ಸಿ.ಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ? ಆತ್ಮಹತ್ಯೆಯ ಹಿಂದಿನ ದಿನ ನಡೆದಿದ್ದೇನು?

ಸಾವಿರಾರು ಕೋಟಿಯ ಒಡೆಯ, ಉದ್ಯಮಿ ಸಿ.ಜೆ ರಾಯ್​ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಐಟಿ ದಾಳಿ ವೇಳೆಯೇ ಎದೆಗೆ ಗುಂಡು ಹಾರಿಸಿಕೊಂಡ ಉದ್ಯಮಿಯ ಸಾವು ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಗುರಿಯಾಗಿದೆ. ಅವರ ಸಾವಿಗೆ ಸಂಬಂಧಿಸಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಈ ನಡುವೆ ರಾಯ್​ ಸಾವಿಗೆ ಬೇರೆಯದೇ ಕಾರಣವಿತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಅದಕ್ಕೆ ಸರಿಯಾಗಿ ಕೆಲ ಸ್ಫೋಟಕ ಮಾಹಿತಿ ಲಭಿಸಿದೆ. ರಾಯ್​ ಸಾವಿಗೂ ಮುನ್ನಾದಿನ ಏನಾಗಿತ್ತೆಂಬ ಮಾಹಿತಿ ಇಲ್ಲಿದೆ.

ಸಿ.ಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ? ಆತ್ಮಹತ್ಯೆಯ ಹಿಂದಿನ ದಿನ ನಡೆದಿದ್ದೇನು?
ಸಿ.ಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ?

Updated on: Feb 02, 2026 | 10:32 AM

ಬೆಂಗಳೂರು, ಫೆಬ್ರುವರಿ 02: ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ (CJ Roy Death) ಆತ್ಮಹತ್ಯೆ ಕೇಸ್ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಐಟಿ ತನಿಖೆ ವೇಳೆಯೇ ಗುಂಡು ಹಾರಿಸಿಕೊಂಡ ಅವರ ಸಾವಿನ ಸುತ್ತ ಹಲವಾರು ಕಥೆಗಳು ಸುಳಿದಾಡುತ್ತಿವೆ. ಈ ಮಧ್ಯೆ ಇನ್ನೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಉದ್ಯಮಿಯ ಈ ದಿಢೀರ್ ನಿರ್ಧಾರಕ್ಕೆ ಅವರ ಮಾನಸಿಕ ಸ್ಥಿತಿಯೇ ಕಾರಣವೇ ಎಂಬ ಪ್ರಶ್ನೆ ಮೂಡಿದ್ದು, ಅದಕ್ಕೆ ಪುಷ್ಠಿ ಕೊಡುವಂತೆ ಹಲವು ದಿನಗಳಿಂದ ರಾಯ್ ಮನೋವೈದ್ಯರಿಂದ ಕೌನ್ಸಿಲಿಂಗ್ ಪಡೆಯುತ್ತಿದ್ದರೆಂಬುದೂ ತಿಳಿದು ಬಂದಿದೆ.

ಸಾವಿನ ಹಿಂದಿನ ದಿನ ಕೌನ್ಸಿಲಿಂಗ್ ಪಡೆದಿದ್ದ ಉದ್ಯಮಿ

ತಮ್ಮ ಕಚೇರಿಯಲ್ಲೇ ಎದೆಗೆ ಗುಂಡು ಹಾರಿಸಿಕೊಂಡಿದ್ದ ರಾಯ್​ಗೆ ಕೇವಲ 15 ನಿಮಿಷದಲ್ಲೇ  ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಯಾಕೆ ಬಂತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅದಕ್ಕೆ ಉತ್ತರವೆಂಬಂತೆ ಕಳೆದ ಕೆಲ ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ತಮ್ಮ ಒತ್ತಡ, ಖಿನ್ನತೆ ನಿವಾರಣೆಗಾಗಿ ಬೆಂಗಳೂರಿನ ಖ್ಯಾತ ಮನೋವಿಜ್ಞಾನಿ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

ಆತ್ನಹತ್ಯೆಗೆ ಶರಣಾಗುವ ಹಿಂದಿನ ದಿನವಷ್ಟೇ ನಗರದ ಜಯನಗರ 8ನೇ ಬ್ಲಾಕ್‌ನಲ್ಲಿರುವ ಖ್ಯಾತ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್ ಪಡೆದಿದ್ದರು ಎನ್ನಲಾಗಿದೆ. ಈ ವೇಳೆ ವೈದ್ಯರ ಬಳಿ ಜೀವನದ ಒತ್ತಡಗಳು, ವೈಯಕ್ತಿಕ ಸಂಕಷ್ಟಗಳ ಕುರಿತು ರಾಯ್ ಮನಬಿಚ್ಚಿ ಮಾತನಾಡಿದ್ದರಂತೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಅವರು ಜೀವನ ಮತ್ತು ಸಾವಿನ ಕುರಿತು ಪದೇಪದೇ ಚರ್ಚಿಸುತ್ತಿದ್ದರಲ್ಲದೆ, ಸಾವಿನ ವಿಷಯದ ಮೇಲೆ ಸಿನಿಮಾ ನಿರ್ಮಾಣಕ್ಕೂ ಅವರು ಕೈ ಹಾಕಿದ್ದರೆಂದೂ ಹೇಳಲಾಗಿದೆ.

ಹೊರಗಿನಿಂದ ಆರೋಗ್ಯವಾಗಿ ಕಾಣಿಸಿಕೊಂಡರೂ ಒಳಗೊಳಗೆ ತೀವ್ರ ಒತ್ತಡ ಅನುಭವಿಸುತ್ತಿದ್ದ ರಾಯ್, ಚಿಕಿತ್ಸೆ ಪಡೆಯುತ್ತಿದ್ದರೂ ಖಿನ್ನತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೇ ಈ ದಿಢೀರ್ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ ಸಿ.ಜೆ ರಾಯ್ ಸಾವಿನ ಕೊನೆಯ ಕ್ಷಣ ಹೇಗಿತ್ತು; ಏನೆಲ್ಲಾ ಆಯ್ತು ಗೊತ್ತಾ?

ಸೌಂಡ್‌ಪ್ರೂಫ್ ರೂಮ್​ ಮಾಡಿಸಿಕೊಂಡಿದ್ದ ರಾಯ್

ರಾಯ್​ರ ಕಚೇರಿಯ ಚೇಂಬರ್ ಸಂಪೂರ್ಣವಾಗಿ ಸೌಂಡ್‌ಪ್ರೂಫ್ ಆಗಿದ್ದರಿಂದ ಘಟನೆ ನಡೆದು 20 ನಿಮಿಷಗಳಾದರೂ ಸಿಬ್ಬಂದಿಗೆ ತಿಳಿದಿರಲಿಲ್ಲೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ದೈನಂದಿನ ವ್ಯವಹಾರಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಿಸಿಕೊಂಡಿದ್ದ ರಾಯ್ ಕೊಠಡಿಯಲ್ಲಿ ಒಳಗಿನ ಶಬ್ದಗಳು ಹೊರಗೆ ಹೋಗುತ್ತಿರಲಿಲ್ಲ. ಇದರಿಂದಾಗಿ ಒಳಗೆ ಅಸಾಮಾನ್ಯ ಘಟನೆ ನಡೆದರೂ ಸಿಬ್ಬಂದಿಗೆ ಅನುಮಾನ ಉಂಟಾಗಿರಲಿಲ್ಲ ಎಂದು ಹೇಳಲಾಗಿದೆ. ಚೇಂಬರ್​ಗೆ ಹೋಗಿ ಬಹುಕಾಲ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಸಿಬ್ಬಂದಿ ಬಾಗಿಲು ತಟ್ಟಿದರೂ ರಾಯ್​ರಿಂದ ಉತ್ತರ ಸಿಗದ ಕಾರಣ ಬಾಗಿಲು ತೆರೆಯಲಾಗಿದ್ದು, ಈ ವೇಳೆ ರಾಯ್ ಅವರು ಕುರ್ಚಿಯ ಮೇಲೆ ಕುಸಿದ ಬಿದ್ದಿದ್ದರೆಂದು ಕಂಡುಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತೆಂದು ತಿಳಿದುಬಂದಿದೆ.

 ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us