ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ! ಫ್ಲೈಓವರ್ ಮೇಲಿಂದ ಕೆಳಗೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
ದ್ವಿಚಕ್ರ ಚಾಲಕ ಏರ್ಫೊರ್ಟ್ ಫ್ಲೈಓವರ್ ಮೇಲೆ ಹೋಗುತ್ತಿದ್ದರು. ಈ ವೇಳೆ ಎಡಬದಿಯಲ್ಲಿ ಹೋಗುತ್ತಿದ್ದ ಬೈಕ್ ಹಿಂದಿನಿಂದ ಬಂದ ಕಾರು ರಭಸವಾಗಿ ಗುದ್ದಿದೆ. ಪರಿಣಾಮ ಫ್ಲೈಓವರ್ ಮೇಲಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ.
ಬೆಂಗಳೂರು: ನಗರದ ಏರ್ಪೋರ್ಟ್ ರಸ್ತೆಯಲ್ಲಿ ಇಂದು (ಮೇ 22) ಭೀಕರ ಅಪಘಾತ (Accident) ನಡೆದಿದ್ದು, ಘಟನೆಯಲ್ಲಿ ಫ್ಲೈಓವರ್ (fly over) ಮೇಲಿಂದ ಕೆಳಗೆ ಬಿದ್ದು ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಜಕ್ಕೂರು ಏರೋಡ್ರಮ್ ಸಮೀಪ ಈ ದುರ್ಘಟನೆ ಸಂಭವಿಸಿದೆ. ದ್ವಿಚಕ್ರ ಚಾಲಕ ಏರ್ಫೊರ್ಟ್ ಫ್ಲೈಓವರ್ ಮೇಲೆ ಹೋಗುತ್ತಿದ್ದರು. ಈ ವೇಳೆ ಎಡಬದಿಯಲ್ಲಿ ಹೋಗುತ್ತಿದ್ದ ಬೈಕ್ ಹಿಂದಿನಿಂದ ಬಂದ ಕಾರು ರಭಸವಾಗಿ ಗುದ್ದಿದೆ. ಪರಿಣಾಮ ಫ್ಲೈಓವರ್ ಮೇಲಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ.
ಬೈಕ್ನಲ್ಲಿ ಹಿಂಬದಿ 12 ವರ್ಷದ ಬಾಲಕನಿದ್ದ. ಆತ ಗಂಭೀರ ಗಾಯಗೊಂಡಿದ್ದಾನೆ. ಅಪಘಾತ ಸ್ಥಳದಿಂದ 200 ಮೀಟರ್ ದೂರದಲ್ಲಿ ಬೈಕ್ ಬಿದ್ದಿದೆ. ಸದ್ಯ ಪೊಲೀಸರು ಅಪಘಾತಕ್ಕೆ ಒಳಗಾದವರ ಗುರುತು ಪತ್ತೆಹಚ್ಚುತ್ತಿದ್ದಾರೆ. ಕೆ ಆರ್ ಪುರಂ ಬಳಿ ಕಾರು ಚಾಲಕ ವರುಣ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Colorectal Cancer: ಗುದನಾಳದ ಕ್ಯಾನ್ಸರ್ ಎಂದರೇನು? ಲಕ್ಷಣಗಳೇನು? ಡಯಟ್ನಲ್ಲಿ ಏನಿರಬೇಕು
ಮೃತ ವ್ಯಕ್ತಿ 44 ವರ್ಷದ ಗೋವಿಂದಪ್ಪ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿ ಜಕ್ಕೂರು ಲೇಔಟ್ ನಿವಾಸಿ. ಗೋವಿಂದಪ್ಪ ಸಂಬಂಧಿಕರ ಮಗನಿಗೆ ಜಕ್ಕೂರು ಏರೋಡ್ರಮ್ ತೋರಿಸಲು ಬಂದಿದ್ದರು. ಏರ್ಪೋರ್ಟ್ ಫ್ಲೈಓವರ್ ಮೇಲೆ ಮೊಪೆಡ್ ಬೈಕ್ ನಿಲ್ಲಿಸಿ ಏರೋಡ್ರಮ್ ತೋರಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಮೊಪೆಡ್ಗೆ ಡಿಕ್ಕಿ ಹೊಡೆದಿದೆ. ಬಾಲಕ ಸಂಜಯ್ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಏರ್ಪೋರ್ಟ್ ಕಡೆಯಿಂದ ವೇಗವಾಗಿ ಬರುತ್ತಿತ್ತು. ಕಾರಿನಲ್ಲಿ ಐವರು ಸ್ನೇಹಿತರು ಇದ್ದರು. ಬಂಧನಕ್ಕೊಳಗಾಗಿರುವ ವರುಣ್ ಜೆಸಿ ನಗರದ ಮೆಡಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಬೆಳಗಾವಿ ಮೂಲದ ಮೂವರು ಮೃತ: ಗೋವಾದ ಮಾಪ್ಸಾ ಜಿಲ್ಲೆಯ ಕುಛೇಲಿ ಬಳಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಬೆಳಗಾವಿ ಮೂಲದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಯರ್(28), ರೋಹನ್(26), ಸನ್ನಿ ಅವನೇಕರ್(31) ಮೃತ ಯುವಕರು. ವಿಶಾಲ್ ಕರಜೇಕರ್‌ಗೆ ಗಂಭೀರ ಗಾಯವಾಗಿದ್ದು, ಜೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:15 am, Sun, 22 May 22