Dandruff: ತಲೆ ಹೊಟ್ಟಿಗೆ ಕಾರಣವೇನು? ನಿವಾರಣೆ ಹೇಗೆ? ಇಲ್ಲಿದೆ ಮಾಹಿತಿ

Dandruff: ತಲೆಹೊಟ್ಟಿನ ಸಮಸ್ಯೆಯನ್ನು ಕೂಡಲೇ ಗುಣಪಡಿಸದಿದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು, ಇನ್ನು ತಲೆಹೊಟ್ಟು ಹಣೆಯ ಮೇಲೆ, ಬೆನ್ನಿನ ಮೇಲೆ ಬಿದ್ದರೆ ಆ ಭಾಗದಲ್ಲಿ ಮೊಡವೆಗಳು ಕಂಡುಬರುವುದು.

Dandruff: ತಲೆ ಹೊಟ್ಟಿಗೆ ಕಾರಣವೇನು? ನಿವಾರಣೆ ಹೇಗೆ? ಇಲ್ಲಿದೆ ಮಾಹಿತಿ
Dandruff
Follow us
TV9 Web
| Updated By: sandhya thejappa

Updated on:May 22, 2022 | 8:08 AM

ಹೊಟ್ಟಿನ ಸಮಸ್ಯೆ ಸಾಮಾನ್ಯವೆಂದುಕೊಳ್ಳಬೇಡಿ ಇದರಿಂದ ಕೂದಲು ಉದುರುವಿಕೆಯೂ ಹೆಚ್ಚಾಗುವುದು. ಬೇಸಿಗೆಯಲ್ಲಿ ಬಿಸಿಲಿನಲ್ಲಿ ಓಡಾಡುವಾಗ ಅತಿಯಾದ ಬೆವರಿ ಕೂದಲಿನ ನಡುವೆ ಶೇಖರಣೆಗೊಂಡು ಅದಕ್ಕೆ ಧೂಳು ಸೇರಿ ಹೊಟ್ಟಾಗುತ್ತದೆ. ಇನ್ನು ಮಳೆಗಾಲದಲ್ಲಿ ತಲೆಸ್ನಾನ ಮಾಡಿದ ಬಳಿಕ ಕೂದಲಿನಲ್ಲಿರುವ ತೇವಾಂಶ ಆರದೆ ಹಾಗೆಯೇ ಇರುವುದರಿಂದ ತಲೆ ಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ತಲೆಹೊಟ್ಟಿನ ಸಮಸ್ಯೆ ಕೂದಲಿನ ಆರೋಗ್ಯ ಹಾಳು ಮಾಡುವುದರ ಜತೆಗೆ ಮೊಡವೆ ಸಮಸ್ಯೆ, ತಲೆ ತುರಿಕೆ ಮುಂತಾದ ಸಮಸ್ಯೆ ಕಂಡು ಬರುವುದು.

ತಲೆಹೊಟ್ಟಿನ ಸಮಸ್ಯೆಯನ್ನು ಕೂಡಲೇ ಗುಣಪಡಿಸದಿದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು, ಇನ್ನು ತಲೆಹೊಟ್ಟು ಹಣೆಯ ಮೇಲೆ, ಬೆನ್ನಿನ ಮೇಲೆ ಬಿದ್ದರೆ ಆ ಭಾಗದಲ್ಲಿ ಮೊಡವೆಗಳು ಕಂಡುಬರುವುದು.

ತಲೆ ಹೊಟ್ಟಿಗೆ ಕಾರಣವೇನು? ತಲೆಹೊಟ್ಟಿಗೆ ಪ್ರಮುಖ ಕಾರಣ ಕೂದಲಿನ ಆರೈಕೆಗೆಂದು ನಾವು ಬಳಸುವ ಹೇರ್ ಪ್ರಾಡೆಕ್ಟ್‌ಗಳು. ಹೇರ್‌ ಕಲರಿಂಗ್, ಕೂದಲಿನಲ್ಲಿ ಎಣ್ಣೆ ಉಳಿಸಿಕೊಳ್ಳುವುದು ಇವೆಲ್ಲಾ ತಲೆಹೊಟ್ಟಿಗೆ ಪ್ರಮುಖ ಕಾರಣಗಳು. ತಲೆ ಬುಡದಲ್ಲಿ ಎಣ್ಣೆ ಹೆಚ್ಚಾದಾಗ, ಎಣ್ಣೆಯಿಲ್ಲದ ಕೂದಲಿನ ಬುಡ ಒಣಗಿದಾಗ ಶಿಲೀಂದ್ರಗಳ ಸೋಂಕಿನಿಂದಾಗಿ ತಲೆಹೊಟ್ಟಿನ ಸಮಸ್ಯೆ ಕಂಡು ಬರುತ್ತದೆ.

ಏನು ಮಾಡಬಹುದು? ಸ್ನಾನಕ್ಕೆ ಮುಂಚೆ ಒಂದು ಚಮಚ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ತಲೆಗೆ ಹಚ್ಚಿ ನಂತರ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ. ಮಳೆಗಾಲದಲ್ಲಿ ತಲೆಹೊಟ್ಟು ಉಂಟಾಗುವುದನ್ನು ತಡೆಯಲು ಎರಡು ದಿನಕ್ಕೊಮ್ಮೆ ತಲೆ ತೊಳೆಯಿರಿ. ತಲೆ ತೊಳೆಯಲು ಮೈಲ್ಡ್ ಶ್ಯಾಂಪೂ ಬಳಸಿ. ಇನ್ನು ಶ್ಯಾಂಪೂ ಅನ್ನು ಹೆಚ್ಚಾಗಿ ಬಳಸಬೇಡಿ ಹಾಗೂ ಪ್ರತಿದಿನ ಹಚ್ಚಬೇಡಿ. ಕೂದಲನ್ನು ತೊಳೆದ ಬಳಿಕ ಚೆನ್ನಾಗಿ ಒಣಗಿಸಿ, ಒಣಗಿಸಲು ಡ್ರೈಯರ್ ಬಳಸಬೇಡಿ.

ಈ ಮನೆಮದ್ದು ಬಳಸಿ ಹೊಟ್ಟು ಕಡಿಮೆ ಮಾಡಿಕೊಳ್ಳಿ

ತೆಂಗಿನೆಣ್ಣೆ: ತಲೆಬುಡದಲ್ಲಿ ಮಾಯಿಶ್ಚರೈಸರ್ ಕಡಿಮೆಯಾಗಿದ್ದರೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ತಲೆ ತೊಳೆದರೆ ತಲೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು. ತೆಂಗಿನೆಣ್ಣೆ ಬಳಸಿ ಅಕಾಲಿಕ ನೆರಿಗೆ ತಡೆಗಟ್ಟಬಹುದು. ತೆಂಗಿನೆಣ್ಣೆಯಿಂದ 8 ವಾರಗಳ ಕಾಲ ತಲೆಗೆ ಮಸಾಜ್ ಮಾಡಿದರೆ ಇತರ ಮಿನರಲ್‌ ಆಯಿಲ್ ಗ್ರೂಪ್‌ಗೆ ಹೋಲಿಸಿದರೆ ಶೇ. 68ರಷ್ಟು ಕಡಿಮೆಯಾಗುವುದು.

ಲೋಳೆಸರ ಹಚ್ಚಿ: ತಾಜಾ ಲೋಳೆಸರವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಲೋಳೆಸರ ಕೂಡ ತಲೆಹೊಟ್ಟು ಸಮಸ್ಯೆ ನಿವಾರಿಸುವಲ್ಲಿ ಸಹಕಾರಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.

ಮಾನಸಿಕ ಒತ್ತಡ ಕಡಿಮೆ ಮಾಡಿ: ಮಾನಸಿಕ ಒತ್ತಡ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಮಾನಸಿಕ ಒತ್ತಡ ಹೆಚ್ಚಾದಾಗ ತಲೆಹೊಟ್ಟು ಉಂಟಾಗುವುದಿಲ್ಲ, ಆದರೆ ತ್ವಚೆ ಒಣಗುವ ಸಮಸ್ಯೆ ಹೆಚ್ಚಾಗುವುದು. ಇದರಿಂದ ತಲೆಹೊಟ್ಟಿನ ಸಮಸ್ಯೆ ಉಂಟಾಗುವುದು.

ನಿಂಬೆ ಬಳಸುವುದು: ನಿಂಬೆರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಲೆ ತೊಳೆಯಿರಿ. ಈ ರೀತಿ ವಾರದಲ್ಲಿ ಮೂರು ಬಾರಿ ಮಾಡಿದರೆ ತಲೆ ಹೊಟ್ಟಿನ ಸಮಸ್ಯೆ ಇಲ್ಲವಾಗುವುದು.

ಮೊಸರು ಹಚ್ಚುವುದು: ಮೊಸರು ಹಚ್ಚಿ ಅರ್ಧ ಗಂಟೆ ಬಿಟ್ಟು ಮೈಲ್ಡ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ಮೊಸರು ಹಚ್ಚುವ ಮುನ್ನ ತೆಂಗಿನೆಣ್ಣೆ ಬಿಸಿ ಮಾಡಿ ಮಸಾಜ್ ಮಾಡಿ ನಂತರ ಮೊಸರು ಹಾಕಿದರೆ ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಬೆಳ್ಳುಳ್ಳಿ: ತಲೆಹೊಟ್ಟಿಗೆ ಬೆಳ್ಳುಳ್ಳಿ ಸೇವನೆ ಒಳ್ಳೆಯದು. ಇದರ ರಸವನ್ನು ತೆಂಗಿನೆಣ್ಣೆ ಜತೆ ಮಿಕ್ಸ್ ಮಾಡಿ ತಲೆಗೆ ಹಚ್ಚುವುದು ಕೂಡ ಒಳ್ಳೆಯದು.

ಸೂರ್ಯಕಾಂತಿ ಬೀಜ: ತಲೆಹೊಟ್ಟನ್ನು ನೈಸರ್ಗಿಕವಾಗಿ ಹೋಗಲಾಡಿಸಲು ಸೂರ್ಯಕಾಂತಿ ಬೀಜವನ್ನು ಬಳಸಬಹುದು. ಇದನ್ನು ಆಹಾರಕ್ರಮದಲ್ಲಿ ಸೇರಿಸಿದರೆ ನಿಮ್ಮ ತಲೆ ಬುಡದ ಆರೋಗ್ಯ ಹೆಚ್ಚುವುದು. ಇದರಲ್ಲಿ ಸತು ಹಾಗೂ ವಿಟಮಿನ್ ಬಿ6 ಇದ್ದು ಜೀರ್ಣಕ್ರಿಯೆಗೆ ಕೂಡ ಸಹಕಾರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:00 am, Sun, 22 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ