Virat Kohli: 100ನೇ ಟೆಸ್ಟ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್: ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್

Virat Kohli: 100ನೇ ಟೆಸ್ಟ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್: ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್
Virat Kohli 8000 Runs

IND vs SL 1st Test: ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿ 8,000 ರನ್ ಪೂರೈಸಿದ ಭಾರತದ 6ನೇ ಹಾಗೂ ಒಟ್ಟಾರೆ 32ನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

TV9kannada Web Team

| Edited By: Vinay Bhat

Mar 04, 2022 | 1:34 PM

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs Sri Lanka 1st Test) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಆರಂಭಿಕರ ನಿರ್ಗಮನದ ಬಳಿಕ ಜೊತೆಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹನುಮಾ ವಿಹಾರಿ (Hanuma Vihari) ಅರ್ಧಶತಕದ ಜೊತೆಯಾಟ ಆಡಿ ತಂಡಕ್ಕೆ ಆಧಾರವಾದರು. ಇದೀಗ ಭಾರತ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಇದರ ನಡುವೆ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿ 8,000 ರನ್ ಪೂರೈಸಿದ ಭಾರತದ 6ನೇ ಹಾಗೂ ಒಟ್ಟಾರೆ 32ನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ವಿಶ್ವ ಫರ್ನಾಂಡೋ ಅವರ 39ನೇ ಓವರ್​ನ ಎರಡನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಒಂದು ರನ್ ತೆಗೆದುಕೊಳ್ಳುವ ಮೂಲಕ ಟೆಸ್ಟ್ ಮಾದರಿಯಲ್ಲಿ 8000 ರನ್ ಪೂರೈಸಿದರು. ಈ ಮೂಲಕ ವಿರಾಟ್ ಟೆಸ್ಟ್ ಕ್ರಿಕೆಟ್​ನಲ್ಲಿ 8000 ರನ್‌ ಬಾರಿಸಿದ ಆಟಗಾರರ ಕ್ಲಬ್‌ಗೆ ಸೇರಿಕೊಂಡಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಕೊಹ್ಲಿ 99 ಪಂದ್ಯಗಳ 168 ಇನ್ನಿಂಗ್ಸ್‌ಗಳಲ್ಲಿ 7962 ರನ್‌ ಕಲೆ ಹಾಕಿದ್ದರು. 8000 ರನ್‌ ಮೈಲಿಗಲ್ಲು ತಲುಪಲು 38 ರನ್​ಗಳ ಅವಶ್ಯಕತೆಯಿತ್ತು. ಇದೀಗ ಈ ಸಾಧನೆ ಮಾಡಿ ಸಚಿನ್‌ ತೆಂಡೂಲ್ಕರ್, ರಾಹುಲ್ ದ್ರಾವಿಡ್‌, ಸುನೀಲ್ ಗವಾಸ್ಕರ್‌, ವಿರೇಂದ್ರ ಸೆಹ್ವಾಗ್‌ ಹಾಗೂ ವಿವಿಎಸ್ ಲಕ್ಷ್ಮಣ್‌ ಜೊತೆಗೆ ಟೆಸ್ಟ್‌ನಲ್ಲಿ 8 ಸಾವಿರ ರನ್‌ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಕೂಡ ಸೇರ್ಪಡೆಗೊಂಡಿದ್ದಾರೆ.

ಇದಿಷ್ಟೆ ಅಲ್ಲದೆ ತನ್ನ 100ನೇ ಟೆಸ್ಟ್​ ಪಂದ್ಯದಲ್ಲೇ 8000 ರನ್ ಗಳಿಸಿದ ಎರಡನೇ ಬ್ಯಾಟ್ಸ್​ಮನ್ ಕೊಹ್ಲಿ ಆಗಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್ ಅವರು 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು. ಇದೀಗ ಕೊಹ್ಲಿ ಮೊಹಾಲಿಯಲ್ಲಿ ಲಂಕಾ ವಿರುದ್ಧ ತನ್ನ 100ನೇ ಟೆಸ್ಟ್​ನಲ್ಲಿ 8000 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಇದರ ಜೊತೆಗೆ 100ನೇ ಟೆಸ್ಟ್‌ ಆಡುವ ಮೂಲಕ ಈ ಮೈಲಿಗಲ್ಲು ತಲುಪಲಿರುವ ಭಾರತದ 12ನೇ ಆಟಗಾರ ಎನಿಸಿಕೊಂಡಿದ್ದಾರೆ.  ಇದಕ್ಕೂ ಮೊದಲು ಗವಾಸ್ಕರ್‌, ವೆಂಗ್‌ಸರ್ಕಾರ್‌, ಕಪಿಲ್‌ ದೇವ್‌, ತೆಂಡುಲ್ಕರ್‌, ಕುಂಬ್ಳೆ, ದ್ರಾವಿಡ್‌, ಗಂಗೂಲಿ, ಲಕ್ಷ್ಮಣ್‌, ಸೆಹ್ವಾಗ್‌, ಹರ್ಭಜನ್‌ ಹಾಗೂ ಇಶಾಂತ್‌ ಶರ್ಮಾ 100 ಪಂದ್ಯಗಳನ್ನು ಆಡಿದ್ದಾರೆ.

ಇನ್ನು ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಿಗೆ ಕೋಚ್ ರಾಹುಲ್ ದ್ರಾವಿಡ್ ಕೈಯಿಂದ ಬಿಸಿಸಿಐ ವಿಶೇಷ ಸನ್ಮಾನ ಏರ್ಪಡಿಸಿತ್ತು. ಮೊಹಾಲಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಎಲ್ಲ ಆಟಗಾರರು ಮತ್ತು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಉಪಸ್ಥಿತರಿದ್ದರು. ಈ ಸಂದರ್ಭ ದ್ರಾವಿಡ್ ಕೈಯಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಅನ್ನು ಗೌರವ ಪೂರ್ವಕವಾಗಿ ನೀಡಿ ಸನ್ಮಾನಿಸಲಾಯಿತು.

ಸದ್ಯ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಉತ್ತಮ ಬ್ಯಾಟಿಂಗ್ ನಡೆಸುತ್ತಿದೆ. ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ರೋಹಿತ್‌ ಶರ್ಮಾ(29) ಹಾಗೂ ಮಯಾಂಕ್‌ ಅಗರ್ವಾಲ್‌(33) ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 52ರನ್‌ ಗಳಿಸಿತ್ತು. ಆ ಮೂಲಕ ತಂಡಕ್ಕೆ ಉತ್ತಮ ಆರಂಭ ಕೊಟ್ಟಿತ್ತು. ಆದರೆ ಲಹಿರು ಕುಮಾರ ಎಸೆತದಲ್ಲಿ ರೋಹಿತ್‌ ಪುಲ್‌ಶಾಟ್‌ಗೆ ಕೈಹಾಕಿ ಔಟಾದರೆ, ಅಗರ್ವಾಲ್‌ ಲಸಿತ್ ಎಂಬುಲ್ದೇನಿಯ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು. ನಂತರ ಜೊತೆಯಾದ ಕೊಹ್ಲಿ-ವಿಹಾರಿ 90 ರನ್​ಗಳ ಜೊತೆಯಾಟ ಆಡಿದರು. ಕೊಹ್ಲಿ 76 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು.

Virat Kohli: ಮೈದಾನದಲ್ಲೇ ಪತ್ನಿಗೆ ಕಿಸ್ ಕೊಟ್ಟ ವಿರಾಟ್ ಕೊಹ್ಲಿ: ಅನುಷ್ಕಾ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ

Virat Kohli 100th Tets: ಕೊಹ್ಲಿಗೆ ವಿಶೇಷವಾದ 100ನೇ ಟೆಸ್ಟ್ ಕ್ಯಾಪ್ ನೀಡುವಾಗ ದ್ರಾವಿಡ್ ಏನು ಹೇಳಿದರು ಕೇಳಿ

Follow us on

Related Stories

Most Read Stories

Click on your DTH Provider to Add TV9 Kannada