Women’s World Cup 2022: 6 ಎಸೆತಗಳಲ್ಲಿ 6 ರನ್ ಹೊಡೆಯಲಿಲ್ಲ ನ್ಯೂಜಿಲೆಂಡ್! ಗೆದ್ದ ವೆಸ್ಟ್ ಇಂಡೀಸ್
Women's World Cup 2022: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಗೆಲುವಿನ ಆರಂಭವನ್ನು ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಕೊನೆಯ 6 ಎಸೆತಗಳಲ್ಲಿ ವಿಜಯದ ಈ ಸುಂದರ ಸ್ಕ್ರಿಪ್ಟ್ ಬರೆದರು.
ಐಸಿಸಿ ಮಹಿಳಾ ವಿಶ್ವಕಪ್ (ICC Women’s World Cup)ನಲ್ಲಿ ವೆಸ್ಟ್ ಇಂಡೀಸ್ (West Indies) ಗೆಲುವಿನ ಆರಂಭವನ್ನು ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಕೊನೆಯ 6 ಎಸೆತಗಳಲ್ಲಿ ವಿಜಯದ ಈ ಸುಂದರ ಸ್ಕ್ರಿಪ್ಟ್ ಬರೆದರು. ವಾಸ್ತವವಾಗಿ, ಪಂದ್ಯದ ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ 6 ರನ್‌ಗಳ ಅಗತ್ಯವಿತ್ತು. ಆದರೆ, ಕೈಯಲ್ಲಿ 3 ವಿಕೆಟ್ ಇದ್ದರೂ, 6 ರನ್ ಗಳಿಸಲು ವಿಫಲರಾದರು. ಕಿವೀಸ್ ತಂಡ ತನ್ನ ಉಳಿದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ 12ನೇ ಆವೃತ್ತಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದೆ. ವೆಸ್ಟ್ ಇಂಡೀಸ್‌ನ ಈ ವಿಜಯದಲ್ಲಿ, ಬಾಲ್ ಮತ್ತು ಬ್ಯಾಟ್ ಎರಡರಿಂದಲೂ ಮಿಂಚಿದ ಹೇಯ್ಲಿ ಮ್ಯಾಥ್ಯೂಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಮೊದಲು ಬ್ಯಾಟಿಂಗ್ ಮಾಡಿದ ಹೇಲಿ ಮ್ಯಾಥ್ಯೂಸ್ 128 ಎಸೆತಗಳಲ್ಲಿ 119 ರನ್ ಗಳಿಸಿದರು, ಇದು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರ ಮೊದಲ ಶತಕವಾಗಿದೆ. ಬಳಿಕ ಅಮೋಘವಾಗಿ ಬೌಲಿಂಗ್ ಮಾಡಿ 41 ರನ್ ನೀಡಿ 2 ವಿಕೆಟ್ ಪಡೆದರು.
6 ಎಸೆತಗಳಲ್ಲಿ ಪಂದ್ಯ ಕಳೆದುಕೊಂಡ ನ್ಯೂಜಿಲೆಂಡ್ ನ್ಯೂಜಿಲೆಂಡ್ ತನ್ನ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 6 ರನ್ ಗಳಿಸಬೇಕಾಗಿತ್ತು. ದಿಯಾಂಡ್ರಾ ಡಾಟಿನ್ ಈ ಓವರ್ ಬೌಲ್ ಮಾಡಲು ಬಂದರು. ಓವರ್‌ನ ಮೊದಲ ಎಸೆತದಲ್ಲಿ 1 ರನ್ ನೀಡಿದರು. ಈಗ ನ್ಯೂಜಿಲೆಂಡ್ 5 ಎಸೆತಗಳಲ್ಲಿ 5 ರನ್ ಗಳಿಸಬೇಕಿತ್ತು. ಆದರೆ, ಮುಂದಿನ ಎಸೆತದಲ್ಲಿ ವಿಕೆಟ್ ಪತನವಾಯಿತು. ಕೇಟ್ ಮಾರ್ಟಿನ್ ಅವರನ್ನು ಔಟ್ ಮಾಡುವ ಮೂಲಕ ಡೋಟಿನ್ ಕಿವೀಸ್ ತಂಡಕ್ಕೆ 8ನೇ ಹೊಡೆತ ನೀಡಿದರು.
ಇದೀಗ ನ್ಯೂಜಿಲೆಂಡ್ ತಂಡಕ್ಕೆ 4 ಎಸೆತಗಳಲ್ಲಿ 5 ರನ್ ಗಳಿಸುವ ಸವಾಲು ಎದುರಾಗಿತ್ತು. ಡಾಟಿನ್ ಅವರ ಮೂರನೇ ಎಸೆತದಲ್ಲಿ ನ್ಯೂಜಿಲೆಂಡ್ ಮತ್ತೊಮ್ಮೆ ಸಿಂಗಲ್ ಕದ್ದಿತು. ಅರ್ಥಾತ್ ಈಗ 3 ಎಸೆತಗಳಲ್ಲಿ 4 ರನ್‌ಗಳು ಬೇಕಿತ್ತು. ಆದರೆ, ಮುಂದಿನ ಎಸೆತದಲ್ಲಿ ನ್ಯೂಜಿಲೆಂಡ್‌ಗೆ ಒಂಬತ್ತನೇ ಹೊಡೆತ ಬಿದ್ದಿತು. ಈಗ 2 ಎಸೆತಗಳು ಮತ್ತು 4 ರನ್ ಅಗತ್ತವಿತ್ತು. ಆದರೆ, ರನ್ ಕದಿಯುವ ಧಾವಂತದಲ್ಲಿ ಕಿವೀಸ್ ತಂಡದ ಕೊನೆಯ ವಿಕೆಟ್ ಕೂಡ ಉರುಳಿತು. ಈ ರೋಚಕ ಪಂದ್ಯ ವೆಸ್ಟ್ ಇಂಡೀಸ್ ಚೀಲದಲ್ಲಿ ಬಿದ್ದಿತು.
ಕಿವೀಸ್ ನೆಲದಲ್ಲಿ ವೆಸ್ಟ್ ಇಂಡೀಸ್‌ಗೆ ಮೊದಲ ಅಂತಾರಾಷ್ಟ್ರೀಯ ಗೆಲುವು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಮಹಿಳಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು. ಉತ್ತರವಾಗಿ ನ್ಯೂಜಿಲೆಂಡ್ ತಂಡ 256 ರನ್ ಗಳಿಸಲಷ್ಟೇ ಶಕ್ತವಾಯಿತು. ಹೇಲಿ ಮ್ಯಾಥ್ಯೂಸ್ ಅವರ ಶತಕ ವೆಸ್ಟ್ ಇಂಡೀಸ್ ಪರ ಕೆಲಸ ಮಾಡಿದರೆ, ಸೋಫಿಯಾ ಡಿವೈನ್ ಅವರ ಶತಕ ಕಿವೀಸ್ ತಂಡಕ್ಕೆ ವ್ಯರ್ಥವಾಯಿತು. ಇದು ನ್ಯೂಜಿಲೆಂಡ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಮೊದಲ ಅಂತರರಾಷ್ಟ್ರೀಯ ಗೆಲುವು.
ಇದನ್ನೂ ಓದಿ:Virat Kohli: 100ನೇ ಟೆಸ್ಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್: ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿಯೇ ಕಿಂಗ್