ಕಡಿಮೆ ಬೆಲೆಗೆ ಸೈಟ್ ಖರೀದಿಸುವ ಮುನ್ನ ಎಚ್ಚರ; ನವಯುಗ ಪ್ರಾಪರ್ಟಿಸ್ ವಿರುದ್ಧ ವಂಚನೆ ಆರೋಪ, ಮೋಸ ಹೋದ ಜನರಿಂದ ಪ್ರತಿಭಟನೆ
ಸದ್ಯ ಹಣ ಕೊಟ್ಟು ಮೋಸ ಹೋದವರು ನವಯುಗ ಪ್ರಾಪರ್ಟಿಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪನಿಗೆ ಹಣ ಕಟ್ಟಿರುವ ದಾಖಲೆ ಪತ್ರ ಹಿಡಿದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬೆಂಗಳೂರು: ನವಯುಗ ಪ್ರಾಪರ್ಟಿಸ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಸುಮಾರು 250 ಜನರಿಗೆ ಮೋಸ ಆಗಿದೆ ಎನ್ನಲಾಗುತ್ತಿದೆ. ಕಡಿಮೆ ದರದಲ್ಲಿ ಸೈಟ್ ನೀಡುವುದಾಗಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಹೆಚ್ಎಸ್ಆರ್ ಲೇಔಟ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದಾರೆ. 20•30 ಸೈಟ್ ಆರು ಲಕ್ಷ, 30•40 ಸೈಟ್ ಹದಿನೈದು ಲಕ್ಷಕ್ಕೆ ಕೊಡ್ತಿವಿ ಎಂದು ಫೋನ್ಗೆ ಮೇಸೆಜ್, ಸೋಶಿಯಲ್ ಮೀಡಿಯಾ ಮೂಲಕ ನವಯುಗ ಪ್ರಾಪರ್ಟಿಸ್ ಗ್ರಾಹಕರಿಗೆ ಗಾಳ ಹಾಕಿದೆ. ಹೊಸೂರು, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರ, ಆನೇಕಲ್ ಭಾಗದಲ್ಲಿ ಸೈಟ್ ನೀಡುವುದಾಗಿ ಹಣ ಪೀಕಿದ್ರು.
‘ಇಂದೇ ಸೈಟ್ ಬುಕ್ ಮಾಡಿದ್ರೆ ಗೋಲ್ಡ್ ಕಾಯಿನ್ ಫ್ರೀ’ ಎಂದು ಹೇಳಿ ವಂಚನೆ ಮಾಡಿದ್ದಾರೆ. ಸದ್ಯ ಹಣ ಕೊಟ್ಟು ಮೋಸ ಹೋದವರು ನವಯುಗ ಪ್ರಾಪರ್ಟಿಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪನಿಗೆ ಹಣ ಕಟ್ಟಿರುವ ದಾಖಲೆ ಪತ್ರ ಹಿಡಿದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಂಪನಿ ಮಾಲೀಕ ನವೀನ್ ಸೇರಿ 10 ಜನರ ವಿರುದ್ಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಕಚೇರಿ ಮುಚ್ಚಿಕೊಂಡು ಮಾಲೀಕರು ಪರಾರಿಯಾಗಿದ್ದಾರೆ. ಸಿಬ್ಬಂದಿ, ಮಾಲೀಕರ ಫೋನ್ಗಳು ಸ್ವೀಚ್ ಆಫ್ ಆಗಿದೆ. ಘಟನೆ ಸಂಬಂಧ ಮಾಹಿತಿ ಹಾಗೂ ಆರೋಪಿಗಳನ್ನು ಹುಡುಕಲು ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಇಂಧನ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರ ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದರೋಡೆ ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದರೋಡೆ ಮಾಡುತ್ತಿದ್ದ ಮೂವರು ಖದೀಮರನ್ನು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂದನ್, ಜಿಯಾವುಲ್ಲಾ ಖಾನ್, ಶರತ್ ಬಂಧಿತ ಆರೋಪಿಗಳು. ಬಾಡಿಗೆ ಮನೆ ನೋಡುವ ನೆಪದಲ್ಲಿ ಬಂದಿದ್ದ ದರೋಡೆಕೋರರು ಬಾಡಿಗೆ ಮನೆ ಗಲೀಜಾಗಿದೆ ನೋಡಿ ಎಂದಿದ್ದಾರೆ. ಈ ವೇಳೆ ಮನೆಯೊಳಗೆ ಮಾಲಕಿ ಹೋದಾಗ ಕೈಕಾಲು ಕಟ್ಟಿ 48 ಗ್ರಾಂ ಮಾಂಗಲ್ಯ ಸರ, ಓಲೆ ಕಿತ್ತು ಪರಾರಿಯಾಗಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದು $1.5 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್, ಮಾರಕಾಸ್ತ್ರ ಜಪ್ತಿ ಮಾಡಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 4:48 pm, Sun, 22 May 22