ಸ್ವಂತ ಕರ್ಚಿನಲ್ಲಿ ಆಸ್ಪತ್ರೆ ನಿರ್ಮಿಸಿದ ಹಿರಿಯ ನಟಿ ಲೀಲಾವತಿ; ಸಿಎಂ ಬೊಮ್ಮಾಯಿರಿಂದ ಸೆ. 28ರಂದು ಉದ್ಘಾಟನೆ

TV9 Web
| Updated By: ವಿವೇಕ ಬಿರಾದಾರ

Updated on:Sep 26, 2022 | 11:04 PM

ಹಿರಿಯ ನಟಿ ಲೀಲಾವತಿ ಸ್ವಂತ ಖರ್ಚಿನಲ್ಲಿ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ನಾಡಿದ್ದು (ಸೆ. 28) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.

ಬೆಂಗಳೂರು: ಹಿರಿಯ ನಟಿ ಲೀಲಾವತಿ (Actress leelavathi) ಸ್ವಂತ ಖರ್ಚಿನಲ್ಲಿ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ನಾಡಿದ್ದು (ಸೆ. 28) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಉದ್ಘಾಟಿಸಲಿದ್ದಾರೆ. ಹಿರಿಯ ನಟಿ ಲೀಲಾವತಿ ಅವರು ಚೆನ್ನೈನಲ್ಲಿನ ಜಮೀನು ಮಾರಿ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಈ ಹಿಂದೆ ಇದೇ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸಚಿವ ಉಮೇಶ್ ಕತ್ತಿ ನಿಧನದಿಂದ ಕಾರ್ಯಕ್ರಮ ರದ್ದಾಗಿತ್ತು. ಉದ್ಘಟನಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಭಾಗಿಯಾಗಲಿದ್ದಾರೆ.

Published on: Sep 26, 2022 10:32 PM