ಇಂದು ದಾವೋಸ್ ಪ್ರಯಾಣ ಬೆಳಸಿರುವ ಸಿಎಂ ಬೊಮ್ಮಾಯಿ, ಎರಡು ದಿನಗಳ ಕಾಲ ನಡೆಯುವ ಆರ್ಥಿಕ ಸಮಾವೇಶದಲ್ಲಿ ಭಾಗಿ
ದುಬೈನ ದಾವೋಸ್ನಲ್ಲಿ ಮೇ 23, 24 ರಂದು ನಡೆಯುವ ಆರ್ಥಿಕ ಸಮಾವೇಶದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೋಸ್ಗೆ ಪ್ರಯಾಣ ಬೆಳಸಿದ್ದಾರೆ.
ಬೆಂಗಳೂರು: ದುಬೈನ ದಾವೋಸ್ನಲ್ಲಿ ಮೇ 23, 24 ರಂದು ನಡೆಯುವ ಆರ್ಥಿಕ ಸಮಾವೇಶದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ದಾವೋಸ್ಗೆ ಪ್ರಯಾಣ ಬೆಳಸಿದ್ದಾರೆ. ತಮ್ಮ ಆರ್ ಟಿ ನಗರ ನಿವಾಸದಿಂದ ಸಚಿವ ಮುರಗೇಶ ನಿರಾಣಿ (Muragesh Nirani), ಪತ್ನಿ ಚೆನ್ನಮ್ಮ ಜತೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.35ರ ವಿಮಾನದ ಮೂಲಕ ದುಬೈಗೆ ಹೋಗಲಿದ್ದು, ಮಧ್ಯಾಹ್ನ 12.45 ಕ್ಕೆ ದುಬೈಗೆ ತಲುಪಲಿದ್ದಾರೆ. ದುಬೈನಿಂದ ಮಧ್ಯಾಹ್ನ 3.35 ಕ್ಕೆ ಸ್ವಿಟ್ಜರ್ಲೆಂಡ್ ನ ಜ್ಯೂರಿಚ್ ಗೆ ಪ್ರಯಾಣ ಬೆಳಸಲಿದ್ದಾರೆ. ಅಲ್ಲಿಂದ ರಾತ್ರಿ 8.20 ರಿಂದ ಜ್ಯೂರಿಚ್ ರಸ್ತೆ ಮಾರ್ಗದ ಮೂಲಕ ನಿಂದ ದಾವೋಸ್ಗೆ ತೆರಳಿರುವ ಸಿಎಂ, ರಾತ್ರಿ 12ಕ್ಕೆ ದಾವೋಸ್ ತಲುಪಲಿದ್ದಾರೆ.
ಇದನ್ನು ಓದಿ: ಬೆಂಗಳೂರಿನ ಯುವ ಜೋಡಿ ಉಡುಪಿಯಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಈ ಕುರಿತು ಬೆಂಗೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಕಳೆದ ತ್ರೈಮಾಸಿಕದಲ್ಲಿ ಭಾರತಕ್ಕೆ ಹೆಚ್ಚಾಗಿ FDI ಹರಿದುಬಂದಿದೆ. ಇದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಕರ್ನಾಟಕಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆದಾರರು ಬರುತ್ತಿದ್ದಾರೆ. ದಾವೋಸ್ಗೆ ತೆರಳಲು ಸಿದ್ಧವಾಗಿ ಬಂದಿದ್ದೇನೆ. ನಾಳೆ, ನಾಡಿದ್ದು ದಾವೋಸ್ನಲ್ಲಿ ನಡೆಯುವ ಆರ್ಥಿಕ ಸಮಾವೇಶದಲ್ಲಿ ಭಾಗಿಯಾಗುತ್ತೇನೆ. ಅಲ್ಲಿನ ಕಾರ್ಯಕ್ರಮಗಳನ್ನು ಮಾಧ್ಯಮಗಳಿಗೆ ನಿರಂತರವಾಗಿ ತಲುಪಿಸ್ತೇವೆ. ಸಮಾವೇಶದಲ್ಲಿ ವಿಶ್ವದ ಅನೇಕ ನಾಯಕರು, ಉದ್ಯಮಿಗಳನ್ನು ಭೇಟಿಯಾಗುತ್ತೇವೆ. ಕೆಲವು ರಾಷ್ಟ್ರೀಯ ಮಾಧ್ಯಮಗಳೂ ಬಂದಿರುತ್ತವೆ. ಉದ್ಯಮಿಗಳಿಗೆ ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಇರುವ ವ್ಯವಸ್ಥೆ ಕುರಿತು ವಿವರಿಸುತ್ತೇವೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಮೇಲೆ ನಿರೀಕ್ಷೆ ಇದೆ ಎಂದರು.
ಇದನ್ನು ಓದಿ: ಬೆಂಗಳೂರಿನಲ್ಲಿ ಖಾಸಗಿ ಪೋಟೋಗಳನ್ನ ಪಡೆದು ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪಿ ಅರೆಸ್ಟ್!
ಕರ್ನಾಟಕಕ್ಕೆ ಮತ್ತಷ್ಟು ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ. ನನ್ನ ಜತೆ ದಾವೋಸ್ಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂಡ ಬರುತ್ತಿದ್ದಾರೆ. ಐಟಿ-ಬಿಟಿ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ (Ashwath Narayan) ಅವರು ಕೂಡ ಬರುತ್ತಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ವಿಚಾರವಾಗಿ ಕೇಂದ್ರ ಸರಕಾರ ನಿನ್ನೆ ರಾತ್ರಿ ತಾನೇ ಸುಂಕ ಇಳಿಕೆ ಮಾಡಿದ್ದಾರೆ. ಇದರ ಬಗ್ಗೆ ನೋಡೋಣ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:50 am, Sun, 22 May 22