ಬೆಂಗಳೂರಿನಲ್ಲಿ ಕಣ್ಣಾಮುಚ್ಚಾಲೆ ಆಡೋಣ ಎಂದು ಕರೆದು ಉದ್ಯಮಿ ಮಗನ ಮೈ ಮೇಲಿದ್ದ ಚಿನ್ನಾಭರಣ ಕದ್ದು ಪರಾರಿ
ಆರು ವರ್ಷದ ಬಾಲಕನನ್ನು ಕರೆದು ಚಿನ್ನ ಕದ್ದು ಇಬ್ಬರು ಬೈಕ್ನಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ರಾಘವೇಂದ್ರ ಸದ್ಯ ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಕಣ್ಣಾಮುಚ್ಚಾಲೆ ಆಟ ಆಡೋಣ ಎಂದು ಕರೆದು ಪುಸಲಾಯಿಸಿ ಬಾಲಕ (Boy) ಬಳಿಯಿದ್ದ ಚಿನ್ನಾಭರಣವನ್ನು (Jewellery) ಕದ್ದು ಪರಾರಿಯಾಗಿರುವ ಘಟನೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿ ರಾಘವೇಂದ್ರ ಎಂಬುವವರು ಕುಟುಂಬ ಸಮೇತರಾಗಿ ಮಾಗಡಿ ರಸ್ತೆಯ ಸರಸ್ವತಿ ಕನ್ವೆನ್ಶನ್ ಹಾಲ್ ಬಳಿ ಸಂಬಂಧಿಯ ಮದುವೆಗೆಂದು ಬಂದಿದ್ದರು. ಈ ವೇಳೆ ಖದೀಮರು ಉದ್ಯಮಿ ಮಗನ ಮೈ ಮೇಲಿದ್ದ ಮೂರುವರೆ ಲಕ್ಷ ರೂ. ಮೌಲ್ಯದ 79 ಗ್ರಾಂ ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಆರು ವರ್ಷದ ಬಾಲಕನನ್ನು ಕರೆದು ಚಿನ್ನ ಕದ್ದು ಇಬ್ಬರು ಬೈಕ್ನಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ರಾಘವೇಂದ್ರ ಸದ್ಯ ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ.
ಟ್ರಾಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅರೆಸ್ಟ್: ಕಲಬುರಗಿ: ಟ್ರ್ಯಾಕ್ಟರ್ ಟ್ರಾಲಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಶಹಬಾದ್ ಪೋಲಿಸರ ಬಲೆಗೆ ಖದೀಮರು ಬಿದ್ದಿದ್ದಾರೆ. ಸಿದ್ದಾಥ್೯, ಅನೀಲ್ ರಾಠೋಡ್ ಬಂಧಿತರು. ಬಂಧಿತರು ಕಲಬುರಗಿ ಜಿಲ್ಲೆಯ ನಿವಾಸಿಗಳು. ಈ ಹಿಂದೆ ಕಳ್ಳತನ ಮಾಡಿದ್ದ 4 ಟ್ರ್ಯಾಕ್ಟರ್ ಟ್ರಾಲಿಗಳನ್ನ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ | ರಷ್ಯಾದ ಯುದ್ಧ ಚಿಹ್ನೆ Z ಮತ್ತು V ಅಕ್ಷರಗಳನ್ನು ನಿಷೇಧಿಸಿದ ಉಕ್ರೇನ್ ಸಂಸತ್ತು
ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬಂಧನಕ್ಕೊಳಗಾಗಿದ್ದಾರೆ. ಬೆಂಗಳೂರಿನ ಗಿರಿನಗರ ಪೊಲೀಸರು ಆರೋಪಿ ಮನೋರಂಜಿತ್, ಸುಗೇಶ್ ಕುಮಾರ್ನ ಬಂಧಿಸಿದ್ದಾರೆ. ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದಾರೆ. ದಾಳಿ ನಡೆಸಿದ ಗಿರಿನಗರ ಪೊಲೀಸರು 51 ಗ್ರಾಂ ಎಕ್ಸ್ ಟಸಿ ಮಾತ್ರೆಗಳು, ವಿವಿಧ ಬಗೆಯ ಡ್ರಗ್ಸ್ಗಳು, ಮೊಬೈಲ್ ಫೋನ್, ಕಾರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ಮಿಕ ಅನುಮಾನಾಸ್ಪದ ಸಾವು: ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಸೂರಳ್ಳಿಯ ಫೌಲ್ಟ್ರಿ ಫಾರಂನಲ್ಲಿ ಕಾರ್ಮಿಕ ಅನುಮಾನಾಸ್ಪವಾಗಿ ಸಾವನ್ನಪ್ಪಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿ ಶ್ರೀನಿವಾಸ ಶೆಟ್ಟಿ(40) ಶವ ಪತ್ತೆಯಾಗಿದೆ. ಶ್ರೀನಿವಾಸ ಶೆಟ್ಟಿ ಉಮೇಶ್ ಎಂಬುವರಿಗೆ ಸೇರಿದ ಫೌಲ್ಟ್ರಿ ಫಾರಂನಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು. ಸದ್ಯ ಈ ಪ್ರಕರಣ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:37 am, Mon, 23 May 22