ಡಾಲಿ ಧನಂಜಯ ಬೌಲಿಂಗ್​ಗೆ ಬ್ಯಾಟ್ಸಮನ್​ ಕ್ಲೀನ್ ಬೌಲ್ಡ್​

ಹಲವು ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿ ಇರುವ ಧನಂಜಯ ಅವರು ‘ಪುಷ್ಪ 2’ ಚಿತ್ರದ ಕೆಲಸಕ್ಕೆ ಶೀಘ್ರವೇ ಟಾಲಿವುಡ್​ಗೆ ತೆರಳಲಿದ್ದಾರೆ. ಇವುಗಳ ಮಧ್ಯೆ ಬಿಡುವು ಮಾಡಿಕೊಂಡು ಫ್ರೆಂಡ್ಸ್ ಜತೆ ಸಮಯ ಕಳೆಯುತ್ತಿದ್ದಾರೆ.

TV9kannada Web Team

| Edited By: Rajesh Duggumane

May 23, 2022 | 9:35 PM

ಡಾಲಿ ಧನಂಜಯ (Dhananjay) ಅವರು ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ. ಹಲವು ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ‘ಪುಷ್ಪ 2’ ಚಿತ್ರದ ಕೆಲಸಕ್ಕೆ ಶೀಘ್ರವೇ ಟಾಲಿವುಡ್​ಗೆ ತೆರಳಲಿದ್ದಾರೆ. ಇವುಗಳ ಮಧ್ಯೆ ಬಿಡುವು ಮಾಡಿಕೊಂಡು ಫ್ರೆಂಡ್ಸ್ ಜತೆ ಸಮಯ ಕಳೆಯುತ್ತಿದ್ದಾರೆ. ಧನಂಜಯ  ಅವರು ಗೆಳೆಯರ ಜತೆ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಧನಂಜಯ ಅವರು ಮಾಡಿದ ಬೌಲಿಂಗ್​ಗೆ ಬ್ಯಾಟ್ಸಮನ್​ ಕ್ಲೀನ್​ ಬೌಲ್ಡ್ ಆಗಿದ್ದಾರೆ. ಧನಂಜಯ ಅವರ ಬೌಲಿಂಗ್​ಅನ್ನು ಎಲ್ಲರೂ ಕೊಂಡಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada