Updated on: Mar 04, 2022 | 1:58 PM
ವಿರಾಟ್ ಕೊಹ್ಲಿ ಮೈದಾನಕ್ಕೆ ಬಂದಾಗಲೆಲ್ಲಾ ದಾಖಲೆಗಳು ಮುರಿಯುತ್ತವೆ, ಮೊಹಾಲಿ ಟೆಸ್ಟ್‌ನಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಮೊಹಾಲಿಯಲ್ಲಿ, ವಿರಾಟ್ ಕೊಹ್ಲಿ ಮೊದಲು ತಮ್ಮ 100 ಟೆಸ್ಟ್‌ಗಳನ್ನು ಪೂರ್ಣಗೊಳಿಸಿದರು ಮತ್ತು ನಂತರ ಅವರು 8000 ಟೆಸ್ಟ್ ರನ್‌ಗಳನ್ನು ಪೂರೈಸಿದರು.
ವಿರಾಟ್ ಕೊಹ್ಲಿ 8000 ಟೆಸ್ಟ್ ರನ್ ಗಳಿಸಿದ ಆರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಈ ಸಾಧನೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ 169 ಇನ್ನಿಂಗ್ಸ್‌ಗಳಲ್ಲಿ 8000 ಟೆಸ್ಟ್ ರನ್‌ಗಳ ಗಡಿಯನ್ನು ತಲುಪಿದರು. ಭಾರತ ಪರ ಸಚಿನ್ ತೆಂಡೂಲ್ಕರ್ ಅವರು ಅತ್ಯಂತ ವೇಗವಾಗಿ 8000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದರು. ಅವರ ನಂತರ ರಾಹುಲ್ ದ್ರಾವಿಡ್ 157 ರನ್ ಗಳಿಸಿದರು ಮತ್ತು ಸೆಹ್ವಾಗ್ 160 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಗವಾಸ್ಕರ್ 8000 ರನ್ ಪೂರೈಸಲು 166 ಇನ್ನಿಂಗ್ಸ್ ತೆಗೆದುಕೊಂಡರು.
100ನೇ ಟೆಸ್ಟ್‌ನಲ್ಲಿ 8000 ರನ್ ಪೂರೈಸಿದ ಮೊದಲ ಭಾರತೀಯ ಮತ್ತು ವಿಶ್ವದ ಎರಡನೇ ಕ್ರಿಕೆಟಿಗ ವಿರಾಟ್ ಕೊಹ್ಲಿ. ರಿಕಿ ಪಾಂಟಿಂಗ್ ಕೂಡ ತಮ್ಮ 100ನೇ ಟೆಸ್ಟ್‌ನಲ್ಲಿ 8000 ರನ್‌ಗಳ ಗಡಿಯನ್ನು ಮುಟ್ಟಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಅವರು ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ್ದಾರೆ. ಆದರೆ ಕೊಹ್ಲಿ 45 ರನ್ಗಳಿಸಿ ಔಟಾದರು.
ವಿರಾಟ್ ಕೊಹ್ಲಿ ತಮ್ಮ 100ನೇ ಟೆಸ್ಟ್ ಕ್ರಿಕೆಟ್‌ನಲ್ಲಿ 900 ಬೌಂಡರಿಗಳನ್ನು ಪೂರೈಸಿದರು. ಪ್ರಸ್ತುತ ಆಟಗಾರರ ಪೈಕಿ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ. ಜೋ ರೂಟ್ ತಮ್ಮ ಹೆಸರಿಗೆ 1000 ಕ್ಕೂ ಹೆಚ್ಚು ಬೌಂಡರಿಗಳನ್ನು ಹೊಂದಿದ್ದಾರೆ ಮತ್ತು ಸಚಿನ್ ತಮ್ಮ ಹೆಸರಿನಲ್ಲಿ 2000 ಕ್ಕೂ ಹೆಚ್ಚು ಬೌಂಡರಿಗಳನ್ನು ಹೊಂದಿರುವ ಏಕೈಕ ಕ್ರಿಕೆಟಿಗರಾಗಿದ್ದಾರೆ.
ಕೊಹ್ಲಿ