ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತೀಯ ಅಮರಪುತ್ರರು ಪಾಠ ಸೇರ್ಪಡೆಗೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ

ಶಿಕ್ಷಣ ಇಲಾಖೆ ಹಾಗೂ ಪಠ್ಯ ಪರಿಷ್ಕರಣಾ ಸಮಿತಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದು, ಇತಂಹ ಸುಳ್ಳುಗಾರನ ಪಠ್ಯವನ್ನು ಮೊದಲು ಪಠ್ಯಪುಸ್ತಕದಿಂದ ಕಿತ್ತು ಬಿಸಾಡುವಂತೆ ಟ್ವಿಟ್ಟರ್​ನಲ್ಲಿ ಹ್ಯಾಶ್ ಟ್ಯಾಗ್ ಮೂಲಕ ಒತ್ತಾಯಿಸಲಾಗುತ್ತಿದೆ. 

ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತೀಯ ಅಮರಪುತ್ರರು ಪಾಠ ಸೇರ್ಪಡೆಗೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ
ತಾಯಿ ಭಾರತಿಯ ಅಮರಪುತ್ರರು ಪಾಠ ಸೇರ್ಪಡೆಗೆ ತೀವ್ರ ವಿರೋಧ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 22, 2022 | 1:05 PM

ಬೆಂಗಳೂರು: ದಿನಕ್ಕೊಂದು ವಿರೋಧಕ್ಕೆ ಪಠ್ಯ ಪರಿಷ್ಕರಣೆ ಕಾರಣವಾಗುತ್ತಿದೆ. ಪರಿಷ್ಕೃತ ಪಠ್ಯಕ್ಕೆ ಹೊಸ ಪಾಠಗಳ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತೀಯ ಅಮರಪುತ್ರರು ಪಾಠ ಸೇರ್ಪಡೆಗೆ ತೀವ್ರ ವಿರೋಧ ಉಂಟಾಗಿದ್ದು, ಹೆಂಗ್ ಪುಂಗ್ಲಿ ಸುಳ್ಳುಗಳನ್ನು ಮಕ್ಕಳ ಪಠ್ಯಪುಸ್ತಕದಲ್ಲಿ ಸೇರಿಸಿದ ಸರ್ಕಾರ ಅಂತಾ ಚರ್ಚೆಗಳು ನಡೆಯುತ್ತಿವೆ. 10ನೇ ತರಗತಿಯ ಕನ್ನಡ ಪಠ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠ ಸೇರ್ಪಡೆ ಮಾಡಲಾಗಿದ್ದು, ಭಗತ್ ಸಿಂಗ್ ಪಾಠದ ಜೊತೆ ಚಕ್ರವರ್ತಿ ಸೂಲಿಬೆಲೆಯವರ ಪಾಠವನ್ನು ಶಿಕ್ಷಣ ಇಲಾಖೆ ಸೇರಿಸಿದೆ. ಶಿಕ್ಷಣ ಇಲಾಖೆ ಹಾಗೂ ಪಠ್ಯ ಪರಿಷ್ಕರಣಾ ಸಮಿತಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದು, ಇತಂಹ ಸುಳ್ಳುಗಾರನ ಪಠ್ಯವನ್ನು ಮೊದಲು ಪಠ್ಯಪುಸ್ತಕದಿಂದ ಕಿತ್ತು ಬಿಸಾಡುವಂತೆ ಟ್ವಿಟ್ಟರ್​ನಲ್ಲಿ ಹ್ಯಾಶ್ ಟ್ಯಾಗ್ ಮೂಲಕ ಒತ್ತಾಯಿಸಲಾಗುತ್ತಿದೆ.

ಭಗತ್​, ಹೆಡ್ಗೆವಾರ್, ನಾರಾಯಣ ಗುರು ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ: ರೋಹಿತ್ ಚಕ್ರತೀರ್ಥ

ಭಗತ್, ಹೆಡ್ಗೆವಾರ್, ನಾರಾಯಣಗುರುಗಳ ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ. ಎಡ ಸಿದ್ದಾಂತಿಗಳು ಅವರು ಕಟ್ಟಿರುವ ಸೌಧವನ್ನು ಸ್ಪಲ್ಪ ಅಲಗಾಡಿಸಿದರು ತಡೆದುಕೊಳ್ಳೊಕೆ ಆಗಲ್ಲ. ಈ ಕಾರಣಕ್ಕೋಸ್ಕರ ಅವರು ವಿವಾದಗಳನ್ನು ಮಾಡುತ್ತಿದ್ದಾರೆ ಎಂದು ಟಿವಿ 9ಗೆ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿಕೆ ನೀಡಿದ್ದಾರೆ. ಅಲ್ಲೊಂದು, ಇಲ್ಲೊಂದು ಪಿಡಿಎಫ್ ಓಡುತ್ತಿದೆ ಅದು ಯಾವುದು ಅಧಿಕೃತವಲ್ಲ. ಕೆಲವು ಪುಟಗಳನ್ನು ಸೇರಿಸಬಹುದು, ಅಥವಾ ತೆಗೆಯಬಹುದು ಹಾಗಾಗಿ ಅಧಿಕೃತವಾಗಿ ಯಾವುದು ಪಿಡಿಎಫ್ ಬಂದಿಲ್ಲ. ಪಠ್ಯಪುಸ್ತಕ ಮಕ್ಕಳ ಕೈಗೆ ಹೋಗುವವರೆಗೂ ಯಾವ ವದಂತಿಗೆ ಕಿವಿಕೊಡಬಾರದು. ಭಗತ್, ನಾರಾಯಣಗುರು ಪಾಠ ಬಿಟ್ಟಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ್ದು, ನಾರಾಯಣ ಗುರು ಪಾಠ ಕೈ ಬಿಡುವ ಪ್ರಶ್ನೆಯಿಲ್ಲ. ಇದು 7ನೇ ತರಗತಿ ಹಾಗೂ 10ನೇ ತರಗತಿಯಲ್ಲಿ ಕೂಡಾ ಇದೆ ಎಂದು ಹೇಳಿದರು.

ಇದನ್ನೂ ಓದಿ: RCB: ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಎದುರಾಳಿ ಯಾರು?, ಪಂದ್ಯ ಯಾವಾಗ?, ಎಲ್ಲಿ: ಇಲ್ಲಿದೆ ಮಾಹಿತಿ

ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪಠ್ಯಪುಸ್ತಕ ಪರಿಶೀಲನಾ ಸಮಿತಿ 10ನೇ ತರಗತಿ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಅವರ ಭಾಷಣ ಸೇರಿಸಿದ್ದಕ್ಕೆ ವಿವಾದ ಸೃಷ್ಟಿಯಾಗಿತ್ತು. ಅದೇ ರೀತಿಯಾಗಿ SSLC ಪಠ್ಯದಿಂದ ನಾರಾಯಣ ಗುರುಗಳ ವಿಷಯವನ್ನು ಕೈಬಿಟ್ಟಿದೆ ಎನ್ನಲಾಗುತ್ತಿದ್ದು, ಈ ಕುರಿತಾಗಿ ವಿಧಾನಸೌಧದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ. ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜೊತೆಗೆ ನಾನು ಮಾತಾಡಿದ್ದೇನೆ. ಅಂತಹ ಯಾವುದೇ ತೀರ್ಮಾನ ಕೈಗೊಂಡಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಸಾರ್ವಜನಿಕರು ಸುಳ್ಳು ವದಂತಿಗಳನ್ನ ನಂಬಬಾರದು. ವಿರೋಧ ಪಕ್ಷಗಳು ಸಹ ಇಂತಹ ವದಂತಿ ಹರಡಬಾರದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada