ಸ್ವಾತಂತ್ರ್ಯ ದಿನಾಚರಣೆ ಬಳಿಕ ಜಾರಿಯಾಗಲಿದೆ ಟಫ್ ರೂಲ್ಸ್, ಆಗಸ್ಟ್ 15ರ ಬಳಿಕ ಮತ್ತೆ ರಾಜ್ಯದಲ್ಲಿ ಲಾಕ್ಡೌನ್?
Karnataka Lockdown: ಕರುನಾಡಿಗೆ ಕೊರೊನಾ 3ನೇ ಅಲೆಯ ಕಂಟಕ ಶುರುವಾಗಿದೆ. ಇದರ ನಡುವೆ ರಾಜ್ಯ ಲಾಕ್ಡೌನ್ ಆಗೋ ಸುದ್ದಿ ಹರಿದಾಡ್ತಿದೆ. ಆಗಸ್ಟ್ 15ರ ನಂತರ ವೀಕೆಂಡ್ ಕರ್ಫ್ಯೂ ಪಕ್ಕಾ ಆಗಿದ್ದು, ಮತ್ತೆ ರಾಜ್ಯಕ್ಕೆ ಬೀಗ ಹಾಕೋ ಸಾಧ್ಯತೆಗಳು ಹೆಚ್ಚಾಗಿವೆ. ಅದ್ರ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು: ಕಳೆದ ವರ್ಷ ಮಾರ್ಚ್ನಲ್ಲಿ ದೇಶದಲ್ಲಿ ಕೊರೊನಾ ವೈರಸ್ ಪತ್ತೆಯಾಗ್ತಿದ್ದಂತೆ ಇಡೀ ಭಾರತಕ್ಕೆ ಭಾರತವನ್ನೇ ಕಂಪ್ಲೀಟ್ ಲಾಕ್ ಮಾಡಲಾಗಿತ್ತು. ಇದಾದ ಬಳಿಕ ಹಂತ ಹಂತವಾಗಿ ಅನ್ಲಾಕ್ ಮಾಡಲಾಗಿತ್ತು. ಅನ್ಲಾಕ್ ಆಗ್ತಿದ್ದಂತೆ ಜನ ಕೊರೊನಾ ಹೋಗೇ ಬಿಡ್ತು ಅನ್ನೋ ರೇಂಜ್ಗೆ ಕೊವಿಡ್ ರೂಲ್ಸ್ ಬ್ರೇಕ್ ಮಾಡಿ ಮದುವೆ, ಮುಂಜಿ, ರಾಜಕೀಯ ಸಭೆ-ಸಮಾರಂಭಗಳು.. ಜಾತ್ರೆಗಳನ್ನ ಮಾಡಿದ್ರು.
ಆದ್ರೆ, ಯಾವಾಗ ಕೊರೊನಾ ಬಣ್ಣ ಬದಲಾಯಿಸಿ.. ಎರಡನೇ ಅವತಾರ ಎತ್ತಿ ಬಂದು ರಾಜ್ಯಕ್ಕೆ ಭರ್ಜರಿ ಆಘಾತ ಕೊಡ್ತಿದ್ದಂತೆ ಮತ್ತೆ ರಾಜ್ಯಕ್ಕೆ ಬೀಗ ಹಾಕಲಾಗಿತ್ತು. ಈಗ ಕರುನಾಡಿಗೆ ಕೊರೊನಾ 3ನೇ ಅಲೆ ಕಂಟಕ ಶುರುವಾಗ್ತಿದ್ದಂತೆ ಮತ್ತೆ ರಾಜ್ಯಕ್ಕೆ ಬೀಗ ಹಾಕೋಕೆ ಸರ್ಕಾರ ಚಿಂತನೆ ನಡೆಸಿದ್ದು.. ಆಗಸ್ಟ್ 15ರ ಬಳಿಕ ಮತ್ತೆ ಲಾಕ್ಡೌನ್ ಮಾಡ್ತಾರಾ ಅನ್ನೋ ಪ್ರಶ್ನೆ ಶುರುವಾಗಿದೆ.
ಆಗಸ್ಟ್ 15ರ ಬಳಿಕ ಮತ್ತೆ ರಾಜ್ಯಕ್ಕೆ ‘ಲಾಕ್’ ಪಕ್ಕಾ? ಆಗಸ್ಟ್ 15.. ಇಡೀ ದೇಶಕ್ಕೆ ದೇಶವೇ ಸ್ವಾತಂತ್ರ್ಯ ದಿನ ಆಚರಿಸೋ ಸಂಭ್ರಮದ ದಿನ. ಇಂತಾ ಸ್ವಾತಂತ್ರ್ಯ ದಿನ ಈ ಬಾರಿ ಭಾನುವಾರದಂದು ಬಂದಿದೆ. ಇದೇ ಕಾರಣಕ್ಕೆ ಜನ ಸಂಭ್ರಮದಿಂದ ಸ್ವಾತಂತ್ರ್ಯ ದಿನ ಆಚರಿಸಲಿ ಅಂತಾ ಈ ವಾರ ವೀಕೆಂಡ್ ಕರ್ಫ್ಯೂನಿಂದ ಸರ್ಕಾರ ಮುಕ್ತಿ ನೀಡಿದ್ದು.. ಆಗಸ್ಟ್ 15ರ ಬಳಿಕ ವೀಕೆಂಡ್ ಕರ್ಫ್ಯೂ ಜಾರಿಗೆ ತರೋ ಸಾಧ್ಯತೆ ಇದೆ. ಆದ್ರೆ, ಕಂದಾಯ ಸಚಿವ ಆರ್.ಅಶೋಕ್ ನೀಡಿರೋ ಒಂದೇ ಒಂದು ಸುಳಿವು ಆಗಸ್ಟ್ 15ರ ಬಳಿಕ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡೋ ಸಾಧ್ಯತೆ ಇದ್ಯಾ ಅನ್ನೋ ಪ್ರಶ್ನೆ ಏಳುವಂತೆ ಮಾಡಿದೆ.
ಶ್ರಾವಣ ಮಾಸದ ಸೋಮವಾರ ಮತ್ತು ಭೀಮನ ಅಮಾವಾಸ್ಯೆ ದಿನ ಜನ ದೇವಸ್ಥಾನಗಳಿಗೆ ಲಗ್ಗೆ ಇಟ್ಟಿದ್ರು. ಜೊತೆಗೆ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರ್ತಿವೆ. ಇದು ಸರ್ಕಾರ ಮತ್ತು ಅಧಿಕಾರಿಗಳ ಟೆನ್ಷನ್ ಹೆಚ್ಚಿಸಿದೆ. ಇದೇ ಕಾರಣಕ್ಕೆ ಶ್ರಾವಣ ಶನಿವಾರಗಳಂದ ದೇವಸ್ಥಾನಗಳಲ್ಲಿ ರಶ್ ಆಗದಂತೆ ತಡೆಯಲು ದೇವಸ್ಥಾನಗಳಿಗೆ ನಿರ್ಬಂಧ ಹೇರಲು ಚಿಂತನೆ ನಡೆಸಲಾಗ್ತಿದೆ ಅಂತಾ ಅಶೋಕ್ ಹೇಳಿದ್ದಾರೆ.
ದೇವಸ್ಥಾನಗಳಲ್ಲಿ ಜನರ ರಶ್ ತಪ್ಪಿಸಲು ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ. ಇದೇ ಕಾರಣಕ್ಕೆ ಕೊವಿಡ್ ನಿಯಮಗಳನ್ನ ಉಲ್ಲಂಘಿಸಿದ್ದಕ್ಕೆ ಬೆಂಗಳೂರಿನ ಗವಿಪುರದ ಬಂಡಿ ಮಾಂಕಾಳಮ್ಮ ದೇವಸ್ಥಾನಕ್ಕೆ ನೋಟೀಸ್ ಕೊಟ್ಟು, ದೇಗುಲಕ್ಕೆ ಬೀಗ ಹಾಕಿದ್ದಾರೆ. ಇದರ ನಡುವೆ ನಿನ್ನೆ ಬೆಂಗಳೂರು ಕೊವಿಡ್ ಉಸ್ತುವಾರಿ ಹೊತ್ತಿರುವ ಅಶೋಕ್, ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಕೊರೊನಾ ನಿಯಂತ್ರಣಕ್ಕೆ ಬೇಕಾದ ಕಠಿಣಾತಿ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲು ಅಶೋಕ್ ಸೂಚಿಸಿದ್ದಾರೆ.
ಸೋಂಕಿತರು ಪತ್ತೆಯಾದ್ರೆ ಅಪಾರ್ಟ್ಮೆಂಟ್ ಸೀಲ್ಡೌನ್! ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗ್ತಿರೋ ಹೊಸ ಸೋಂಕಿತರಲ್ಲಿ ಹೆಚ್ಚಿನವರು ಅಪಾರ್ಟ್ಮೆಂಟ್ ನಿವಾಸಿಗಳಾಗಿದ್ದಾರೆ. ಹೀಗಾಗಿ ಯಾವುದಾದ್ರೂ ಒಂದೇ ಅಪಾರ್ಟ್ಮೆಂಟ್ನಲ್ಲಿ ಮೂವರು ಸೋಂಕಿತರು ಪತ್ತೆಯಾದ್ರೆ, ಅಂತಾ ಅಪಾರ್ಟ್ಮೆಂಟ್ಗಳನ್ನ ಸೀಲ್ಡೌನ್ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಅಪಾರ್ಟ್ಮೆಂಟ್ನ ಸ್ವಿಮ್ಮಿಂಗ್ ಪೂಲ್, ಜಿಮ್, ಪಾರ್ಕ್ಗಳನ್ನ ಕ್ಲೋಸ್ ಮಾಡಲು ಡಿಸೈಡ್ ಮಾಡಲಾಗಿದೆ.
ಒಟ್ನಲ್ಲಿ, ಬೆಂಗಳೂರಿನಲ್ಲಿ ಕೊರೊನಾ 3ನೇ ಅಲೆ ತಡೆಗೆ ಬಿಬಿಎಂಪಿ ಎಲ್ಲಾ ಪ್ಲ್ಯಾನ್ ಮಾಡಿದೆ. ಅವಶ್ಯವಾದ್ರೆ ವೀಕೆಂಡ್ ಕರ್ಫ್ಯೂ ಜಾರಿಗೆ ಬರಲಿದೆ. ಸದ್ಯಕ್ಕೆ ಸೋಂಕಿತರ ಸಂಖ್ಯೆ ಮೂರು ವಲಯಗಳಲ್ಲಿ ಹೆಚ್ಚಿದ್ದು, ಬೆಂಗಳೂರಿನ ಪ್ರತಿ ಮನೆಗೂ ವೈದ್ಯರು ಭೇಟಿ ಕೊಟ್ಟು ತಪಾಸಣೆ ನಡೆಸಲು ಬಿಬಿಎಂಪಿ ಸೂಚನೆ ನೀಡಿದೆ. ಸರ್ಕಾರ ಮತ್ತು ಬಿಬಿಎಂಪಿ ಕೊರೊನಾ 3ನೇ ಅಲೆ ತಡೆಗೆ ನಡೆಸ್ತಿರೋ ಕ್ರಮಗಳು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅಂತಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಕೊರೊನಾ ಲಾಕ್ಡೌನ್ನಿಂದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ; ಮುದ್ದಿನ ಸಾಕುಪ್ರಾಣಿಗಳೀಗ ಮಾಲೀಕರಿಗೆ ಭಾರ