Karnataka Budget 2022; ಬಜೆಟ್​ನಲ್ಲಿ ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

| Updated By: sandhya thejappa

Updated on: Mar 04, 2022 | 2:49 PM

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್​ನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್​ನಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಬೆಂಗಳೂರು ಮೌಲ ಸೌಕರ್ಯಕ್ಕೆ 3 ವರ್ಷದಲ್ಲಿ 6,000 ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿದೆ.

Karnataka Budget 2022; ಬಜೆಟ್​ನಲ್ಲಿ ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ರಾಜ್ಯಾದ್ಯಂತ ಹೆಚ್ಚು ಸಂಚಲನ ಮೂಡಿಸಿದ ಮೇಕೆದಾಟು ಯೋಜನೆಗೆ (Mekedatu) ರಾಜ್ಯ ಸರ್ಕಾರ 2022ನೇ ಸಾಲಿನಲ್ಲಿ ಭಾರೀ ಮೊತ್ತದ ಅನುದಾನ ಘೋಷಣೆ ಮಾಡಿದೆ. ಮೇಕೆದಾಟು ಯೋಜನೆಗೆ 1,000 ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ., ಕೃಷ್ಣ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂ. ಹಾಗೂ ಕಳಸಾ ಬಂಡೂರಿ ಯೋಜನೆಗೆ ಸಾವಿರ ಕೋಟಿ ರೂ. ನಿಯೋಜನೆ ಮಾಡುವುದಾಗಿ ಸಿಎಂ ಬೊಮ್ಮಾಯಿ (CM Bommai) ಘೋಷಿಸಿದ್ದಾರೆ.

PMKSY-AIBPಯಡಿ ಸನ್ನತಿ ಏತನೀರಾವರಿ ಯೋಜನೆ, ಕೃಷ್ಣಾ ಮೇಲ್ದಂಡೆ 1, 2ನೇ ಹಂತ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ, ರಾಜ್ಯದ 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗುತ್ತದೆ. 8,771 ಕೋಟಿ ರೂ.ನ ಹೊಸ ನೀರಾವರಿ ಯೋಜನೆ ಮಾಡಲಾಗುವುದು. ಹೊಸ ಯೋಜನೆಗಳಿಗೆ ರೂಪರೇಷೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನದಿಗಳಿಗೆ ನುಗ್ಗುವ ಉಪ್ಪು ನೀರು ತಡೆಗಟ್ಟಲು ಯೋಜನೆಯನ್ನೂ ಜಾರಿ ಮಾಡಲಾಗುತ್ತದೆ. ಖಾರ್‌ಲ್ಯಾಂಡ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ರಾಜ್ಯದ ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಅನುದಾನಕ್ಕೆ ನಿರ್ಧರಿಸಿದ್ದು, ಪ್ರವಾಹದಿಂದ ಹಾನಿಯಾದ ಕೆರೆಗಳಿಗೆ 200 ಕೋಟಿ ರೂ. ನೀಡಲಾಗುತ್ತದೆ. ಕಾಳಿ ನದಿಯಿಂದ ನೀರು ಬಳಸಿಕೊಂಡು 5 ಜಿಲ್ಲೆಗಳಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ 2,65,719.92 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಗಾತ್ರ ಕಳೆದ ಬಾರಿಗಿಂತ ಶೇಕಡಾ 7.7ರಷ್ಟು ಹೆಚ್ಚಳವಾಗಿದೆ. ‘ಜಲ ಜೀವನ್‌ ಮಿಷನ್’ ಅಡಿ 25 ಲಕ್ಷ ಮನೆಗೆ ನಲ್ಲಿ ನೀರು ನೀಡಲಾಗುತ್ತದೆ. 2022-23ರಲ್ಲಿ 7,000 ಕೋಟಿ ರೂ. ವೆಚ್ಚದಲ್ಲಿ ನಲ್ಲಿ ನೀರು ನೀಡಲಾಗುವುದು. ರಾಜ್ಯಾದ್ಯಂತ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕಕ್ಕೆ ಯೋಜನೆ ಮಾಡಲಾಗಿದೆ.

ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಪ್ರಾಧಾನ್ಯತೆ:
ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್​ನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್​ನಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಬೆಂಗಳೂರು ಮೌಲ ಸೌಕರ್ಯಕ್ಕೆ 3 ವರ್ಷದಲ್ಲಿ 6,000 ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ

ಪಾಕ್ ವಿರುದ್ಧದ ಸರಣಿಯ ನಡುವೆ ಆಸೀಸ್​ಗೆ ಆಘಾತ; ದಿಗ್ಗಜ ವಿಕೆಟ್ ಕೀಪರ್ ಹೃದಯಾಘಾತದಿಂದ ಸಾವು

Karnataka Budget 2022; ಬಜೆಟ್ನಲ್ಲಿ ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

Published On - 1:41 pm, Fri, 4 March 22