ಪಾಕ್ ವಿರುದ್ಧದ ಸರಣಿಯ ನಡುವೆ ಆಸೀಸ್​ಗೆ ಆಘಾತ; ದಿಗ್ಗಜ ವಿಕೆಟ್ ಕೀಪರ್ ಹೃದಯಾಘಾತದಿಂದ ಸಾವು

Rod Marsh: ಆಸ್ಟ್ರೇಲಿಯಾದ ಖ್ಯಾತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಡ್ ಮಾರ್ಷ್‌ ನಿಧನರಾಗಿದ್ದಾರೆ. ಈ ಮಾಜಿ ಆಸ್ಟ್ರೇಲಿಯಾ ವಿಕೆಟ್‌ಕೀಪರ್‌ಗೆ ಕಳೆದ ವಾರ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಹೃದಯಾಘಾತವಾಗಿತ್ತು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾಕ್ ವಿರುದ್ಧದ ಸರಣಿಯ ನಡುವೆ ಆಸೀಸ್​ಗೆ ಆಘಾತ; ದಿಗ್ಗಜ ವಿಕೆಟ್ ಕೀಪರ್ ಹೃದಯಾಘಾತದಿಂದ ಸಾವು
ರಾಡ್ ಮಾರ್ಷ್
Follow us
TV9 Web
| Updated By: ಪೃಥ್ವಿಶಂಕರ

Updated on: Mar 04, 2022 | 12:46 PM

ಆಸ್ಟ್ರೇಲಿಯ ತಂಡದ ಐತಿಹಾಸಿಕ ಟೆಸ್ಟ್ ಸರಣಿ ಇಂದಿನಿಂದ ಪಾಕಿಸ್ತಾನದೊಂದಿಗೆ ಆರಂಭವಾಗುತ್ತಿದೆ. ಆದರೆ, ಚೊಚ್ಚಲ ಪ್ರವೇಶಕ್ಕೂ ಮುನ್ನ ಆಸೀಸ್ ತಂಡಕ್ಕೆ ಒಂದು ಕೆಟ್ಟ ಸುದ್ದಿ ಬಂದಿದೆ. ಆಸ್ಟ್ರೇಲಿಯಾದ ಖ್ಯಾತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಡ್ ಮಾರ್ಷ್‌ (Rod Marsh) ನಿಧನರಾಗಿದ್ದಾರೆ. ಈ ಮಾಜಿ ಆಸ್ಟ್ರೇಲಿಯಾ (Australia) ವಿಕೆಟ್‌ಕೀಪರ್‌ಗೆ ಕಳೆದ ವಾರ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಹೃದಯಾಘಾತ (Heart Attack)ವಾಗಿತ್ತು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಷ್ ಅಡಿಲೇಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಸ್ಟ್ರೇಲಿಯಾ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಡ್ ಮಾರ್ಷ್ 3 ಮಕ್ಕಳು ಮತ್ತು ಪತ್ನಿ ರಾಸ್ ಅವರನ್ನು ಅಗಲಿದ್ದಾರೆ.

74 ವರ್ಷದ ಮಾರ್ಷ್ ಅವರು ಬುಲ್ಸ್ ಮಾಸ್ಟರ್ಸ್ ಚಾರಿಟಿ ಗುಂಪಿನ ಕಾರ್ಯಕ್ರಮಕ್ಕಾಗಿ ಕಳೆದ ವಾರ ಬುಂಡಾಬರ್ಗ್‌ಗೆ ಹೋಗಿದ್ದರು. ಹೃದಯಾಘಾತದಿಂದ ಬಳಲುತ್ತಿದ್ದ ಅವರನ್ನು ಬುಲ್ಸ್ ಮಾಸ್ಟರ್ಸ್ ಸಂಘಟಕರಾದ ಜಾನ್ ಗ್ಲಾನ್‌ವಿಲ್ಲೆ ಮತ್ತು ಡೇವಿಡ್ ಹಿಲಿಯರ್ ಅವರು ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಟ್ರೇಲಿಯಾ ಪರ 96 ಟೆಸ್ಟ್ ರಾಡ್ ಮಾರ್ಷ್ ಆಸ್ಟ್ರೇಲಿಯನ್ ಕ್ರಿಕೆಟ್‌ನಲ್ಲಿ ಚಿರಪರಿಚಿತ ವ್ಯಕ್ತಿ. ಅವರು 1970 ರಿಂದ 1984 ರವರೆಗೆ ಆಸ್ಟ್ರೇಲಿಯಾ ಪರ 96 ಟೆಸ್ಟ್‌ಗಳನ್ನು ಆಡಿದರು. ಇದರಲ್ಲಿ ಅವರು ವಿಕೆಟ್ ಹಿಂದೆ 355 ವಿಕೆಟ್‌ಗಳ ಜೊತೆಗೆ 3,633 ರನ್‌ಗಳನ್ನು ಗಳಿಸಿದರು, ವಿಕೆಟ್‌ನ ಮುಂದೆ 3 ಶತಕಗಳನ್ನು ಗಳಿಸಿದರು. ಅವರು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು 6 ಟೆಸ್ಟ್ ಅರ್ಧಶತಕಗಳನ್ನು ಗಳಿಸಿದ ಮೂರನೇ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಆಸ್ಟ್ರೇಲಿಯಾ ಪರ 92 ಏಕದಿನ ಪಂದ್ಯಗಳನ್ನು ಆಡಿ 1225 ರನ್ ಗಳಿಸಿದ್ದಾರೆ.

ಇದಲ್ಲದೆ, ಅವರು ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡದ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅವರು 2016 ರಲ್ಲಿ ಈ ಹುದ್ದೆಯನ್ನು ತೊರೆದಿದ್ದರು. ಅವರ ನಿಧನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಂತಾಪ ಸೂಚಿಸಿದೆ.

ಅಡಿಲೇಡ್‌ನಲ್ಲಿರುವ ಕ್ರಿಕೆಟ್ ಅಕಾಡೆಮಿಗೆ ಅಧ್ಯಕ್ಷರಾಗಿದ್ದರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರು ಅಡಿಲೇಡ್‌ನಲ್ಲಿರುವ ಆಸ್ಟ್ರೇಲಿಯನ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರೂ ಆಗಿದ್ದರು. ಅವರು ಆಸ್ಟ್ರೇಲಿಯಾದ ರಾಷ್ಟ್ರೀಯ ಆಯ್ಕೆದಾರರಾಗುವ ಮೊದಲು ಇಂಗ್ಲೆಂಡ್‌ನಲ್ಲಿ ಅಕಾಡೆಮಿಯನ್ನು ತೆರೆದಿದ್ದರು. ಜೊತೆಗೆ ರಾಡ್ ಮಾರ್ಷ್ ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್​ನ ಸದಸ್ಯರೂ ಆಗಿದ್ದಾರೆ.

ಇದನ್ನೂ ಓದಿ:Virat Kohli 100th Tets: ಕೊಹ್ಲಿಗೆ ವಿಶೇಷವಾದ 100ನೇ ಟೆಸ್ಟ್ ಕ್ಯಾಪ್ ನೀಡುವಾಗ ದ್ರಾವಿಡ್ ಏನು ಹೇಳಿದರು ಕೇಳಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ