ವಿಧಾನ ಪರಿಷತ್​ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​ ಫೈನಲ್; ನಾಗರಾಜ್ ಯಾದವ್, ಅಬ್ದುಲ್​​ ಜಬ್ಬಾರ್​ಗೆ ‘ಕೈ’ ಟಿಕೆಟ್​

| Updated By: ಆಯೇಷಾ ಬಾನು

Updated on: May 23, 2022 | 10:29 PM

ವಿಧಾನ ಪರಿಷತ್​ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​ ಘೋಷಿಸಿದೆ. ನಾಗರಾಜ್ ಯಾದವ್ ಮತ್ತು ಅಬ್ದುಲ್​​ ಜಬ್ಬಾರ್​ಗೆ ಟಿಕೆಟ್​ ನೀಡಿ ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಅಂತಿಮಗೊಳಿಸಿದೆ.

ವಿಧಾನ ಪರಿಷತ್​ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​ ಫೈನಲ್; ನಾಗರಾಜ್ ಯಾದವ್, ಅಬ್ದುಲ್​​ ಜಬ್ಬಾರ್​ಗೆ ‘ಕೈ’ ಟಿಕೆಟ್​
ಕಾಂಗ್ರೆಸ್
Follow us on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೇಲ್ಮನೆ ಟಿಕೆಟ್ ಸರ್ಕಸ್ ಫೈಟ್ ಜೋರಾಗಿದ್ದು ವಿಧಾನ ಪರಿಷತ್​ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​ ಘೋಷಿಸಿದೆ. ನಾಗರಾಜ್ ಯಾದವ್ ಮತ್ತು ಅಬ್ದುಲ್​​ ಜಬ್ಬಾರ್​ಗೆ ಟಿಕೆಟ್​ ನೀಡಿ ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಅಂತಿಮಗೊಳಿಸಿದೆ. ದಾವಣಗೆರೆ ಮೂಲದ ಅಬ್ದಲ್ ಜಬ್ಬಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಹಿಂದೆ ಕೂಡಾ ವಿಧಾನ ಪರಿಷತ್ ಸದಸ್ಯರಾಗಿದ್ದರು.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರವೇ ಕೊನೆಯ ದಿನ. ಹೀಗಾಗಿ ಸದ್ಯ ಕಾಂಗ್ರೆಸ್ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ. ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ದಿಲ್ಲಿ ವರಿಷ್ಠರ ಭೇಟಿಗೆ ತೆರಳಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು, ವರಿಷ್ಠರ ಸಮ್ಮುಖದಲ್ಲಿಯೇ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕೊನೆಗೆ ಅಂತಿಮ ಪಟ್ಟಿಯ ಸ್ಪಷ್ಟತೆ ಇಲ್ಲದೆ ಬರಿಗೈಲಿ ವಾಪಸ್ಸಾಗಿದ್ದರು. ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಎಂಬ ಕುರಿತು ಚರ್ಚಿಸಿ ಭಾನುವಾರ ಪಟ್ಟಿ ರವಾನಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಸೂಚಿಸಿತ್ತು. ಸದ್ಯ ಈಗ ಇಬ್ಬರ ಹೆಸರನ್ನು ಘೋಷಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪರಿಷತ್ ಟಿಕೆಟ್ ಹಂಚಿಕೆಯಲ್ಲಿ ಡಿಕೆಶಿ ಮೇಲುಗೈ
ತೀವ್ರ ಕುತೂಹಲ ಕೆರಳಿಸಿದ್ದ ಪರಿಷತ್ ಟಿಕೆಟ್ ಹಂಚಿಕೆ ಕಾಂಗ್ರೆಸ್ನಲ್ಲಿ ದೊಡ್ಡ ಸಂಚಲವನ್ನೇ ಎಬ್ಬಿಸಿದೆ. ಯಾಕಂದ್ರೆ, ಟಿಕೆಟ್ ಹಂಚಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಸಿದ್ದರಾಮಯ್ಯರನ್ನೇ ಹಿಂದಿಕ್ಕಿ ಮೇಲುಗೈ ಸಾಧಿಸಿದ್ದಾರೆ. ಅರ್ಥಾತ್ ಡಿಕೆಶಿ ಸೂಚಿಸಿದ ನಾಗರಾಜ್ ಯಾದವ್, ಹಾಗೂ ಅಬ್ದುಲ್ ಜಬ್ಬಾರ್ಗೆ ಪರಿಷತ್ ಟಿಕೆಟ್ ಹಂಚಿಕೆಯಾಗಿದೆ.

ನಾಗರಾಜ್ ಯಾದವ್ ಬಿಎಂಟಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗೂ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದಾರೆ. ದೆಹಲಿಗೆ ಹೋಗಿ ತಮ್ಮ ಆಪ್ತರಿಬ್ಬರಿಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಸಕ್ಸಸ್ ಆಗಿದ್ದಾರೆ. ಸಿದ್ದರಾಮಯ್ಯ ಸೂಚಿಸಿದ್ದ ಯಾರೊಬ್ಬರಿಗೂ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಸಿದ್ದರಾಮಯ್ಯನವರು ಎಂ.ಆರ್.ಸೀತಾರಾಮ್, ಐವಾನ್ ಡಿಸೋಜಾ ಹೆಸರು ಸೂಚಿಸಿದ್ದರು. ಆದ್ರೆ ಸಿದ್ದು ಸೂಚಿಸಿದ್ದ ಇಬ್ಬರಿಗೂ ಟಿಕೆಟ್ ನೀಡಿಲ್ಲ. ಹಿಂದುಳಿದ ವರ್ಗದವರಿಗೆ ಟಿಕೆಟ್ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಹಿಂದುಳಿದ ವರ್ಗದ ನಾಗರಾಜ್ ಯಾದವ್ ಟಿಕೆಟ್ ಕೊಡಿಸಿ ಡಿಕೆ ಗೇಮ್ ಆಡಿದ್ದಾರೆ. ನಾಗರಾಜ್ ಯಾದವ್ಗೆ ಟಿಕೆಟ್ ಕೊಡಿಸಿ ಸಿದ್ದರಾಮಯ್ಯಗೆ ಡಿಕೆ ಟಾಂಗ್ ಕೊಟ್ಟಿದ್ದಾರೆ. ಅಲ್ಪ ಸಂಖ್ಯಾತರ ಕೋಟಾದ ಅಡಿಯಲ್ಲಿ ಅಬ್ದುಲ್ ಜಬ್ಬಾರ್ಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಡಾಲಿ ಧನಂಜಯ ಬೌಲಿಂಗ್​ಗೆ ಬ್ಯಾಟ್ಸಮನ್​ ಕ್ಲೀನ್ ಬೌಲ್ಡ್​

ಹೈಕಮಾಂಡ್ ನಿರ್ಧಾರದ ರಹಸ್ಯ
ಕಾಂಗ್ರೆಸ್ ಹೈಕಮಾಂಡ್​ಗೆ ಸಿದ್ದರಾಮಯ್ಯ ಸೂಚಿಸಿದ್ದ ಅಭ್ಯರ್ಥಿ ಎಂ.ಆರ್.ಸೀತಾರಾಮ್ ವಿಚಾರದಲ್ಲಿ ಗೊಂದಲ, ಅಸಮಾಧಾನ ಇತ್ತು. ಈ ಹಿಂದೆ ವಿಧಾನಸಭೆಗೆ ಟಿಕೆಟ್ ನೀಡಿದ್ರೂ ಸೀತಾರಾಮ್ ಸ್ಪರ್ಧಿಸಿರಲಿಲ್ಲ. ಸೀತಾರಾಮ್ ಎರಡು ಬಾರಿ ಎಂಎಲ್ಸಿ, ಒಂದು ಬಾರಿ ಮಂತ್ರಿಯಾಗಿದ್ದರು. ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿಲ್ಲ ಅಂತಾ ಡಿಕೆ ಬಣ ವಾದ ಮಾಡಿದೆ. ಜೊತೆಗೆ ಬಿ.ಕೆ.ಹರಿಪ್ರಸಾದ್ ಕೂಡಾ ಸೀತಾರಾಮ್ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಬಾರಿಯೂ ಸಿದ್ದರಾಮಯ್ಯ, ಸೀತಾರಾಮ್ ಹೆಸರು ಸೂಚಿಸಿದ್ದರು. ಪದೇಪದೆ ಒಬ್ಬರ ಹೆಸರು ಸೂಚನೆ ಹಿನ್ನೆಲೆ ವರಿಷ್ಠರು ಮಹತ್ವ ನೀಡಿಲ್ಲ. ಅಲ್ಪಸಂಖ್ಯಾತ ಸಮುದಾಯ ಸಮಾಧಾನ ಪಡಿಸಲು ಜಬ್ಬಾರ್ಗೆ ಮಣೆ ಹಾಕಲಾಗಿದೆ. ಸಿಎಂ ಇಬ್ರಾಹಿಂ ಪಕ್ಷ ಬಿಟ್ಮೇಲೆ ಕಾಂಗ್ರೆಸ್ ಮೇಲೆ ಮುಸ್ಲಿಮರು ಮುನಿಸಿಕೊಂಡಿದ್ದರು. ಇಬ್ರಾಹಿಂಗೆ ಪರಿಷತ್ ವಿಪಕ್ಷ ಸ್ಥಾನ ನೀಡದೇ ಇದ್ದಾಗ ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರಿಗೆ ಸ್ಥಾನಮಾನ ಸಿಗಲ್ಲ ಎಂದು ಸಿಟ್ಟು ಹೆಚ್ಚಾಗಿತ್ತು. ಹೀಗಾಗಿ ಹೈಕಮಾಂಡ್ ಅಬ್ದುಲ್ ಜಬ್ಬಾರ್ಗೆ ಟಿಕೆಟ್ ನೀಡಿ ಸಮಾಧಾನ ಪಡಿಸೋ ಕೆಲಸ ಮಾಡಿದೆ.

ಜಬ್ಬಾರ್‌ಗೆ 3ನೇ ಸಲ ಒಲಿದು ಬಂದ ಪರಿಷತ್ ಸದಸ್ಯ ಸ್ಥಾನ
2014 ರಲ್ಲಿ ಬಿಎಸ್​ವೈ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಮಮ್ತಾಜ್ ಅಲಿ ಖಾನ್ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕೇವಲ 45 ದಿನ ಮಾತ್ರ ಅಧಿಕಾರಿ ಅನುಭವಿಸಿದ್ದ ಜಬ್ಬಾರ್. ನಂತರ ಅದೇ 2014 ರಲ್ಲಿ ಪುನರ್ ಆಯ್ಕೆ ಆಗಿ ಆರು ವರ್ಷ ಅಧಿಕಾರ ನಡೆಸಿದ್ದರು. ಈಗ ಮತ್ತೆ ಮೂರನೇ ಸಲ ವಿಧಾನ ಪರಿಷತ್ ಸದಸ್ಯ ಸ್ಥಾನ ಒಲಿದು ಬಂದಿದೆ. ಜಬ್ಬಾರ್ ಈ ಹಿಂದೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಸುಮಾರು 4 ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ.

Published On - 7:49 pm, Mon, 23 May 22