ಬೆಂಗಳೂರಿನಲ್ಲಿ ಖಾಸಗಿ ಪೋಟೋಗಳನ್ನ ಪಡೆದು ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪಿ ಅರೆಸ್ಟ್!

ಬಂಧಿತ ಪ್ರವೀಣ್ ರಾವ್, ಮಹಿಳೆಯ ಖಾಸಗಿ ಫೋಟೋ ಪಡೆದು ಆಕೆಯ ಪತಿಗೆ ಕಳುಹಿಸಿದ್ದನಂತೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡದಂತೆ ಬೆದರಿಕೆಯೂ ಹಾಕಿದ್ದನಂತೆ.

ಬೆಂಗಳೂರಿನಲ್ಲಿ ಖಾಸಗಿ ಪೋಟೋಗಳನ್ನ ಪಡೆದು ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪಿ ಅರೆಸ್ಟ್!
ಸಾಂಕೇತಿಕ ಚಿತ್ರ
TV9kannada Web Team

| Edited By: sandhya thejappa

May 22, 2022 | 8:32 AM

ನೆಲಮಂಗಲ: ಲ್ಯಾಪ್​ಟಾಪ್​ (Laptop) ರಿಪೇರಿ ಮಾಡಲು ಮನೆಗೆ ಬಂದಿದ್ದಾಗ ಖಾಸಗಿ ಪೋಟೋಗಳನ್ನ ಪಡೆದು ಮಹಿಳೆಗೆ ಬ್ಲಾಕ್ ಮೇಲ್ (Blackmail) ಮಾಡಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಾಸರಹಳ್ಳಿಯ ಮಹೇಶ್ವರಿ ನಗರದ ಪ್ರವೀಣ್ ರಾವ್(40) ಬಂಧನಕ್ಕೆ ಒಳಗಾದ ಆರೋಪಿ. ಬಂಧಿತ ಪ್ರವೀಣ್ ರಾವ್, ಮಹಿಳೆಯ ಖಾಸಗಿ ಫೋಟೋ ಪಡೆದು ಆಕೆಯ ಪತಿಗೆ ಕಳುಹಿಸಿದ್ದನಂತೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡದಂತೆ ಬೆದರಿಕೆಯೂ ಹಾಕಿದ್ದನಂತೆ. ಪ್ರಕರಣ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮೂವರು ಡ್ರಗ್ಸ್​ ಪೆಡ್ಲರ್ಸ್​ ಸೆರೆ: ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರು ಡ್ರಗ್ಸ್​ ಪೆಡ್ಲರ್ಸ್​ನ​ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಜೆರಿಽ, ರುವಾಂಡಾ ಮೂಲದ ಎವ್ರಾ ಜಾರ್ಜ್, ಶಿವಾಜಿನಗರದ ಮೊಹಮ್ಮದ್ ಫಾರೂಕ್ ಬಂಧಿತರು. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ 88 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.  ಪಾಸ್​ಪೋರ್ಟ್, ವೀಸಾ ಇಲ್ಲದೆ ಜೆರಿಽ ಅಕ್ರಮವಾಗಿ ನೆಲೆಸಿದ್ದ.

ಇದನ್ನೂ ಓದಿ: 3 ಚಿತ್ರಗಳ ಪೋಸ್ಟರ್​ ಒಟ್ಟಿಗೆ ಜೋಡಿಸಿದ ಪ್ರಶಾಂತ್​ ನೀಲ್​; ಫ್ಯಾನ್ಸ್​ ತಲೆಯಲ್ಲಿ ಮೂಡಿದೆ ದೊಡ್ಡ ಪ್ರಶ್ನೆ

ಜನರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ: ನಕಲಿ ಸಿಮ್ ಕಾರ್ಡ್, ಬ್ಯಾಂಕ್ ಖಾತೆ ಬಳಸಿ ವಂಚಿಸುತ್ತಿದ್ದ ಸ್ಯಾಮುಯಲ್ ಒಕೇನ್(26) ನನ್ನು ಬಂಧಿಸಲಾಗಿದೆ. ಆರೋಪಿಯಿಂದ ಪೊಲೀಸರು 5 ಸಿಮ್ ಕಾರ್ಡ್, 6 ವಿವಿಧ ಬ್ಯಾಂಕ್​ಗಳ ಡೆಬಿಟ್ ಕಾರ್ಡ್ ಜಪ್ತಿ ಮಾಡಿದ್ದಾರೆ. ಈತ ಈಶಾನ್ಯ ರಾಜ್ಯಗಳ ಜನರಿಗೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯುತ್ತಿದ್ದ. ಅವರದ್ದೇ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಕೂಡ ಖರೀದಿಸುತ್ತಿದ್ದ. ಕೊರಿಯರ್ ಮೂಲಕ ಸಿಮ್ ಕಾರ್ಡ್​ ಬೆಂಗಳೂರಿಗೆ ತರಿಸಿಕೊಳ್ತಿದ್ದ. ಬಳಿಕ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಜನರಿಗೆ ಕರೆ ಮಾಡುತ್ತಿದ್ದ.

ಕೆಲಸ, ಲೋನ್ ಕೊಡಿಸುವುದಾಗಿ ಕರೆಮಾಡಿ ಹಣ ಹಾಕಿಸಿಕೊಳುತ್ತಿದ್ದ.ಲಾಟರಿ ಹಾಗೂ ಗಿಫ್ಟ್ ಬಂದಿದೆ ಎಂತಲೂ ಹಣ ಹಾಕಿಸಿಕೊಳ್ಳುತ್ತಿದ್ದ. ಗುಪ್ತ ಮಾಹಿತಿ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada