Virat Kohli 100th Tets: ಕೊಹ್ಲಿಗೆ ವಿಶೇಷವಾದ 100ನೇ ಟೆಸ್ಟ್ ಕ್ಯಾಪ್ ನೀಡುವಾಗ ದ್ರಾವಿಡ್ ಏನು ಹೇಳಿದರು ಕೇಳಿ
IND vs SL 1st Test: ಪಂದ್ಯದಾರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಿಗೆ ತಂಡದ ಕೋಚ್ ರಾಹುಲ್ ದ್ರಾವಿಡ್ ನೂರನೇ ಟೆಸ್ಟ್ನ ವಿಶೇಷ ಕ್ಯಾಪ್ ಅನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾನದಲ್ಲಿ ಉಪಸ್ಥಿತರಿದ್ದರು.
ಭಾರತ ಹಾಗ ಶ್ರೀಲಂಕಾ (India vs Sri Lanka) ನಡುವಣ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಿದ್ದು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಕ್ಯಾಪ್ಟನ್ ರೋಹಿತ್ 28 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಇಡೀ ಮೈದಾನ ವಿರಾಟ್ ಕೊಹ್ಲಿ (Virat Kohli) ಆಗಮನಕ್ಕೆ ಕಾದುಕುಳಿತಿದ್ದು, 100ನೇ ಟೆಸ್ಟ್ಗೆ ಸಜ್ಜಾಗಿ ನಿಂತಿದ್ದಾರೆ. ಪಂದ್ಯದಾರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಿಗೆ ತಂಡದ ಕೋಚ್ ರಾಹುಲ್ ದ್ರಾವಿಡ್ (Rahul Dravid) ನೂರನೇ ಟೆಸ್ಟ್ನ ವಿಶೇಷ ಕ್ಯಾಪ್ ಅನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾನದಲ್ಲಿ ಉಪಸ್ಥಿತರಿದ್ದರು. ನನ್ನ ಬಾಲ್ಯ ಹೀರೋಗಳಲ್ಲಿ ಒಬ್ಬರಾದ ದ್ರಾವಿಡ್ ಅವರಿಂದ 100ನೇ ಟೆಸ್ಟ್ ಕ್ಯಾಪ್ ಪಡೆದಿದ್ದು ಬಹಳ ಖುಷಿ ನೀಡಿದೆ ಎಂದು ಇದೇ ಸಂದರ್ಭ ವಿರಾಟ್ ನುಡಿದರು.
ದ್ರಾವಿಡ್ ಅವರಿಂದ ವಿಶೇಷ ಕ್ಯಾಪ್ ಸ್ವೀಕರಿಸಿ ಮಾತನಾಡಿದ ಕೊಹ್ಲಿ, “ರಾಹುಲ್ ದ್ರಾವಿಡ್ ಅವರಿಂದ ಈ ಕ್ಯಾಪ್ ಸ್ವೀಕರಿಸಿದ್ದು ವಿಶೇಷವಾಗಿದೆ. ದ್ರಾವಿಡ್ ಅವರು ತನ್ನ ಬಾಲ್ಯದ ಹೀರೋ. ಈ ಉಡುಗೊರೆ ಸ್ವೀಕರಿಸಲು ಅವರಿಗಿಂತ ವಿಶೇಷ ವ್ಯಕ್ತಿಯಿಂದ ಮತ್ತೊಬ್ಬರಿಲ್ಲ,” ಎಂದು ಹೇಳಿದರು.
India vs Sri Lanka 1st Test, Day 1 Live Score:
ಕೋಚ್ ರಾಹುಲ್ ದ್ರಾವಿಡ್ ಕೂಡ ಕೊಹ್ಲಿಗೆ ವಿಶೇಷ ಕ್ಯಾಪ್ ನೀಡುವ ಸಂದರ್ಭದಲ್ಲಿ ಕೊಹ್ಲಿ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಇದು ವಿರಾಟ್ಗೆ ಸಿಕ್ಕಂತಹ ಅತ್ಯಂತ ಅರ್ಹ ಗೌರವ. ಇದನ್ನು ಅರ್ಹತೆಯಿಂದಲೇ ಸಂಪಾದಿಸಿದ್ದೀರಿ. ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹೇಳಿದಂತೆಯೇ ಈ ಸಂಭ್ರಮವನ್ನು ದ್ವಿಗುಣಗೊಳಿಸೋಣ”, ಎಂದು ದ್ರಾವಿಡ್ ಹೇಳಿದರು.
ವಿರಾಟ್ ಕೊಹ್ಲಿ ಇದಕ್ಕೆ ಧನ್ಯವಾದ ಸೂಚಿಸಿ ಮಾತನಾಡಿ, “ಇದು ನನಗೆ ಅತ್ಯಂತ ವಿಶೇಷವಾದ ಕ್ಷಣಗಳು. ಈ ಸಂದರ್ಭದಲ್ಲಿ ನನ್ನ ಪತ್ನಿ ಇಲ್ಲಿ ನನ್ನೊಂದಿಗಿದ್ದಾರೆ. ನನ್ನ ಸೋದರ ಸ್ಟ್ಯಾಂಡ್‌ನಲ್ಲಿದ್ದಾರೆ. ಇದೊಂದು ತಂಡದ ಆಟವಾಗಿದ್ದು ನೀವೆಲ್ಲಾ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಬಿಸಿಸಿಐಗೆ ಕೂಡ ಧನ್ಯವಾದಗಳು. ನಾನು ಈ ಗೌರವವನ್ನು ರಾಹುಲ್ ದ್ರಾವಿಡ್ ಅವರಿಗಿಂತ ವಿಶೇಷವಾದ ವ್ಯಕ್ತಿಗಿಂತ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಬಾಲ್ಯದ ಹೀರೋ ಅವರು. ಅಂಡರ್-15 ದಿನಗಳಲ್ಲಿ ಅವರೊಂದಿಗೆ ತೆಗೆದುಕೊಂಡಿದ್ದ ಫೋಟೋ ಈಗಲೂ ನನ್ನ ಬಳಿ ಇದೆ”, ಎಂದು ಕೊಹ್ಲಿ ನೆನಪಿಸಿಕೊಂಡರು.
ಇಂದು ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.ಈ ಮೂಲಕ ವಿಶ್ವದಲ್ಲಿ 100 ಟೆಸ್ಟ್ ಪಂದ್ಯ ಆಡಿದ ಕೆಲವೇ ಕೆಲವು ದಿಗ್ಗಜ ಆಟಗಾರರ ಸಾಲಿಗೆ ವಿರಾಟ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಕೊಹ್ಲಿ ಅವರ ಅದ್ಭುತ ಸಾಧನೆಯ ಬಗ್ಗೆ ವಿಶ್ವದ ಕ್ರಿಕೆಟ್ ದಿಗ್ಗಜರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ವಿಶೇಷವಾಗಿರುವ ಮೂಲಕ ವಿರಾಟ್ ಕೊಹ್ಲಿಗೆ ಧನ್ಯವಾದ ಹೇಳಿದೆ. ಈ ವಿಡಿಯೋದಲ್ಲಿ ವಿಶ್ವ ಕ್ರಿಕೆಟ್ ನ ದಿಗ್ಗಜರು ಕೊಹ್ಲಿ ಸಾಧನೆಯನ್ನು ಕೊಂಡಾಡಿದ್ದಾರೆ.
“ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ವಹಿಸಿಕೊಳ್ಳುವ ವೇಳೆಗೆ ಟೀಮ್ ಇಂಡಿಯಾ 7ನೇ ಸ್ಥಾನದಲ್ಲಿತ್ತು. ಕೊಹ್ಲಿ ನಾಯಕರಾದ ಮೇಲೆ ಸತತ ಐದು ವರ್ಷಗಳ ಕಾಲ ಟೆಸ್ಟ್ ಶ್ರೇಯಾಂಕದಲ್ಲಿ ತಂಡ ಅಗ್ರಸ್ಥಾನದಲ್ಲಿತ್ತು. ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ಆಟಗಾರರಾಗಿದ್ದು, ಅಂತಹ ಆಟಗಾರರಿಗಾಗಿ 100 ನೇ ಟೆಸ್ಟ್ ಪಂದ್ಯವನ್ನು ಇನ್ನಷ್ಟು ವಿಶೇಷವಾಗಿಸಲು ನಾವು ಬಯಸುತ್ತೇವೆ,” ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
Devdutt Padikkal: ಆರ್ಸಿಬಿ ಕೈಬಿಟ್ಟಿದ್ದೆ ತಡ ಅಬ್ಬರಿಸಿದ ಪಡಿಕ್ಕಲ್: ದ್ವಿಶತಕದತ್ತ ದೇವದತ್ ಕಣ್ಣು