ಕರ್ನಾಟಕದ ಹಲವೆಡೆ ಮುಂದುವರಿದ ಮಳೆ; ಅಪಾರ ಬೆಳ ನಾಶಕ್ಕೆ ರೈತರು ಕಂಗಾಲು

ಒಂದು ಲಕ್ಷಕ್ಕೂ ಹೆಚ್ಚು ಹಣ ವೆಚ್ಚಾ ಮಾಡಿ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಸಂತೋಷ್ ಎಂಬ ರೈತ ಕೋಸು ಬೆಳೆದಿದ್ದರು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಕರ್ನಾಟಕದ ಹಲವೆಡೆ ಮುಂದುವರಿದ ಮಳೆ; ಅಪಾರ ಬೆಳ ನಾಶಕ್ಕೆ ರೈತರು ಕಂಗಾಲು
ನೀರು ಪಾಲಾಗಿರುವ ಕೋಸು
TV9kannada Web Team

| Edited By: sandhya thejappa

May 22, 2022 | 9:06 AM

ಬೆಂಗಳೂರು: ರಾಜ್ಯದ ಹಲವೆಡೆ ಧಾರಕಾರ ಮಳೆ (Heavy Rain) ಮುಂದುವರಿದಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ಅಪಾರ ಪ್ರಮಾಣದ ಬೆಳೆ (Crop) ನಾಶವಾಗಿದೆ. ದಾವಣಗೆರೆಯಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿದ್ದ ಎಲೆಕೋಸು ಬೆಳೆ ನೀರು ಪಾಲಾಗಿದೆ. ಇನ್ನೆರೆಡು ದಿನಗಳಲ್ಲಿ ಮಾರುಕಟ್ಟೆಗೆ ಹೋಗಬೇಕಿದ್ದ ಕೋಸು, ನೀರು ಪಾಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಹಣ ವೆಚ್ಚಾ ಮಾಡಿ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಸಂತೋಷ್ ಎಂಬ ರೈತ ಕೋಸು ಬೆಳೆದಿದ್ದರು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ನಿರಂತರವಾಗಿ ಕುಸಿಯುತ್ತಿರುವ ಮನೆಗಳು: ಗದಗದಲ್ಲಿ ಸದ್ಯ ಮಳೆ ಕಡಿಮೆಯಾದರೂ ಅವಾಂತರ ಮುಂದುವರಿದಿದೆ. ಹಳ್ಳಿಗಳಲ್ಲಿ ಮಣ್ಣಿನ ಮನೆಗಳು ನಿರಂತರ ಕುಸಿಯುತ್ತಿದ್ದು, ಬಡ ಕುಟುಂಬಗಳ ಬದುಕು ಬೀದಿಗೆ ಬಂದಂತಾಗಿದೆ. ಬಾಳಿ ಬದುಕಿದ ಮನೆಯೊಳಗೆ ಹೋಗಲು ಭಯ, ಆತಂಕ ನಿರ್ಮಾಣವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಮನೆಗಳು ಕುಸಿಯುತ್ತಿವೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ. ಮನೆ ಯಜಮಾನವೂ ಇಲ್ಲ. ಮನೆಯೂ ಇಲ್ಲ. ನಮಗೆ ಯಾರೂ ದಿಕ್ಕು? ಅಂತ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Poetry: ಅವಿತಕವಿತೆ; ಮನುಷ್ಯ ತನ್ನ ತಲವಾರಿನಲ್ಲೇ ತನ್ನ ಕ್ರೌರ್ಯವ ವಧಿಸುವ ಹಾಗೆ

ನೆಲಕ್ಕರುಳಿದ ಬೃಹತ್ ದೈವಿ ಮರ: ರಾಯಚೂರು: ನಗರದ ಮಂಗಳವಾರಪೇಟೆಯಲ್ಲಿ ಬೃಹತ್ ದೈವಿ ಮರ ನೆಲಕ್ಕರುಳಿದೆ. ಮಂಗಳವಾರಪೇಟೆಯ ಆಂಜನೇಯ ದೇವಸ್ಥಾನದ ಕಟ್ಟೆ ಮೇಲಿದ್ದ ದೈವಿ ಮರವನ್ನು ಭಕ್ತರು ಪೂಜಿಸುತ್ತಿದ್ದರು. ಬಿರುಗಾಳಿಗೆ ಬುಡ ಸಮೇತ ನೆಲಕ್ಕುರುಳಿದೆ. ಪಕ್ಕದಲ್ಲಿದ್ದ ಮನೆ ಮೇಲೆ ಉರುಳಿದೆ. ಮನೆಗೆ ಸಣ್ಣ‌ ಪ್ರಮಾಣದಲ್ಲಿ ಹಾನಿಯಾಗಿದೆ.

ವಾಡಿಕೆಗಿಂತ ಹೆಚ್ಚು ಮಳೆ: ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 40 ಮಿಮಿ ವಾಡಿಕೆ ಮಳೆ ಬರಬೇಕಿತ್ತು. ಆದರೆ 136 ಮಿಮಿ ಮಳೆ ಸುರಿದಿದೆ.   ಕೇವಲ ಮೂರು ದಿನದಲ್ಲಿ ಶೇ.243 ರಷ್ಟು ಹೆಚ್ಚು ಮಳೆ ಸುರಿದಿದೆ ಎಂದು  ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಮಳೆ ಆಗಿದೆ.  ಜಿಲ್ಲೆಯಾದ್ಯಂತ 14 ಮೇಕೆ, ಕುರಿಗಳು ಹಾಗೂ ಒಂದು ಜಾನುವಾರು ಮೃತಪಟ್ಟಿದೆ. 26 ಮನೆಗಳಿಗೆ ಹಾನಿ ಆಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿ ಆಗಿದೆ ಎಂದು ಡಿಸಿ ತಿಳಿಸಿದರು.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada