Monkeypox: ಬನ್ನೇರುಘಟ್ಟ ಪಾರ್ಕ್ ಸುತ್ತಲಿನ‌ ಜನಕ್ಕೆ ಶುರುವಾಯ್ತು ಮಂಕಿ ಪಾಕ್ಸ್ ಭಯ, ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

Monkeypox: ಬನ್ನೇರುಘಟ್ಟ ಪಾರ್ಕ್ ಸುತ್ತಲಿನ‌ ಜನಕ್ಕೆ ಶುರುವಾಯ್ತು ಮಂಕಿ ಪಾಕ್ಸ್ ಭಯ, ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ
ಮಂಕಿಪಾಕ್ಸ್​ ರೋಗ

ಚಿಕನ್ ಪಾಕ್ಸ್ನಂತೆಯೇ ಮಂಕಿ ಪಾಕ್ಸ್ ಕೂಡ ಮಾರಕವಾಗಿದೆ. ನೈಜೀರಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಈಗ ಜನರು ಕೋತಿಗಳ ಬಗ್ಗೆ ಎಚ್ಚರ ವಹಿಸುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನ, ಮುತ್ಯಾಲ‌ ಮಡುವಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳಿದ್ದು ಮಂಗಗಳಿಂದ ಜ್ವರ ಹರಡುವ ಭೀತಿಯಲ್ಲಿ ಪ್ರವಾಸಿಗರಿದ್ದಾರೆ.

TV9kannada Web Team

| Edited By: Ayesha Banu

May 23, 2022 | 5:40 PM

ಆನೇಕಲ್: ಮಹಾಮಾರಿ ಕೊರೊನಾ ವೈರಸ್ ಕಳೆದೆರಡು ವರ್ಷಗಳಿಂದ ಜನರನ್ನು ನರಕ ಅನುಭವಿಸುವಂತೆ ಮಾಡಿದೆ. ಹೀಗಿರುವಾಗ್ಲೇ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಮಂಕಿಪಾಕ್ಸ್‌ ಆರ್ಭಟ ಶುರು ಆಗಿದೆ. ಮೊದಲ ಪ್ರಕರಣ ಯುಕೆನಲ್ಲಿ ಪತ್ತೆಯಾಗಿದ್ದು, ಈಗ ಒಂದೊಂದೇ ದೇಶಗಳಿಗೆ ಲಗ್ಗೆ ಇಡ್ತಿದೆ. ಅಮೆರಿಕಾ, ಫ್ರಾನ್ಸ್, ಜರ್ಮನಿ, ಕೆನಡ, ಬ್ರಿಟನ್, ಬೆಲ್ಜಿಯಂ, ಯುರೋಪ್‌ ಮತ್ತು ಪೋರ್ಚುಗಲ್‌ನಲ್ಲಿ 40ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಂಡಿವೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಕಿ ಪಾಕ್ಸ್ ವೈರಸ್ ಚರ್ಚೆ ಶುರುವಾಗುತ್ತಿದ್ದಂತೆ ಬನ್ನೇರುಘಟ್ಟ ಪಾರ್ಕ್ ಸುತ್ತಲಿನ‌ ಜನಕ್ಕೆ ಮಂಕಿ ಪಾಕ್ಸ್ ಭಯ ಉಂಟಾಗಿದೆ.

ಚಿಕನ್ ಪಾಕ್ಸ್ನಂತೆಯೇ ಮಂಕಿ ಪಾಕ್ಸ್ ಕೂಡ ಮಾರಕವಾಗಿದೆ. ನೈಜೀರಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಈಗ ಜನರು ಕೋತಿಗಳ ಬಗ್ಗೆ ಎಚ್ಚರ ವಹಿಸುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನ, ಮುತ್ಯಾಲ‌ ಮಡುವಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳಿದ್ದು ಮಂಗಗಳಿಂದ ಜ್ವರ ಹರಡುವ ಭೀತಿಯಲ್ಲಿ ಪ್ರವಾಸಿಗರಿದ್ದಾರೆ. ಈ‌ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ಮಾಹಿತಿ ಪಡೆಯುತ್ತಿದೆ. ಖುಷಿಯ ವಿಚಾರವೆಂದರೆ ಭಾರತದಲ್ಲಿ ಇನ್ನೂ‌ ಮಂಕಿ ಪಾಕ್ಸ್ ವೈರಸ್ ಕಾಣಿಸಿಕೊಂಡಿಲ್ಲ. ಇದನ್ನೂ ಓದಿ: ರಾಯಚೂರು ಕಿಲ್ಲೇರಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿಗಳು ಕನ್ನಡಿಗರಿಗೆ ಆರ್ ಸಿ ಬಿ ತಂಡದ ಮೇಲಿರುವ ಅಭಿಮಾನವನ್ನು ಕೊಂಡಾಡಿದರು!

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭಾರತದಲ್ಲಿ ಈವರೆಗೂ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿಲ್ಲದಿದ್ರೂ ಭೀತಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಹೈಅಲರ್ಟ್ ವಹಿಸಿದೆ. ಮುಂಜಾಗ್ರತಾ ಕ್ರಮವಾಗಿ ಕೆಲ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕಣ್ಣಿಡಲು ಸೂಚನೆ ನೀಡಿದೆ. ಅದರಲ್ಲೂ ಕಳೆದ 21 ದಿನಗಳಲ್ಲಿ ಮಂಕಿಪಾಕ್ಸ್ ಪತ್ತೆಯಾಗಿರೋ ದೇಶಗಳಿಂದ ಬಂದವರ ಮೇಲೆ ಕಣ್ಣಿಡುವಂತೆ ಸೂಚನೆ ನೀಡಿದೆ. ಆರಂಭದಲ್ಲಿಯೇ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ. ಅಲ್ಲದೆ ಇದು ಮಂಕಿಪಾಕ್ಸ್ ವ್ಯಕ್ತಿಯ ಸಂಪರ್ಕ ಅಥವಾ ಪಾಕ್ಸ್ ಕಾಣಿಸಿಕೊಂಡ ವ್ಯಕ್ತಿಯ ಟಚ್ ನಿಂದಲೂ ಇದು ಹರಡುವ ಗುಣ ಹೊಂದಿದೆ. ಹೀಗಾಗಿ ಭಾರತಕ್ಕೆ ಇದು ಕಾಲಿಟ್ರೆ ನಿಯಂತ್ರಿಸುವುದು ಸುಲಭವಲ್ಲ. ಹೆಚ್ಚು ಜನಸಂಖ್ಯೆ ಇರೋದ್ರಿಂದ ಆರಂಭದಲ್ಲೇ ಇದನ್ನ ಮಟ್ಟ ಹಾಕಿದ್ರೆ ಒಳ್ಳೇದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada