IND vs SL: ಪಂತ್‌ಗೆ ಕಾಡಿದ ನರ್ವಸ್ 90! 5ನೇ ಬಾರಿಗೆ ಶತಕದಂಚಿನಲ್ಲಿ ವಿಕೆಟ್ ಕೈಚೆಲ್ಲಿದ ರಿಷಬ್

Rishabh Pant: ಪಂತ್ ಐದು ಬಾರಿ 90 ರಿಂದ 100 ರ ನಡುವೆ ವಿಕೆಟ್ ಕಳೆದುಕೊಂಡಿದ್ದಾರೆ. ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ ಎರಡು ಬಾರಿ, ಒಮ್ಮೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ 90 ರನ್‌ಗಳಿಗೆ ಬಲಿಯಾಗಿದ್ದಾರೆ.

IND vs SL: ಪಂತ್‌ಗೆ ಕಾಡಿದ ನರ್ವಸ್ 90! 5ನೇ ಬಾರಿಗೆ ಶತಕದಂಚಿನಲ್ಲಿ ವಿಕೆಟ್ ಕೈಚೆಲ್ಲಿದ ರಿಷಬ್
ಪಂತ್
Follow us
TV9 Web
| Updated By: ಪೃಥ್ವಿಶಂಕರ

Updated on:Mar 04, 2022 | 5:02 PM

ಮೊಹಾಲಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ವಿಕೆಟ್‌ಕೀಪರ್ ರಿಷಬ್ ಪಂತ್ (Rishabh Pant) ಅದ್ಭುತ ಇನ್ನಿಂಗ್ಸ್ ಆಡಿದರು, ಆದರೆ ಅವರ ಬಿರುಗಾಳಿಯ ಇನ್ನಿಂಗ್ಸ್ ಅತ್ಯಂತ ನೋವಿನ ಅಂತ್ಯವನ್ನು ಕಂಡಿತು. ಪಂತ್ ಕೇವಲ 4 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದದ್ದು ನೋವಿನ ಸಂಗತಿ. ರಿಷಬ್ ಪಂತ್ 96 ರನ್ ಗಳಿಸಿದ್ದಾಗ ಸುರಂಗ ಲಕ್ಮಲ್ ಎಸೆತದಲ್ಲಿ ಬೌಲ್ಡ್ ಆದರು. ಲಕ್ಮಲ್ ಅವರ ಚೆಂಡು ಪಂತ್ ಅವರ ಬ್ಯಾಟ್‌ನ ಒಳ ಅಂಚಿಗೆ ಬಡಿದು ಸ್ಟಂಪ್‌ಗೆ ಬಡಿಯಿತು. ಪಂತ್ ಅವರು ಶತಕ ಬಾರಿಸಿದ್ದರೆ ಅದು ಅವರ ಟೆಸ್ಟ್ ವೃತ್ತಿಜೀವನದ ಐದನೇ ಶತಕವಾಗುತ್ತಿತ್ತು, ಆದರೂ ಅವರು ವಿಫಲರಾದರು. ಆದರೆ, ಪಂತ್ ಅವರ ಬ್ಯಾಟಿಂಗ್​ನಿಂದಾಗಿ ಮೊದಲ ದಿನವೇ ಟೀಂ ಇಂಡಿಯಾ ಬಲಿಷ್ಠವಾಗಿದೆ. ಪಂತ್ ಕೇವಲ 73 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು ಮತ್ತು ನಂತರ ಅವರು 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು.

ವಿರಾಟ್ ಕೊಹ್ಲಿ ಮತ್ತು ಅಯ್ಯರ್ ಅವರ ವಿಕೆಟ್ ಕಬಳಿಸಿದ ಅಂಬಲ್ದುನಿಯಾರನ್ನು ರಿಷಬ್ ಪಂತ್ ಗುರಿಯಾಗಿಸಿಕೊಂಡರು. ಪಂತ್ ಅವರ ಎಸೆತಗಳಲ್ಲಿ ಮುಂದೆ ಹೋಗಿ ಅನೇಕ ದೊಡ್ಡ ಹೊಡೆತಗಳನ್ನು ಆಡಿದರು. ಇದಲ್ಲದೇ ಧನಂಜಯ್ ಡಿಸಿಲ್ವಾ ಮೇಲೂ ಅಬ್ಬರಿಸಿದರು. ಪಂತ್ 88 ಎಸೆತಗಳಲ್ಲಿ ಶ್ರೇಯಸ್ ಅಯ್ಯರ್ ಅವರೊಂದಿಗೆ 53 ರನ್ ಜೊತೆಯಾಟವನ್ನು ಹಂಚಿಕೊಂಡರು. ನಂತರ ಜಡೇಜಾ ಅವರೊಂದಿಗೆ ಆರನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ಮಾಡಿದರು.

5ನೇ ಬಾರಿ ಶತಕ ವಂಚಿತರಾದ ಪಂತ್ ಮೊಹಾಲಿ ಟೆಸ್ಟ್‌ನಲ್ಲಿ ಔಟಾದ ನಂತರ ರಿಷಬ್ ಪಂತ್ ತುಂಬಾ ದುಃಖಿತರಾಗಿದ್ದರು. ಅವರು ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಐದು ಶತಕಗಳನ್ನು ಕಳೆದುಕೊಂಡಿರುವುದರಿಂದ ದುಃಖವಾಗಿದೆ. ಪಂತ್ ಐದು ಬಾರಿ 90 ರಿಂದ 100 ರ ನಡುವೆ ವಿಕೆಟ್ ಕಳೆದುಕೊಂಡಿದ್ದಾರೆ. ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ ಎರಡು ಬಾರಿ, ಒಮ್ಮೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ 90 ರನ್‌ಗಳಿಗೆ ಬಲಿಯಾಗಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಎರಡು ಬಾರಿ 92 ರನ್ ಗಳಿಸಿ ಔಟಾದರು. 2021 ರಲ್ಲಿ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 97 ರನ್ ಗಳಿಸಿ ಔಟಾದರು. ಕಳೆದ ವರ್ಷ ಚೆನ್ನೈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 91 ರನ್ ಗಳಿಸಿ ಔಟಾದರು. ಈಗ ಅವರು ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 96 ರನ್‌ಗಳಿಗೆ ತನ್ನ ವಿಕೆಟ್ ಕಳೆದುಕೊಂಡರು.

ಇದನ್ನೂ ಓದಿ:IPL 2022: ಪಂತ್ ತಂಡ ಮತ್ತಷ್ಟು ಬಲಿಷ್ಠ; ಡೆಲ್ಲಿ ತಂಡ ಸೇರಿದ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್

Published On - 4:57 pm, Fri, 4 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ