ಚಕ್ರವರ್ತಿ ಸೂಲಿಬೆಲೆ ಪಾಠವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು, ಅವರೇನು ಭಯೋತ್ಪಾದಕರೇ? ಪ್ರಮೋದ್ ಮುತಾಲಿಕ್

ಚಕ್ರವರ್ತಿ ಸೂಲಿಬೆಲೆ ಪಾಠವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು, ಅವರೇನು ಭಯೋತ್ಪಾದಕರೇ? ಪ್ರಮೋದ್ ಮುತಾಲಿಕ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 23, 2022 | 10:52 PM

ಸೂಲಿಬೆಲೆಯವರ ಪಾಠವನ್ನು ಪಠ್ಯಕ್ರಮದಲ್ಲಿ ಸೇರಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಮುತಾಲಿಕ್ ಅವರು ಅದರಲ್ಲಿ ತಪ್ಪೇನಿದೆ ಅಂತ ಕೇಳಿದರು. ಸೂಲಿಬೆಲೆ ಅವರು ಈ ದೇಶದ ಒಬ್ಬ ಜವಾಬ್ದಾರಿಯುತ ನಾಯಕರಾಗಿದ್ದಾರೆ, ಅವರ ಪಠ್ಯವನ್ನು ಸೇರಿಸಿರುವುದು ಅಪರಾಧವೇನೂ ಅಲ್ಲ ಎಂದು ಮುತಾಲಿಕ್ ಹೇಳಿದರು.

Hubballi: ಚಿಂತಕ ಮತ್ತು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಅವರ ಲೇಖನವನ್ನು ಶಾಲಾಪಠ್ಯದಲ್ಲಿ (Syllabus) ಸೇರಿಸಿರುವುದು ವಿವಾದ ಸೃಷ್ಟಿಸಿದೆ. ವಿರೋಧ ಪಕ್ಷಗಳು ಅದನ್ನು ತೀವ್ರವಾಗಿ ವಿರೋಧಿಸುತ್ತಿದ್ದರೆ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಇದೇ ವಿಷಯವಾಗಿ ಹುಬ್ಬಳ್ಳಿಯ ಟಿವಿ9 ಕನ್ನಡ ವಾಹಿನಿ ವರದಿಗಾರ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರಮೋದ್ (Pramod Muthalik) ಮುತಾಲಿಕ್ ಅವರನ್ನು ಮಾತಾಡಿಸಿದರು. ಸೂಲಿಬೆಲೆಯವರ ಪಾಠವನ್ನು ಪಠ್ಯಕ್ರಮದಲ್ಲಿ ಸೇರಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಮುತಾಲಿಕ್ ಅವರು ಅದರಲ್ಲಿ ತಪ್ಪೇನಿದೆ ಅಂತ ಕೇಳಿದರು. ಸೂಲಿಬೆಲೆ ಅವರು ಈ ದೇಶದ ಒಬ್ಬ ಜವಾಬ್ದಾರಿಯುತ ನಾಯಕರಾಗಿದ್ದಾರೆ, ಅವರ ಪಠ್ಯವನ್ನು ಸೇರಿಸಿರುವುದು ಅಪರಾಧವೇನೂ ಅಲ್ಲ ಎಂದು ಮುತಾಲಿಕ್ ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಅವರೇನು ಅಪರಾಧಿಯೇ? ಅಥವಾ ದೇಶದ್ರೋಹಿಯೇ, ಭಯೋತ್ಪಾದಕರೇ, ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವರೇ? ಅವರೊಬ್ಬ ಚಿಂತಕ, ದೇಶದ ಬಗ್ಗೆ ಸದಾ ಚಿಂತೆ ಮಾಡುವ ವ್ಯಕ್ತಿ, ಪ್ರವಚನ ಲೇಖನಗಳನ್ನು ಬರೆಯುತ್ತಾರೆ, ಉತ್ತಮ ಭಾಷಣಕಾರರೂ ಆಗಿದ್ದಾರೆ. ಅವರ ವಿಚಾರಧಾರೆಯನ್ನು ಪುಸ್ತಕದಲ್ಲಿ ಸೇರಿಸಿದ್ದರೆ ಅದರಲ್ಲಿ ತಪ್ಪೇನಿದೆ ಎಂದು ಮುತಾಲಿಕ್ ಕೇಳಿದರು. ವ್ಯಕ್ತಿಯನ್ನು ಪಕ್ಕಕ್ಕಿಟ್ಟು ಅವರ ವಿಚಾರಧಾರೆ ಬಗ್ಗೆ ಆಕ್ಷೇಪಣೆಗಳಿದ್ದರೆ ಅದನ್ನು ಹೇಳಲಿ, ಸುಖಾಸುಮ್ಮನೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಅಂತ ಅವರು ಹೇಳಿದರು.

ಕೇಸರೀಕರಣದ ಬಗ್ಗೆಯೂ ಮಾತಾಡಿದ ಮುತಾಲಿಕ್ ಅವರು ಕೇಸರೀಕರಣದ ಅಂದರೇನು ಅನ್ನೋದು ಅರ್ಥ ಮಾಡಿಕೊಳ್ಳಬೇಕಿದೆ. ಸಾವಿರಾರು ವರ್ಷಗಳಿಂದ ಕೇಸರಿ ರಾಷ್ಟ್ರಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿದೆ. ಕೇಸರೀಕರಣ ಅನ್ನುವಂಥದ್ದು ಆರೆಸೆಸ್ಸೀಕಣ ಅಲ್ಲ, ಅದು ತ್ಯಾಗವನ್ನು ಬಿಂಬಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ:   ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತೀಯ ಅಮರಪುತ್ರರು ಪಾಠ ಸೇರ್ಪಡೆಗೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ