ಇನ್ಸ್​ಪೆಕ್ಟರ್​​ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ: ಡಾ.ಯತೀಂದ್ರ ಸ್ಪಷ್ಟನೆ

ತಂದೆ ಸಿದ್ದರಾಮಯ್ಯ ಜೊತೆ ದೂರವಾಣಿ ಕರೆ ಮೂಲಕ ಸಾರ್ವಜನಿಕವಾಗಿ ಲಿಸ್ಟ್ ಬಗ್ಗೆ ಮಾತನಾಡಿದ ಪುತ್ರ ಡಾ.ಯತೀಂದ್ರ ವಿಡಿಯೋ ವೈರಲ್ ಆಗಿತ್ತು. ಈ ವಿಚಾರವಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಿಗ್ಗಾಮುಗ್ಗವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇಂದು ಕೂಡ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಆರೋಪಗಳಿಗೆ ಯತೀಂದ್ರ ಅವರು ತಿರುಗೇಟು ನೀಡಿದ್ದಾರೆ.

ಇನ್ಸ್​ಪೆಕ್ಟರ್​​ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ: ಡಾ.ಯತೀಂದ್ರ ಸ್ಪಷ್ಟನೆ
ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ಹೆಚ್​ಡಿ ಕುಮಾರಸ್ವಾಮಿ
Follow us
ರಾಮ್​, ಮೈಸೂರು
| Updated By: Rakesh Nayak Manchi

Updated on:Nov 18, 2023 | 11:43 AM

ಮೈಸೂರು, ನ.18: ದೂರವಾಣಿ ಕರೆ ಮೂಲಕ ತಂದೆ ಸಿದ್ದರಾಮಯ್ಯ (Siddaramaiah) ಜೊತೆ ಲಿಸ್ಟ್ ಬಗ್ಗೆ ಮಾತನಾಡಿದ ಪುತ್ರ ಡಾ.ಯತೀಂದ್ರ (Dr.Yathindra) ಅವರ ವಿಡಿಯೋ ವೈರಲ್ ಆಗಿತ್ತು. ಈ ವಿಚಾರವಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (H.D. Kumaraswamy) ಹಿಗ್ಗಾಮುಗ್ಗವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇಂದು ಕೂಡ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಆರೋಪಗಳಿಗೆ ಯತೀಂದ್ರ ಅವರು ತಿರುಗೇಟು ನೀಡಿದ್ದಾರೆ.

ತನ್ನ ವಿರುದ್ಧದ ಆರೋಪಗಳಿಗೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಮಾಜಿ ಶಾಸಕ ಯತೀಂದ್ರ, ಸಿಎಸ್​ಆರ್ ಫಂಡ್​​ ಬಗ್ಗೆ ನಾನು ಅವತ್ತು ಮಾತನಾಡಿದ್ದು ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ಒಬ್ಬ ಸಿಎಂ ಮೇಲೆ ಆರೋಪ ಮಾಡಬೇಕಾದರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ನಮ್ಮ ತಂದೆ ಆಗಲಿ, ನಾನಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಯತೀಂದ್ರ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

ವೈರಲ್ ವಿಡಿಯೋದಲ್ಲಿ, “ಹಲೋ ಅಪ್ಪಾ… ವಿವೇಕಾನಂದನ? ಯಾರು? ಅಂತ ಯತೀಂದ್ರ ಅವರು ಸಿದ್ದರಾಮಯ್ಯ ಅವರ ಬಳಿ ಕೇಳುವುದನ್ನು ಕಾಣಬಹುದು. ಈ ವಿಚಾರವಾಗಿ ಇಂದು ಟ್ವೀಟ್ ಮಾಡಿದ ಕುಮಾರಸ್ವಾಮಿ, ವಿವೇಕಾನಂದರ ವರ್ಗಾವಣೆ ಕುರಿತ ಪ್ರತಿಯನ್ನು ಹಂಚಿಕೊಂಡು “ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಯತೀಂದ್ರ, ವಿವೇಕಾನಂದ ಯಾರು ಅಂತಾ ನನಗೆ ಗೊತ್ತಿಲ್ಲ. ಇನ್ಸ್​ಪೆಕ್ಟರ್​​ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ವಿಪಕ್ಷಗಳು ಹತಾಶರಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ ಎಂದು ಹೇಳಿದರು.

ಇವರು (ಕುಮಾರಸ್ವಾಮಿ) ಅಧಿಕಾರದಲ್ಲಿದ್ದರು, ಸಿಎಂ ಆಗಿಯೂ ಕೆಲಸ ಮಾಡಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ದಂಧೆಯನ್ನೇ ಮಾಡುತ್ತಿದ್ದರಾ? ಭ್ರಷ್ಟಾಚಾರ, ದಂಧೆ ಆಗ್ತಿದೆ ಎಂದು ಸುಳ್ಳು ಆರೋಪ ಮಾಡಬಾರದು ಎಂದು ಕುಮಾರಸ್ವಾಮಿ ವಿರುದ್ಧ ಯತೀಂದ್ರ ವಾಗ್ದಾಳಿ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Sat, 18 November 23

ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ