ತೆಗೆದುಕೊಳ್ಳಲಿದ್ದು, ನಂತರವೂ ಜನರ ಓಡಾಟಕ್ಕೆ ನಿರ್ಬಂಧ ವಿಧಿಸದೇ ಇದ್ದಲ್ಲಿ ಪರಿಸ್ಥಿತಿ ಕೈಮೀರುವ ಅಪಾಯವಿದೆ. ಹೀಗಾಗಿ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕೆ ಏರಿಕೆಯಾದರೆ ತಕ್ಷಣದಲ್ಲೇ ಲಾಕ್​ಡೌನ್​ ಅಸ್ತ್ರ ಪ್ರಯೋಗ ಮಾಡುವ ಚಿಂತನೆ ಇದೆ.

ಸದ್ಯ ಉಲ್ಬಣಗೊಂಡಿರುವ ಸೋಂಕು ತಡೆಹಿಡಿಯಲು ಲಾಕ್​ಡೌನ್ ಅನಿವಾರ್ಯ ಎನ್ನಲಾಗುತ್ತಿದೆಯಾದರೂ ಈವರೆಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಲಾಕ್​ಡೌನ್ ಮಾಡಿದರೂ ಮೊದಲು ಒಟ್ಟು ಏಳು ದಿನಗಳ‌ ಕಾಲ ಮಾಡುವ ಚಿಂತನೆಯಿದ್ದು, ಕೊರೊನಾ ಚೈನ್​ಲಿಂಕ್ ಬ್ರೇಕ್ ಮಾಡಲು ಏಳು ದಿನ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಲಾಕ್​ಡೌನ್ ಜಾರಿಯಾದರೆ ಅಗತ್ಯ ವಸ್ತುಗಳ‌ ಖರೀದಿಗೆ ಮಾತ್ರ ಅವಕಾಶ ನೀಡಬೇಕು. ಬೆಳಗ್ಗೆ 6 ರಿಂದ ಬೆಳಗ್ಗೆ 11 ಗಂಟೆವರೆಗೂ ಹಣ್ಣು, ತರಕಾರಿ, ಮಾಂಸ ಖರೀದಿಗೆ ಅವಕಾಶ ನೀಡಬೇಕು. ಉಳಿದಂತೆ ಬಸ್ ಓಡಾಟ, ವಾಹನಗಳ ಓಡಾಟ ಸಂಪೂರ್ಣ ಬಂದ್ ಮಾಡಬೇಕು. ರೈಲುಗಳ ಓಡಾಟದ ಬಗ್ಗೆ ಅಂತಿಮ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಕೊಟ್ಟಿರುವ ವರದಿ ಏನು? ಸದ್ಯಕ್ಕೆ ಸರ್ಕಾರ ಯಾವುದೇ ಲಾಕ್‌ಡೌನ್ ಆದೇಶ ಮಾಡಿಲ್ಲ. ಆದರೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಬಿಬಿಎಂಪಿ ಅಧಿಕಾರಿಗಳು ಲಾಕ್‌ಡೌನ್‌ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 0.57ರಷ್ಟು ಇದ್ದು, ಮುಂದಿನ ಒಂದು ವಾರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಪಾಸಿಟಿವಿಟಿ ಪ್ರಮಾಣ ಶೇ. 2 ಕ್ಕೆ ಏರಿಕೆಯಾದರೆ ತಜ್ಞರ ಶಿಫಾರಸು ಜಾರಿ ಮಾಡಬೇಕು ಎನ್ನಲಾಗಿದೆ.

ತಜ್ಞರ ಶಿಫಾರಸು ಏನು? ಪಾಸಿಟಿವಿಟಿ ರೇಟ್ ಶೇ. 2 ಇರುವ ಪ್ರದೇಶವನ್ನ ಮತ್ತೆ ಲಾಕ್‌ ಮಾಡಲು ಶಿಫಾರಸು ಮಾಡಲಾಗಿದೆ. ಆ ಜಿಲ್ಲೆಗಳಲ್ಲಿ ಬಾರ್, ಪಬ್, ಜಿಮ್, ಯೋಗಾ ಸೆಂಟರ್, ಸಿನಿಮಾ ಹಾಲ್, ದೇವಸ್ಥಾನ, ಕ್ಲಬ್ ಹೌಸ್​ಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. ಜುಲೈ 30 ರಂದು ನಡೆದ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ತಜ್ಞರು ಈ ನಿರ್ಧಾರಗಳನ್ನು ಪ್ರಕಟ ಮಾಡಲಾಗಿದೆ. ಬಸ್​ಗಳ ಓಡಾಟ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಇರಲಿ ನೈಟ್​ಕರ್ಫ್ಯೂ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಜಾರಿ ಮಾಡಬೇಕು. ವಿಕೇಂಡ್ ಕರ್ಫ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ತನಕ ಇರಬೇಕು ಎಂದಿದ್ದಾರೆ. ಜತೆಗೆ, ಈ ಬಗ್ಗೆ ಸಲಹೆ ನೀಡಿರುವ ಬಿಬಿಎಂಪಿ, ಸೀಲ್ ಡೌನ್ ಮಾಡುವ ಮೂಲಕ ಸೋಂಕು ತಡೆಯಲು ಸಲಹೆ ನೀಡಿದೆ. ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೆ ಸೂಚನೆ ನೀಡಿರುವ ತಜ್ಞರು. ವಿಕೇಂಡ್ ಕರ್ಫ್ಯೂ ಜತೆಗೆ ಕ್ವಾರಂಟೈನ್ ಅಸ್ತ್ರ ಪ್ರಯೋಗಿಸಲು ಸಲಹೆ ನೀಡಿದ್ದಾರೆ. ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲು ಸೂಚನೆ ಕೊಟ್ಟಿದ್ದು, ಹೋಮ್ ಐಸೋಲೇಶನ್ ಕಡಿಮೆ‌ ಮಾಡಿ ಟ್ರಯಾಸ್ ಸೆಂಟರ್​ಗೆ ಕರೆತರಲು ತಿಳಿಸಿದ್ದಾರೆ.

ಈ ನಿಯಮಗಳ ಜಾರಿಗೆ ಒತ್ತಾಯ – ಕಚೇರಿ, ಕೈಗಾರಿಕೆಗಳಲ್ಲಿ ಶೇ. 50 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಬೇಕು – ‎ಸಾರ್ವಜನಿಕ ಸಾರಿಗೆ ಶೇ. 50 ಮಾತ್ರ ಸೀಟ್ ಭರ್ತಿ – ಮದುವೆಗಳಿಗೆ 100 ಜನರ ಬದಲು 40 ಕ್ಕೆ ಸೀಮಿತಗೊಳಿಸಬೇಕು – ಅಂತಿಮ ಸಂಸ್ಕಾರ ಕಾರ್ಯಗಳಿಗೆ ಕೇವಲ 10 ಜನಕ್ಕೆ ಮಾತ್ರ ಅವಕಾಶ ಕೊಡಿ – ರೆಸಾರ್ಟ್ ಅಥವಾ ಪ್ರವಾಸಿ ತಾಣಗಳನ್ನ ಬಂದ್ ಮಾಡಬೇಕು – ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶ ನಿಷೇಧಿಸಬೇಕು – ರ್‍ಯಾಲಿ, ಸಾರ್ವಜನಿಕ ಸಮಾವೇಶ, ಬೃಹತ್ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು – ಪಬ್, ಬಾರ್, ಜಿಮ್, ಯೋಗ ಕೇಂದ್ರಗಳನ್ನ ಕ್ಲೋಸ್ ಮಾಡಬೇಕು – ಜನ ಸಂದಣೀಯ ಮಾರುಕಟ್ಟೆಗಳನ್ನ ಬಂದ್ ಮಾಡಬೇಕು

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಬಳಿಕ ಜಾರಿಯಾಗಲಿದೆ ಟಫ್ ರೂಲ್ಸ್, ಆಗಸ್ಟ್ 15ರ ಬಳಿಕ ಮತ್ತೆ ರಾಜ್ಯದಲ್ಲಿ ಲಾಕ್​ಡೌನ್? 

Delta Plus Variant: ಮುಂಬೈನಲ್ಲಿ ಡೆಲ್ಟಾ ಪ್ಲಸ್​ ಸೋಂಕಿಗೆ ಮೊದಲ ಬಲಿ; ಎರಡು ಡೋಸ್​ ಕೊರೊನಾ ಲಸಿಕೆ ಪಡೆದ ವೃದ್ಧೆ ಸಾವು

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು