ಫುಲ್ ಮಾರ್ಕ್ಸ್​! ಹಿಜಾಬ್ ವಿವಾದದಿಂದ ವಿಶ್ವದ ಗಮನ ಸೆಳೆದಿದ್ದ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಗಾಯತ್ರಿಗೆ ಸನ್ಮಾನ

ಫುಲ್ ಮಾರ್ಕ್ಸ್​! ಹಿಜಾಬ್ ವಿವಾದದಿಂದ ವಿಶ್ವದ ಗಮನ ಸೆಳೆದಿದ್ದ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಗಾಯತ್ರಿಗೆ ಸನ್ಮಾನ
ಫುಲ್ ಮಾರ್ಕ್ಸ್​! ಹಿಜಾಬ್ ವಿವಾದದಿಂದ ವಿಶ್ವದ ಗಮನ ಸೆಳೆದಿದ್ದ ಪ್ರೌಢಶಾಲೆಯಲ್ಲಿ 625 ಅಂಕ ಪಡೆದ ಗಾಯತ್ರಿಗೆ ಸನ್ಮಾನ

ಉಡುಪಿಯ ಸರಕಾರಿ ಪದವಿ ಪೂರ್ವ ಹೆಣ್ಣು ಮಕ್ಕಳ ಕಾಲೇಜು ಹಿಜಾಬ್ ವಿವಾದದಿಂದ ವಿಶ್ವದ ಗಮನ ಸೆಳೆದಿತ್ತು. ಇದೇ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಗಾಯತ್ರಿ ಈ ಬಾರಿಯ ಎಸ್​ ಎಸ್​ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದಿದ್ದಾಳೆ. ಬಡಕುಟುಂಬದ ಗಾಯತ್ರಿ 625 ಅಂಕ ಗಳಿಕೆ ಸಾಧನೆ ಮಾಡಿದ್ದು, ಆಕೆಗೆ ಶಾಲೆಯಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು.

TV9kannada Web Team

| Edited By: sadhu srinath

May 21, 2022 | 10:10 PM

ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಹೆಣ್ಣು ಮಕ್ಕಳ ಕಾಲೇಜಿನ ಹಿಜಾಬ್ ವಿವಾದದಿಂದ (hijab row) ವಿಶ್ವದ ಗಮನ ಸೆಳೆದಿದ್ದ ಕಾಲೇಜು. ಇದೇ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಗಾಯತ್ರಿ ಈ ಬಾರಿಯ ಎಸ್​ ಎಸ್​ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ಗಮನ ಸೆಳೆದಿದ್ದಾಳೆ. ಬಡಕುಟುಂಬದ ಗಾಯತ್ರಿ 625 ಅಂಕ ಗಳಿಕೆ ಸಾಧನೆ ಮಾಡಿದ್ದು, ಆಕೆಗೆ ಶಾಲೆಯಲ್ಲಿ ಇಂದು ಸನ್ಮಾನ ಏರ್ಪಡಿಸಲಾಗಿತ್ತು. ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಆಡಳಿತ ಮಂಡಳಿ ಉಪಾಧ್ಯಕ್ಷ ಯಶಪಾಲ ಸುವರ್ಣ ಅವರಿಂದ ಸನ್ಮಾನ ನಡೆಯಿತು. ಅಂದಹಾಗೆ ಫುಲ್ ಮಾರ್ಕ್ಸ್ ಗಾಯತ್ರಿ ಮುಂದೆ ಹೃದ್ರೋಗ ವೈದ್ಯೆಯಾಗುವ ಕನಸು ಕಂಡಿದ್ದಾಳೆ.

ಹಿಜಾಬ್ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯರಿಗೂ ಬುದ್ಧಿವಾದ ಹೇಳಿದ್ದೆವು:

ಗಮನಾರ್ಹವೆಂದರೆ ಗಾಯತ್ರಿಯ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಯಶಪಾಲ್ ಸುವರ್ಣ ಭರವಸೆ ನೀಡಿದರು. ನಮ್ಮ ಕಾಲೇಜು ಬಡ ವಿದ್ಯಾರ್ಥಿನಿಯರಿಗೆ ಆಶಾಕಿರಣವಾಗಿದೆ. ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಶಿಸ್ತುಬದ್ಧ ಶಿಕ್ಷಣ ಪಡೆಯುತ್ತಿದ್ದಾರೆ. ಹಿಜಾಬ್ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯರಿಗೂ ಬುದ್ಧಿವಾದ ಹೇಳಿದ್ದೆವು. ಗೊಂದಲ ಸೃಷ್ಟಿ ಮಾಡಿ ಬಡ ವಿದ್ಯಾರ್ಥಿನಿಯರಿಗೆ ಅಡ್ಡಿ ಪಡಿಸಬೇಡಿ ಎಂದು ಎಚ್ಚರಿಸಿದ್ದೆವು. ನಮ್ಮ ಕಾಲೇಜಿನ ಶಿಸ್ತು ಗುಣಮಟ್ಟ ಏನು ಎಂಬುದನ್ನು ಗಾಯತ್ರಿ ಸಾಬೀತು ಮಾಡಿದ್ದಾಳೆ. ನಮ್ಮ ಕಾಲೇಜಿನ ಬಗ್ಗೆ ಹೊರ ಜಿಲ್ಲೆಗಳಿಂದ ಬಂದವರು ಟೀಕೆ ಮಾಡುತ್ತಿದ್ದರು. ಮತಾಂಧ ಶಕ್ತಿಗಳು ನಮ್ಮ ಕಾಲೇಜಿನ ಬಗ್ಗೆ ಟೀಕೆ ಮಾಡುತ್ತಿತ್ತು. ಈ ವಿದ್ಯಾರ್ಥಿನಿ ಇದೀಗ ಎಲ್ಲರಿಗೂ ತಕ್ಕ ಉತ್ತರ ಕೊಟ್ಟಿದ್ದಾಳೆ ಎಂದು ಆಡಳಿತ ಮಂಡಳಿ ಉಪಾಧ್ಯಕ್ಷ ಯಶಪಾಲ್ ಸುವರ್ಣ ಮಾರ್ಮಿಕವಾಗಿ ಹೇಳಿದರು.

ಬಾಗಲಕೋಟೆ: ಶಿಕ್ಷಕಿಗೆ ಹೃದಯಪೂರ್ವಕ ಸನ್ಮಾನ, ಮಕ್ಕಳಿಂದ ಪುನೀತ್ ಭಾವಚಿತ್ರ ನೀಡಿ ಗೌರವ

17 ವರ್ಷಗಳ ಕಾಲ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿದ ಶಿಕ್ಷಕಿಯನ್ನು ಹೃದಯಪೂರ್ವಕ ಸನ್ಮಾನ ಮಾಡಿ ಗೌರವಿಸಿ ಬೀಳ್ಕೊಟ್ಟ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ತೋಟದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂ ಶರಣಮ್ಮ ಎಂಬ ಶಿಕ್ಷಕಿ 17 ವರ್ಷ ಸೇವೆ ಸಲ್ಲಿಸಿದ್ದಾರೆ.

ತಮ್ಮ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಆಟ ಪಾಠದಲ್ಲೂ ಹೆಚ್ಚಿನ ಸಾಧನೆ ಮಾಡುವಲ್ಲಿ ಶ್ರಮಿಸಿದ್ದಾರೆ. ಸದ್ಯ ಸಿಆರ್ ಪಿ ಆಗಿ ಪದೋನ್ನತಿ ಹೊಂದಿದ್ದು, ಶಾಲೆ ಬಿಟ್ಟು ಹೋಗಬೇಕಾಗಿದೆ. ಇದರಿಂದ ಗ್ರಾಮಸ್ಥರು, ಶಾಲಾ ಮಕ್ಕಳು, ಶಿಕ್ಷಕ ವರ್ಗ ಅವರನ್ನು ಗೌರವದಿಂದ ಬೀಳ್ಕೊಟ್ಟರು. ಶಿಕ್ಷಕಿಗೆ ಹೂಮಳೆ ಸುರಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಮಕ್ಕಳು ಪುನೀತ್ ಭಾವಚಿತ್ರ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.

Follow us on

Related Stories

Most Read Stories

Click on your DTH Provider to Add TV9 Kannada