Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರ್ಗಾವಣೆಗೆ ನಿಖಲ್ ಶಿಫಾರಸು ಮಾಡಿ​ಲ್ಲವೇ? ಪ್ರಿಯಾಂಕ್​ ಆರೋಪ

ಕರೆಂಟ್ ಕದ್ದ ವಿಚಾರವನ್ನು ಡೈವರ್ಟ್ ಮಾಡಲು ಆರೋಪ ಮಾಡುತ್ತಿದ್ದಾರೆ. ಹೆಚ್​.ಡಿ.ಕುಮಾರಸ್ವಾಮಿ ಅವರು ಗಮನವನ್ನು ತಮ್ಮ ಶಾಸಕರ ಕಡೆ ಕೊಡಲಿ. ಕಡೇ ಪಕ್ಷ ಅವರ ಶಾಸಕರಾದರೂ ಜೆಡಿಎಸ್​​ನಲ್ಲಿ ಉಳಿದುಕೊಳ್ಳುತ್ತಾರೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರ್ಗಾವಣೆಗೆ ನಿಖಲ್ ಶಿಫಾರಸು ಮಾಡಿ​ಲ್ಲವೇ? ಪ್ರಿಯಾಂಕ್​ ಆರೋಪ
ಸಚಿವ ಪ್ರಿಯಾಂಕ್​ ಖರ್ಗೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 18, 2023 | 1:02 PM

ಬೆಂಗಳೂರು ನ.18: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ವರ್ಗಾವಣೆಗೆ ಶಿಫಾರಸು ಮಾಡಿದರೆ ತಪ್ಪೇನು? ಹೆಚ್​​ಡಿ ದೇವೇಗೌಡರು (HD Devegowda) ಪ್ರಧಾನಿಯಾಗಿದ್ದಾಗ, ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಶಿಫಾರಸು ಮಾಡುತ್ತಿರಲಿಲ್ಲವೇ? ಹೆಚ್​​ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ಶಿಫಾರಸು ಮಾಡುತ್ತಿರಲಿಲ್ಲವೇ? ಯತೀಂದ್ರ ಒಬ್ಬ ಮಾಜಿ ಶಾಸಕನಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರೆಂಟ್ ಕದ್ದ ವಿಚಾರವನ್ನು ಡೈವರ್ಟ್ ಮಾಡಲು ಆರೋಪ ಮಾಡುತ್ತಿದ್ದಾರೆ. ಹೆಚ್​.ಡಿ.ಕುಮಾರಸ್ವಾಮಿ ಅವರು ಗಮನವನ್ನು ತಮ್ಮ ಶಾಸಕರ ಕಡೆ ಕೊಡಲಿ. ಕಡೇ ಪಕ್ಷ ಅವರ ಶಾಸಕರಾದರೂ ಜೆಡಿಎಸ್​​ನಲ್ಲಿ ಉಳಿದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ವಿಪಕ್ಷ ನಾಯಕರಾಗಿ ಆರ್​ ಅಶೋಕ್ ನೇಮಕ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ಆರು ತಿಂಗಳ ಬಳಿಕ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದಾರೆ. ವರ್ಗಾವಣೆ ಅಂಗಡಿ ತೆಗೆದಿದ್ದಾರೆ ಎನ್ನುವುದನ್ನು ನಾವು ಚರ್ಚೆ ಮಾಡುತ್ತೇವೆ. ವಿಪಕ್ಷ ನಾಯಕ ಆಯ್ಕೆಯಿಂದ ಕಾಂಗ್ರೆಸ್ ಗೆ ಖುಷಿಯಾಗಿದೆ‌. ಬಿಜೆಪಿಯವರಿಗೆ ಖುಷಿಯಾಗಿಲ್ಲ. ಏಕೆಂದರೆ ಬಿಜೆಪಿ ವರ್ಸಸ್ ಬಿಜೆಪಿ ಇನ್ನೂ ಮುಗಿದಿಲ್ಲ. ಪಾರ್ಟ್ 1 ಬಿ.ಎಲ್. ಸಂತೋಷ ಅವರದ್ದು, ಪಾರ್ಟ್ 2 ಇವರದ್ದು ಎಂದರು.

ಮಂಡ್ಯ ಉಸ್ತುವಾರಿ ಆಗಿದ್ದಾಗ ಗೋ ಬ್ಯಾಕ್ ಅಶೋಕ್ ಎಂದು ಪೋಸ್ಟರ್ ಅಂಟಿಸಿದ್ದರು. ಬಿಜೆಪಿ ಕಚೇರಿಯಲ್ಲೂ ಗೋ ಬ್ಯಾಕ್ ಎಂದು ಪೋಸ್ಟರ್ ಅಂಟಿಸಿದರೇ ಅಚ್ಚರಿಯಿಲ್ಲ. ಒಬ್ಬ ಏಜೆಂಟ್ ಬಂದಿದ್ದರು ಎಂದು ಯತ್ನಾಳ ಹೇಳಿದ್ದಾರೆ. ಹಿಂದೆ ಸಿಎಂ ಖುರ್ಚಿ ಖರೀದಿ ಬಗ್ಗೆ ಯತ್ನಾಳ್ 2000 ಕೋಟಿ ರೂ. ನೀಡಬೇಕು ಎಂದು ಆರೋಪ ಮಾಡಿದ್ದರು. ಹಾಗಾದರೇ ವಿಪಕ್ಷ ನಾಯಕನ ಸ್ಥಾನ ಎಷ್ಟಕ್ಕೆ ಫಿಕ್ಸ್ ಆಗಿದೆ? ನಾನು ಮಾರಾಟಕ್ಕಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಶಾಸಕರು ಕೇಳಿದಕ್ಕೆ ಅಶೋಕ್ ಉತ್ತರ ಕೊಡಲಿ, ಕಾಂಗ್ರೆಸ್​ನವರಿಗೆ ಉತ್ತರ ಕೊಡುವುದು ಬೇಡ. ಆರ್​ ಅಶೋಕ ಬಿಜೆಪಿಯಲ್ಲಿ ಬೆಳೆಯಬೇಕು, ವಿಪಕ್ಷ ನಾಯಕರಾಗಿಯೇ ಉಳಿಯಬೇಕು ಎಂಬುದು ನಮ್ಮ ಆಸೆ.  ಬಿಎಸ್​ ಯಡಿಯೂರಪ್ಪ ಅವರ ಮೇಲುಗೈ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಾದರೇ ಬಿ.ಎಲ್. ಸಂತೋಷ ಅವರು ಏನು ಮಾಡಬೇಕು? ಎಲ್ಲದಕ್ಕೂ ಉತ್ತರ ಕೇಶವಕೃಪಾ, ಬಿಜೆಪಿ ಕಚೇರಿಯಲ್ಲಿದೆ ಎಂದು ಹೇಳಿದರು.

ಇದನ್ನೂ ಓದಿ: ಯತೀಂದ್ರ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

ಯತೀಂದ್ರ ಆಗಲಿ ಬೇರೆಯವರಾಗಲಿ ಯಾವುದೇ ಒತ್ತಡ ಹೇರಿಲ್ಲ: ಪರಮೇಶ್ವರ್​

ವಿವೇಕಾನಂದ ವಿಚಾರಕ್ಕೂ ಯತೀಂದ್ರ ಹೇಳಿಕೆಗೂ ಸಂಬಂಧ ಇಲ್ಲ. ಹಾಗೇನಾದರೂ ಇದ್ದರೆ ಹೆಚ್.ಡಿ.ಕುಮಾರಸ್ವಾಮಿ ಹೇಳಬೇಕಿತ್ತಲ್ವಾ? ವರ್ಗಾವಣೆಗೆ ಪೊಲೀಸ್ ಬೋರ್ಡ್​ ಮಾಡಿದ್ದೇನೆ. ವಿವೇಕಾನಂದ ಹೆಸರು ಬಂದಿದ್ದು ಕೇವಲ ಕಾಕತಾಳೀಯ ಅನ್ನಿಸುತ್ತೆ. ಯತೀಂದ್ರ ಆಗಲಿ ಬೇರೆಯವರಾಗಲಿ ಯಾವುದೇ ಒತ್ತಡ ಹೇರಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಸ್ಪಷ್ಟಪಡಿಸಿದರು.

ಏನಿದು ವರ್ಗಾವಣೆ ವಿವಾದ

ಆಶ್ರಯ ಸಮಿತಿ ಅಧ್ಯಕ್ಷರಾಗಿರುವ (ಸಾಂವಿಧಾನಿಕ ಹುದ್ದೆ) ಯತೀಂದ್ರ ಸಿದ್ದರಾಮಯ್ಯ ಅವರು ಗುರುವಾರ ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ, ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಅಪ್ಪ ಹೇಳಿ ಅಂತ ಮಾತನಾಡಿದ್ದರು. ತಂದೆಯೊಂದಿಗೆ ಮಾತನಾಡಿದ್ದ ಫೋನ್​ ಕಾಲ್​​​ ವಿಡಿಯೋ ವೈರಲ್​​ ಆಗಿತ್ತು.

ಈ ವಿಡಿಯೋದಲ್ಲಿ ಯತೀಂದ್ರ ಸಿದ್ದರಾಮಯ್ಯ ಯಾವುದೋ ಲಿಸ್ಟ್​ ಬಗ್ಗೆ ಮಾತನಾಡುತ್ತ ವಿವೇಕಾನಂದ ಎಂಬ ಹೆಸರನ್ನು ಹೇಳಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ವಿವೇಕಾನಂದ ಎಂಬ ಹೆಸರಿನ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಸಿವಿಲ್​ ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಆದೇಶದಲ್ಲಿ ವಿವೇಕಾನಂದ ಎಂಬ ಇನ್ಸಪೆಕ್ಟರ್​​ ಹೆಸರು ಇದೆ. ಹೀಗಾಗಿ ಸಿಎಂ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಇನ್ಸಪೆಕ್ಟರ್​ ವಿವೇಕಾನಂದ ಅವರ ವರ್ಗಾವಣೆಗೆ ಶಿಫಾರಸು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.​ ಹೀಗಾಗಿ ಸಚಿವ ಪ್ರೀಯಾಂಕ್​ ಖರ್ಗೆ ಅವರು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:58 pm, Sat, 18 November 23

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್