ಬೆಂಗಳೂರು, ನ.18: ಬಿಜೆಪಿ (BJP) ಪಾಳೆಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಲೋಕಸಭಾ ಚುನಾವಣೆಗೆ ತಯಾರಿ ಶುರುವಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಹುದ್ದೆಗಳೆರಡಕ್ಕೂ ಆಯ್ಕೆ ಅಂತಿಮಗೊಂಡಿದೆ. ಆದರೆ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (BY Vijayendra) ಹಾಗೂ ವಿಪಕ್ಷ ನಾಯಕರಾಗಿ ಆರ್.ಅಶೋಕ್ರನ್ನು(R Ashok) ಆಯ್ಕೆ ಮಾಡಿರೋದು ಅವರದೇ ಪಕ್ಷದಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ. ಮತ್ತೊಂದೆಡೆ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸುತ್ತಿದೆ. ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ..! ಎಂದು ಕಾಂಗ್ರೆಸ್ (Congress) ಟೀಕೆ ಮಾಡಿದೆ. ಜೊತೆಗೆ ಬಿ.ವೈ. ವಿಜಯೇಂದ್ರ ಬಳಸಿ ಬೀಸಾಡಲು ತಂದಿರುವ ಹೊಸ “ಹರಕೆಯ ಕುರಿ” ಎಂದು ವಾಗ್ದಾಳಿ ನಡೆಸಿದೆ.
ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ!!
ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ..! ಎಂದು ಕಾಂಗ್ರೆಸ್ ಎಕ್ಸ್ (ಟ್ವಿಟರ್)ನಲ್ಲಿ ಟ್ವೀಟ್ ಮಾಡುವ ಮೂಲಕ ಟೀಕೆ ಮಾಡಿದೆ.
ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ!!
ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ..!
— Karnataka Congress (@INCKarnataka) November 18, 2023
ಇದನ್ನೂ ಓದಿ: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟದ ನಡುವೆ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಿವರಾಮ್ ಹೆಬ್ಬಾರ್
ಇನ್ನು ಲಿಂಗಾಯತ ನಾಯಕರನ್ನು ಬಳಸಿ ಬೀಸಾಡುವುದೇ ಬಿಜೆಪಿಯ ಅಜೆಂಡಾ!
◆ಯಡಿಯೂರಪ್ಪರನ್ನು ಎರಡೆರಡು ಬಾರಿ ಕಣ್ಣೀರು ಹಾಕಿಸಿ ಹುದ್ದೆಯಿಂದ ಕೆಳಗಿಳಿಸಿ ಕಳಿಸಿತ್ತು.
◆ಜಗದೀಶ್ ಶೆಟ್ಟರ್ ರವರನ್ನು ಅಧಿಕಾರದಿಂದ ದೂರವಿಟ್ಟು ವಂಚಿಸಿತ್ತು.
◆ವಿ. ಸೋಮಣ್ಣರನ್ನು ವ್ಯವಸ್ಥಿತವಾಗಿ ಸೋಲಿನ ಹೊಂಡಕ್ಕೆ ತಳ್ಳಲಾಗಿತ್ತು.
◆ಲಕ್ಷ್ಮಣ್ ಸವದಿಯವರನ್ನು ಮೂಲೆಗುಂಪು ಮಾಡಿ ಕೂರಿಸಲಾಗಿತ್ತು.
◆ಈಗ ಸಿಎಂ ಆಗಿದ್ದ ಬೊಮ್ಮಾಯಿಯವರು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತೆ ನಿರ್ಲಕ್ಷಿಸಲಾಗಿದೆ.
ಇದೇ ಮಾದರಿಯಲ್ಲಿ ವಿಜಯೇಂದ್ರ ಕೂಡ ಬಳಸಿ ಬೀಸಾಡಲು ತಂದಿರುವ ಹೊಸ “ಹರಕೆಯ ಕುರಿ” ಅಷ್ಟೇ! ಎಂದಿದೆ.
ಲಿಂಗಾಯತ ನಾಯಕರನ್ನು ಬಳಸಿ ಬೀಸಾಡುವುದೇ ಬಿಜೆಪಿಯ ಅಜೆಂಡಾ!
◆ಯಡಿಯೂರಪ್ಪರನ್ನು ಎರಡೆರಡು ಬಾರಿ ಕಣ್ಣೀರು ಹಾಕಿಸಿ ಹುದ್ದೆಯಿಂದ ಕೆಳಗಿಳಿಸಿ ಕಳಿಸಿತ್ತು.
◆ಜಗದೀಶ್ ಶೆಟ್ಟರ್ ರವರನ್ನು ಅಧಿಕಾರದಿಂದ ದೂರವಿಟ್ಟು ವಂಚಿಸಿತ್ತು.
◆ವಿ. ಸೋಮಣ್ಣರನ್ನು ವ್ಯವಸ್ಥಿತವಾಗಿ ಸೋಲಿನ ಹೊಂಡಕ್ಕೆ ತಳ್ಳಲಾಗಿತ್ತು.
◆ಲಕ್ಷ್ಮಣ್ ಸವದಿಯವರನ್ನು…
— Karnataka Congress (@INCKarnataka) November 18, 2023
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ