ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇಂದು (ಫೆ.4) ಚೊಚ್ಚಲ ಬಜೆಟ್ (Budget) ಮಂಡಿಸಿದ್ದಾರೆ. ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಿಎಂದ ಶುಭ ಸುದ್ದಿ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರು ಸೇರಿ ಹಲವರ ಗೌರವ ಧನ ಹೆಚ್ಚಳ ಮಾಡುವುದಾಗ ಬಜೆಟ್ನಲ್ಲಿ ಘೋಷಿಸಿದ್ದಾರೆ. ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1,000 ರೂ. ಮತ್ತು ಬಿಸಿಯೂಟ ತಯಾರಿಕರಿಗೆ ತಲಾ 1.000 ಗೌರವ ಧನ ಹೆಚ್ಚಳ ಮಾಡಲಾಗಿದೆ.
ಅಂಗನವಾಡಿ ಕಾರ್ಯಕರ್ತರಿಗೂ ಗೌರವ ಧನ ಹೆಚ್ಚಳಕ್ಕೆ ಸ್ಕೀಮ್ ಮಾಡಲಾಗಿದ್ದು, ಸೇವಾನುಭವ ಆಧಾರದಲ್ಲಿ ಸಾವಿರದಿಂದ 1,500 ರೂಗಳ ಹೆಚ್ಚಳ ಮಾಡಲಾಗುತ್ತದೆ. ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2,000 ಪ್ರೋತ್ಸಾಹ ಗೌರವ ಧನ ನೀಡಲಾಗುತ್ತದೆ.
ಪೌರಕಾರ್ಮಿಕರಿಗೆ 2 ಸಾವಿರ ರೂ. ಮಾಸಿಕ ಸಂಕಷ್ಟ ಭತ್ಯೆ: ಇನ್ನು ಪೌರಕಾರ್ಮಿಕರಿಗೆ 2 ಸಾವಿರ ರೂ. ಮಾಸಿಕ ಸಂಕಷ್ಟ ಭತ್ಯೆ ನೀಡುವುದಾಗಿ ನಿರ್ಧರಿಸಲಾಗಿದೆ. ಬೆಳಕು ಕಾರ್ಯಕ್ರಮದಡಿ 98 ಸಾವಿರ ಮನೆಗೆ ವಿದ್ಯುತ್ ನೀಡಲಾಗುವುದು. ವಿದ್ಯುತ್ ಸರಬರಾಜು ನಿಗಮಗಳ ಪುನರ್ ರಚನೆ ಮಾಡಲಾಗುತ್ತದೆ. ಆಸ್ತಿ ಹಣ ಗಳಿಕೆ, ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕೆ ತಜ್ಞರ ಸಮಿತಿ ರಚನೆ ಮಾಡಲಾಗುತ್ತದೆ.
ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ: ಕೈಮಗ್ಗ ನೇಕಾರರಿಗೆ ವಾರ್ಷಿಕ ನೆರವು ₹5ಸಾವಿರಕ್ಕೆ ಏರಿಕೆ ಮಾಡಲಾಗಿದೆ. ನೇಕಾರರಿಗೆ ಶೇ.8ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು. ಸಹಕಾರಿ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬಡ್ಡಿ ಸಹಾಯಧನ ಜೊತೆಗೆ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ಇಲ್ಲಿ ಏನೋ ತಪ್ಪು ತಿಳಿವಳಿಕೆ ಇದೆ, ಇದರಿಂದ ನಾವೆಲ್ರೂ ನಾಶವಾಗ್ತೀವಿ
ಆಕಾಶದಲ್ಲಿ ಸಿಎಂ ಬೊಮ್ಮಾಯಿ ಬಜೆಟ್ ಪ್ರಚಾರ; ವಿಧಾನಸೌಧ ಸುತ್ತ ರೌಂಡ್ಸ್ ಹಾಕಿದ ಜೆಟ್- ವಿಡಿಯೋ ನೋಡಿ