Devdutt Padikkal: ಆರ್ಸಿಬಿ ಕೈಬಿಟ್ಟಿದ್ದೆ ತಡ ಅಬ್ಬರಿಸಿದ ಪಡಿಕ್ಕಲ್: ದ್ವಿಶತಕದತ್ತ ದೇವದತ್ ಕಣ್ಣು
Karnataka vs Puducherry: ರಣಜಿ ಟ್ರೋಫಿಯ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ (Devdutt Padikka) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದು ಇದೀಗ ದ್ವಿಶತಕದತ್ತ ಲಗ್ಗೆಯಿಡುತ್ತಿದ್ದಾರೆ.
ಕೊರೊನಾ ವೈರಸ್ (Corona Virus) ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಗೆ (Ranji Trophy) ಈ ವರ್ಷ ಮತ್ತೆ ಚಾಲನೆ ಸಿಕ್ಕಿ ಫೆಬ್ರವರಿ 17ಕ್ಕೆ ಶುರುವಾಗಿತ್ತು. ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ದ 117 ರನ್‍ಗಳ ಬೃಹತ್ ಮೊತ್ತದಿಂದ ಗೆಲುವು ಸಾಧಿಸಿ ಎಲೆಟ್ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಗುರುವಾರ ಆರಂಭವಾಗಿರುವ ಎರಡನೇ ಪಂದ್ಯದಲ್ಲಿ ಪುದುಚೇರಿಯ ಸವಾಲನ್ನು ಎದುರಿಸುತ್ತಿದ್ದು ದೊಡ್ಡ ಮೊತ್ತದತ್ತ ದಾಪುಗಾಲಿಡುತ್ತಿದೆ. ರಾಜ್ಯ ತಂಡದ ಪರ ದೇವದತ್ ಪಡಿಕ್ಕಲ್ (Devdutt Padikka) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದು ಇದೀಗ ದ್ವಿಶತಕದತ್ತ ಲಗ್ಗೆಯಿಡುತ್ತಿದ್ದಾರೆ. ಐಪಿಎಲ್ 2022 ಹರಾಜಿನಲ್ಲಿ ಆರ್ಸಿಬಿ ಈ ಕನ್ನಡಿಗನನ್ನು ಕೈಬಿಟ್ಟಿದ್ದೆ ತಡ ಬೊಂಬಾಟ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪುದುಚೇರಿ ಬೌಲಿಂಗ್ ಆಯ್ದುಕೊಂಡಿತು. ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಂದಾಗ ಆರಂಭಿಕ ಆಟಗಾರರಾಗಿ ರವಿಕುಮಾರ್ ಸಮರ್ಥ್ ಮತ್ತು ದೇವದತ್ ಪಡಿಕ್ಕಲ್ ಕಣಕ್ಕಿಳಿದರು. ಆದರೆ, ರವಿಕುಮಾರ್ ಸಮರ್ಥ್ ಅವರು 1 ಬೌಂಡರಿ ಸಹಿತ 11 ರನ್‍ಗಳಿಸಿದ್ದಾಗ ಸಂಗನ್‍ಕಾಲ್‍ರ ಎಸೆತವನ್ನು ಬೌಂಡರಿ ಗೆರೆಗೆ ಅಟ್ಟುವ ಆತುರದಲ್ಲಿ ವಿಕೆಟ್ ಕೀಪರ್ ಕಾರ್ತಿಕ್‍ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡದಿದರೆ, ಜಮ್ಮು ಕಾಶ್ಮೀರ ವಿರುದ್ಧ ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕರುಣ್‍ನಾಯರ್ ಕೇವಲ 6 ರನ್‍ಗಳಿಗೆ ತನ್ನ ಆಟವನ್ನು ಮುಗಿಸಿದರು.
India vs Sri Lanka 1st Test, Day 1 Live Score:
39 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರು ಆಸರೆಯಾದರು. 3ನೆ ವಿಕೆಟ್‍ಗೆ ಕೃಷ್ಣಮೂರ್ತಿ ಸಿದ್ಧಾರ್ಥ್‍ರೊಂದಿಗೆ ಜೊತೆಗೂಡಿದ ಡಿಕ್ಕಲ್ ಪುದುಚೇರಿಯ ವೇಗಿ ಹಾಗೂ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಗಳಿಸುವ ಆಸೆ ಮೂಡಿಸಿದರು. ದೇವದತ್ ಪಡಿಕ್ಕಲ್ ಅವರು ತಾಳ್ಮೆಯುತ ಆಟವನ್ನು ಪ್ರದರ್ಶಿಸುತ್ತಾ ಅವಕಾಶ ಸಿಕ್ಕಾಗಲೆಲ್ಲ ಚೆಂಡನ್ನು ಬೌಂಡರಿ ಗೆರೆಗೆ ಮುಟ್ಟಿಸುತ್ತಾ ಗಮನ ಸೆಳೆದರು. ಮತ್ತೊಂದು ತುದಿಯಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ ಕೂಡ ಪಡಿಕ್ಕಲ್ ಉತ್ತಮ ಸಾಥ್ ನೀಡಿದರು. ಕೃಷ್ಣಮೂರ್ತಿ ಸಿದ್ಧಾರ್ಥ್ 85 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು.
ಮೊದಲನೇ ದಿನದಾಟ ಮುಕ್ತಾಯದ ಹಂತಕ್ಕೆ ಕರ್ನಾಟಕ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿ ಮೇಲುಗೈ ಸಾಧಿಸಿದೆ. ದೇವದತ್ ಪಡಿಕ್ಕಲ್ ಸಿಡಿಸಿದ ಅಜೇಯ 161 ರನ್ ಕರ್ನಾಟಕದ ಉತ್ತಮ ಸ್ಥಿತಿಗೆ ಪ್ರಮುಖ ಕಾರಣ ಎನ್ನಬಹುದು. ಪಡಿಕ್ಕಲ್ 277 ಎಸೆತಗಳಿಗೆ ಜವಾಬಿತ್ತು 161 ರನ್ ರಾಶಿ ಹಾಕಿದ್ದಾರೆ. ಸಿಡಿಸಿದ್ದು 20 ಬೌಂಡರಿ ಮತ್ತು 2 ಸಿಕ್ಸರ್. ನಾಯಕ ಮನೀಶ್ ಪಾಂಡೆ 33 ಎಸೆತಗಳಲ್ಲಿ 21 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND vs SL 1st Test: ರಹಾನೆ-ಪೂಜಾರ ಜಾಗಕ್ಕೆ ಯಾರು?: ಮೊದಲ ಟೆಸ್ಟ್ಗೆ ಭಾರತ ಪ್ಲೇಯಿಂಗ್ XI ಇಲ್ಲಿದೆ ನೋಡಿ