ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ವೇಳೆ ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಾರಿಗೆ ಸಚಿವ ಶ್ರೀರಾಮುಲು

B Sriramulu: ಭಗವಂತ ನಮ್ಮ ಕಷ್ಟ ಕಾಲದಲ್ಲಿ ಓದಲು ಸಹಾಯ ಮಾಡಲಿಲ್ಲ. ದೊಡ್ಡ ಶಿಕ್ಷಣ ಪಡೆದವನು ನಾನಲ್ಲ ಎಂದು ರಾಮುಲು ಭಾವುಕರಾದರು. ಒಂದೊಂದು ಸಾರಿ ನನಗೆ ತುಂಬಾ ಮುಜುಗರ ಆಗುತ್ತದೆ. ನಮ್ಮ ಮನೆಯಲ್ಲಿ ಊಟವೂ ಇರುತ್ತಿರಲಿಲ್ಲ ಎಂದು ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿ ಶ್ರೀರಾಮುಲು ಮತ್ತೆ ಮತ್ತೆ ಭಾವುಕರಾದರು.

ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ವೇಳೆ ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಾರಿಗೆ ಸಚಿವ ಶ್ರೀರಾಮುಲು
ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ವೇಳೆ ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಾರಿಗೆ ಸಚಿವ ಶ್ರೀರಾಮುಲು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 26, 2022 | 8:04 PM

ಬಳ್ಳಾರಿ: ಬಳ್ಳಾರಿ ನಗರದಲ್ಲಿರುವ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ(Sri Krishnadevaraya University) ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ಸಮಾರಂಭದಲ್ಲಿ ಭಾಷಣದ ವೇಳೆ ಸಾರಿಗೆ ಸಚಿವ ಬಿ. ಶ್ರೀರಾಮುಲು (Transport minister B Sriramulu) ಭಾವುಕರಾದ ಪ್ರಸಂಗ ನಡೆದಿದೆ. ಭಾವುಕರಾದ ರಾಮುಲು ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದರು. ನಾನು ತುಂಬಾ ಬಡತನ ನೋಡಿದವನು (Poor), ಕಷ್ಟಪಟ್ಟು ಬೆಳೆದವನು. ಇಂದಿನ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಮುಂದೆ ಬರಬೇಕು ಎಂದು ರಾಮುಲು ಆಶಿಸಿದರು.

ಭಗವಂತ ನಮ್ಮ ಕಷ್ಟ ಕಾಲದಲ್ಲಿ ಓದಲು ಸಹಾಯ ಮಾಡಲಿಲ್ಲ. ದೊಡ್ಡ ಶಿಕ್ಷಣ ಪಡೆದವನು ನಾನಲ್ಲ ಎಂದು ರಾಮುಲು ಭಾವುಕರಾದರು. ಒಂದೊಂದು ಸಾರಿ ನನಗೆ ತುಂಬಾ ಮುಜುಗರ ಆಗುತ್ತದೆ. ನಮ್ಮ ಮನೆಯಲ್ಲಿ ಊಟವೂ ಇರುತ್ತಿರಲಿಲ್ಲ ಎಂದು ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿ ಶ್ರೀರಾಮುಲು ಮತ್ತೆ ಮತ್ತೆ ಭಾವುಕರಾದರು.

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಕಂದಾಯ ಕ್ರಾಂತಿ: ಸಿಎಂ ಬೊಮ್ಮಾಯಿ ಶ್ಲಾಘನೆ: ಹಾವೇರಿ: ಕಂದಾಯ ದಾಖಲೆಗಳು ಮನೆಮನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಹಾವೇರಿಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಮಾತನಾಡಿದ್ದಾರೆ. ಭ್ರಷ್ಟಾಚಾರ (Corruption ), ದಾಖಲೆಗಳ ವಿತರಣೆ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ಕಂದಾಯ ಸಚಿವ ಅಶೋಕರ (R Ashoka) ನೇತೃತ್ವದಲ್ಲಿ ಕಂದಾಯ ಕ್ರಾಂತಿ ನಡೆಸಲಾಗುತ್ತಿದೆ. ದಾಖಲೆಗಳಿಗೆ ಅಧಿಕಾರಿಗಳ ಮುಂದೆ ಹೋಗಿ ಕೈಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಇತ್ತು. ಈಗ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಕೊಡುವ ಕಾರ್ಯಕ್ರಮವನ್ನು ನಮ್ಮ ಸರಕಾರ ರೂಪಿಸಿದೆ. ಸರಕಾರ ಮನೆ ಬಾಗಿಲಿಗೆ ಬರುತ್ತೆ ಎಂಬುದನ್ನು ಯಾರೂ ಯೋಚನೆ ಮಾಡಿರಲಿಲ್ಲ. ಅಂತಹ ಕೆಲಸವನ್ನು ನಮ್ಮ ಸರಕಾರ ಮಾಡಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು,ಈ ವರ್ಷ ಮಳೆ ಹೆಚ್ಚಾಗಿ ಬೆಳೆ ಹಾನಿಯಾದ ಸಂದರ್ಭದಲ್ಲಿ ಕೇಂದ್ರದ ಪರಿಹಾರ ಹಣದ ಜೊತೆಗೆ ನಮ್ಮ ಬಿಜೆಪಿ ಸರಕಾರ ಕೇಂದ್ರದ ಜೊತೆ ರಾಜ್ಯದ ಹಣವನ್ನೂ ಸೇರಿಸಿ ಪರಿಹಾರ ಕೊಟ್ಟಿದ್ದೇವೆ. ಇದು ಜನಪರವಾದ, ಜೀವಂತವಾಗಿರುವ ಸರಕಾರ. ಜನರ ಅಲೆದಾಟ ತಪ್ಪಿಸಲು ಗ್ರಾಮ ಒನ್ ಕೇಂದ್ರಗಳನ್ನು ನಮ್ಮ ಸರಕಾರ ಆರಂಭಿಸಿದೆ. ನಮ್ಮ ಸರಕಾರ ಜನಪರ ಮಾತ್ರವಲ್ಲ ಜನರಿಗೋಸ್ಕರ, ಜನರಿಗೆ ಹತ್ತಿರವಿರುವ ಸರಕಾರ ಎಂಬುದನ್ನು ಮಾಡಿ ತೋರಿಸಿದ್ದೇವೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ, ಕೈಗಾರಿಕೆ, ದುಡಿಯುವ ಕೈಗಳಿಗೆ ಕೆಲಸ ಕೊಡುವ ಹೀಗೆ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾದ ವಿಶಿಷ್ಟಪೂರ್ಣವಾದ ಬಜೆಟ್ ಕೊಟ್ಟಿದ್ದೇವೆ. ಎಲ್ಲ ರಂಗದ ಜನರೂ ಬಜೆಟ್ ಅನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಕಂದಾಯ ಕ್ರಾಂತಿ: ಸಿಎಂ ಬೊಮ್ಮಾಯಿ ಶ್ಲಾಘನೆ ಇದನ್ನೂ ಓದಿ: ಯೂನಿವರ್ಸಿಟಿ ಕ್ಲಾಸ್​ ರೂಂನಲ್ಲೇ ನಮಾಜ್​ ಮಾಡಿದ ವಿದ್ಯಾರ್ಥಿನಿ; ತನಿಖೆ ನಡೆಸುತ್ತಿದ್ದೇವೆ ಎಂದ ಉಪ ಕುಲಪತಿ

Published On - 7:58 pm, Sat, 26 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್