ಸರ್ವಿಸ್ ರೋಡ್ ನಲ್ಲಿ ಓಡಾಡುವ ವಾಹನಗಳಿಗೂ ಟೋಲ್ ಹಣ ಸಂಗ್ರಹ; ಅನ್ಯಾಯದ ವಿರುದ್ಧ ಸವಾರರ ಆಕ್ರೋಶ

| Updated By: ಆಯೇಷಾ ಬಾನು

Updated on: May 20, 2024 | 9:08 AM

ರೂಲ್ಸ್ ಪ್ರಕಾರ ಹೆದ್ದಾರಿಯ ಟೋಲ್​ಗಳಲ್ಲಿನ ಸರ್ವಿಸ್ ರೋಡ್​ನಲ್ಲಿ ಓಡಾಡುವ ವಾಹನಗಳಿಗೆ ಹಣ ತೆಗೆದುಕೊಳ್ಳುವಂತಿಲ್ಲ. ಆದರೆ ಈ ಟೋಲ್​ನಲ್ಲಿ ಮಾತ್ರ ಸರ್ವಿಸ್ ರೋಡ್ ನಲ್ಲಿ ಹೋಗುವ ವಾಹನಗಳ ಮಾಲೀಕರ ಅಕೌಂಟ್ ನಿಂದಲೂ ಹಣ ಕಟ್ ಆಗ್ತಿದೆ. ಈ ಬಗ್ಗೆ ಕೆಲ ಸವಾರರು ಅಳಲು ತೋಡಿಕೊಂಡಿದ್ದು ಅನ್ಯಾಯದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸರ್ವಿಸ್ ರೋಡ್ ನಲ್ಲಿ ಓಡಾಡುವ ವಾಹನಗಳಿಗೂ ಟೋಲ್ ಹಣ ಸಂಗ್ರಹ; ಅನ್ಯಾಯದ ವಿರುದ್ಧ ಸವಾರರ ಆಕ್ರೋಶ
ಸರ್ವಿಸ್ ರೋಡ್ ನಲ್ಲಿ ಓಡಾಡುವ ವಾಹನಗಳಿಗೂ ಟೋಲ್ ಹಣ ಸಂಗ್ರಹ
Follow us on

ಬೆಂಗಳೂರು, ಮೇ.20: ಸಾಮಾನ್ಯವಾಗಿ ಹೆದ್ದಾರಿಯ ಟೋಲ್​ಗಳಲ್ಲಿನ ಸರ್ವಿಸ್ ರೋಡ್​ನಲ್ಲಿ (Service Road) ಓಡಾಡುವ ವಾಹನಗಳಿಗೆ ಹಣ (Toll Money) ತೆಗೆದುಕೊಳ್ಳುವಂತಿಲ್ಲ. ಆದರೆ ಇಲ್ಲಿ ಸರ್ವಿಸ್ ರೋಡ್ ನಲ್ಲಿ ಹೋದ ವಾಹನಗಳಿಗೂ ಹಣ ತೆಗೆದುಕೊಳ್ಳಲಾಗುತ್ತಿದೆ. ಸರ್ವಿಸ್ ರೋಡ್ ನಲ್ಲಿ ‌ಸಂಚಾರ ಮಾಡುವ ವಾಹನಗಳನ್ನು ಟೋಲ್ ನಲ್ಲಿರುವ ಕ್ಯಾಮರಾ ಗಳು ಕ್ಯಾಪ್ಚರ್ ಮಾಡುತ್ತದೆ. ಅದರಿಂದ ಟೋಲ್ ನವ್ರು ಮಾಹಿತಿ ತಗೊಂಡು ಹಣ ಕಟ್ ಮಾಡುತ್ತಿದ್ದಾರೆ ಎಂದು ಸವಾರರು ಆಕ್ರೋಶ ಹೊರ ಹಾಕಿದ್ದಾರೆ.

ಮೇ 17 ರಂದು ಬೆಳಿಗ್ಗೆ 8-15 ನಿಮಿಷಕ್ಕೆ ವಾಹನ ಮಾಲೀಕನೊಬ್ಬ ತನ್ನ ಮಗಳನ್ನು ಕಾಲೇಜಿಗೆ ಡ್ರಾಪ್ ಮಾಡಲು ಬೆಂಗಳೂರು ಟೂ ತುಮಕೂರು ರೋಡ್ ನಲ್ಲಿ ಬರುವ ಅಂಚೆಪಾಳ್ಯ ಸರ್ವಿಸ್ ರೋಡ್ ಮೂಲಕ ಹೋಗಿದ್ದಾರೆ. ಸರ್ವಿಸ್ ರೋಡ್ ದಾಟಿ ಮುಂದೆ ಹೋಗಿ 20 ನಿಮಿಷ ಆದ ಮೇಲೆ ಅವರಿಗೆ ಟೋಲ್ ಹಣ ಕಟ್ಟಾಗಿರುವುದರ ಬಗ್ಗೆ ಮೇಸೆಜ್ ಬಂದಿದೆ. ಈ ವ್ಯಕ್ತಿ ಹೋಗಿರೋದು ಸರ್ವಿಸ್ ರೋಡ್ ನಲ್ಲಿ ಆದ್ರು ಹಣ ಕಟ್ ಆಗಿದೆ. ಮೂರು ಗಂಟೆಗಳ ನಂತರ ಟೋಲ್ ಹತ್ತಿರ ಹೋಗಿ ನಾನು ಸರ್ವಿಸ್ ರೋಡ್ ನಲ್ಲಿ ಹೋಗಿದ್ದೇನೆ. ಆದ್ರೂ ನನಗೆ ಹಣ ಕಟ್ ಆಗಿದೆ ಯಾಕೆ ಅಂತ ಕೇಳಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹತ್ತು ಗುಂಡಾಗಳನ್ನು ಕರೆಸಿ ಅವಾಜ್ ಹಾಕಿಸಿದ್ರಂತೆ. ನಂತರ ಟೋಲ್ ಸಿಬ್ಬಂದಿಗಳು ಹೆಡ್ ಆಫೀಸ್ ಗೆ ಹೋಗಿ ಕೇಳಿ ಎಂದಿದ್ದಾರೆ. 30 ರೂಪಾಯಿ ಕಟ್ ಆಗಿದ್ದಕ್ಕೆ 300 ರೂಪಾಯಿ ಡೀಸೆಲ್ ಖರ್ಚು ಮಾಡಿಕೊಂಡು ಹೆಡ್ ಆಫೀಸ್​ಗೆ ಹೋಗಿ ದೂರು ನೀಡಲು ಸಾಧ್ಯ ನಾ? ಇದು ಮೊದಲ ಬಾರಿ ನಡೆದಿರೋದಲ್ಲ ಸಾಕಷ್ಟು ಬಾರಿ ಈ ರೀತಿ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಹಣ ಕಟ್ ಆಗಿದ್ದ ಮೇಸೆಜ್ ಅನ್ನ ತೋರಿಸಿ ಕೇಳಿದ್ದಾರೆ. ಕಮ್ಮಿ ಅಂದರೆ ತಿಂಗಳಲ್ಲಿ 20 ಕ್ಕೂ ಹೆಚ್ಚು ಬಾರಿ ಈ ರೀತಿಯಲ್ಲಿ ಹಣ ಕಟ್ ಆಗುತ್ತದೆ. ಒಂದು ಸಲಕ್ಕೆ 30 ರೂಪಾಯಿ ಕಟ್ ಆಗುತ್ತದೆ ಎಂದು ಟ್ರಾವೆಲ್ಸ್ ಮಾಲೀಕ ಹೆಚ್​ಸಿ ಹರೀಶ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮಾಂಸಪ್ರಿಯರಿಗೆ‌ ಶಾಕ್: ಚಿಕನ್, ಮಟನ್, ಮೊಟ್ಟೆಗಳ‌ ಬೆಲೆ‌ ಏರಿಕೆ‌!

ಇನ್ನೂ ಸರ್ವಿಸ್ ರೋಡ್ ನಲ್ಲಿ ‌ಸಂಚಾರ ಮಾಡುವ ವಾಹನಗಳನ್ನು ಟೋಲ್ ನಲ್ಲಿರುವ ಕ್ಯಾಮರಾಗಳು ಕ್ಯಾಪ್ಚರ್ ಮಾಡುತ್ತದೆ. ಅದರಿಂದ ಟೋಲ್ ನವ್ರು ಮಾಹಿತಿ ತಗೊಂಡು ಹಣ ಕಟ್ ಮಾಡುತ್ತಿದ್ದಾರೆ. ನಮಗೂ ಸುಮಾರು ಬಾರಿ ಸರ್ವಿಸ್ ರೋಡ್ ನಲ್ಲಿ ಹೋದಾಗಲು ಹಣ ಕಟ್ ಆಗಿದೆ. ಟೋಲ್ ನವ್ರದ್ದು ಭಾರಿ ಅನ್ಯಾಯ. ಅವರದ್ದು ತುಂಬಾ ತಪ್ಪಿದೆ. ಬಹಳ ದೌರ್ಜನ್ಯ ಮಾಡ್ತಾರೆ ಟೋಲ್ ನವ್ರು. ಇಲ್ಲಿ ರೌಡಿಗಳನ್ನು ಇಟ್ಟುಕೊಂಡಿದ್ದಾರೆ. ಇದು ತುಂಬಾ ಅನ್ಯಾಯ ಇದನ್ನು ನಾವು ಖಂಡಿಸ್ತಿವಿ ಎಂದು ಆಟೋ ಚಾಲಕ ಪರಶುರಾಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಹೆದ್ದಾರಿ ರೂಲ್ಸ್ ಪ್ರಕಾರ ಸರ್ವಿಸ್ ರೋಡ್ ಮೂಲಕ ಸಂಚಾರ ಮಾಡುವ ವಾಹನಗಳಿಗೆ ಟೋಲ್ ಚಾರ್ಜ್ ತೆಗೆದುಕೊಳ್ಳುವಂತಿಲ್ಲ, ಆದರೆ ಅಂಚೆಪಾಳ್ಯ ಬಳಿ ಟೋಲ್ ಟೆಂಡರ್ ಪಡೆದಿರುವ ಕಂಪನಿ, ಸರ್ವಿಸ್ ರೋಡ್ ನಲ್ಲಿ ಸಂಚಾರ ಮಾಡುವ ವಾಹನಗಳ ಬಳಿಯೂ ಹಣ ಕಟ್ ಮಾಡ್ತಿರೋದು ನಿಜಕ್ಕೂ ಸರಿಯಲ್ಲ ‌ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕಿದೆ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ