ಆಗಸ್ಟ್ 15ರಂದು ಕಾಂಗ್ರೆಸ್ನಿಂದ ಬೃಹತ್ ಫ್ರೀಡಂ ಮಾರ್ಚ್: ವಾಹನ ಸವಾರರಿಗೆ ತಟ್ಟಲಿದೆ ಭಾರೀ ಟ್ರಾಫಿಕ್ ಬಿಸಿ

| Updated By: ಆಯೇಷಾ ಬಾನು

Updated on: Aug 13, 2022 | 4:41 PM

ಆಗಸ್ಟ್ 15ರಂದು ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗುತ್ತೆ. ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಾದಯಾತ್ರೆ ಆರಂಭವಾಗಿ ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಜೆ.ಸಿ.ರಸ್ತೆ, ಮಿನರ್ವ ವೃತ್ತ, ವಿ.ವಿ.ಪುರಂ ವೃತ್ತ ಮಾರ್ಗವಾಗಿ ಫ್ರೀಡಂ ಮಾರ್ಚ್ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ತಲುಪುತ್ತೆ.

ಆಗಸ್ಟ್ 15ರಂದು ಕಾಂಗ್ರೆಸ್ನಿಂದ ಬೃಹತ್ ಫ್ರೀಡಂ ಮಾರ್ಚ್: ವಾಹನ ಸವಾರರಿಗೆ ತಟ್ಟಲಿದೆ ಭಾರೀ ಟ್ರಾಫಿಕ್ ಬಿಸಿ
ಫ್ರೀಡಂ ಮಾರ್ಚ್​ಗೆ ಕಾಂಗ್ರೆಸ್ ಸಿದ್ಧತೆ
Follow us on

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆಗೆ ಕಾಂಗ್ರೆಸ್ನಿಂದ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಆಗಸ್ಟ್ 15ರಂದು ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಫ್ರೀಡಂ ಮಾರ್ಚ್ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದ್ದು ಈಗಾಗಲೇ 75,000ಕ್ಕೂ ಹೆಚ್ಚು ಜನರು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಆಗಸ್ಟ್ 15ರ ಸೋಮವಾರದಂದು ಭಾರೀ ಟ್ರಾಫಿಕ್ ಬಿಸಿ ತಟ್ಟಲಿದೆ.

ಕಾಂಗ್ರೆಸ್ ಒಟ್ಟು 11 ಉಪಸಮಿತಿ ರಚಿಸಿ ಒಂದೊಂದು ಜವಾಬ್ದಾರಿ ಹಂಚಿದ್ದಾರೆ. ಸಾರಿಗೆ, ಆಹಾರ, ಮಾಧ್ಯಮ ಸೇರಿದಂತೆ ವಿವಿಧ ಉಪಸಮಿತಿ ರಚನೆ ಮಾಡಲಾಗಿದೆ. ಫ್ರೀಡಂ ಮಾರ್ಚ್ನಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಟೀಶರ್ಟ್, ಕ್ಯಾಪ್, ಕಿಟ್ ವಿತರಣೆ ಮಾಡಲಾಗುತ್ತೆ. ಜಿಲ್ಲಾವಾರು ಜವಾಬ್ದಾರಿ ನೀಡಿ ರಾಷ್ಟ್ರಧ್ವಜ, ಇತರೆ ಸಾಮಗ್ರಿ ಹಂಚಿಕೆ ಮಾಡಿದ್ದಾರೆ. ಈಗಾಗಲೇ ಕೆಪಿಸಿಸಿ 50 ಸಾವಿರ ಮೆಟ್ರೋ ಟಿಕೆಟ್ ಖರೀದಿಸಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಫ್ರೀಡಂ ಮಾರ್ಚ್ ಸಾಗುವ ಮಾರ್ಗ

ಆಗಸ್ಟ್ 15ರಂದು ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗುತ್ತೆ. ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಾದಯಾತ್ರೆ ಆರಂಭವಾಗಿ ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಜೆ.ಸಿ.ರಸ್ತೆ, ಮಿನರ್ವ ವೃತ್ತ, ವಿ.ವಿ.ಪುರಂ ವೃತ್ತ ಮಾರ್ಗವಾಗಿ ಫ್ರೀಡಂ ಮಾರ್ಚ್ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ತಲುಪುತ್ತೆ. ಬಳಿಕ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ. ಇನ್ನು ಫ್ರೀಡಂ ಮಾರ್ಚ್ ತೆರಳುವ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣ ಬಿಂಬಿಸುವ ಸ್ತಬ್ಧ ಚಿತ್ರಗಳ ಪ್ರದರ್ಶನ ಮಾಡಲಾಗುತ್ತೆ. ರಾಜ್ಯದ ವಿವಿಧ ಜಿಲ್ಲೆಯ ಕಲಾ ತಂಡಗಳು ಫ್ರೀಡಂ ಮಾರ್ಚ್ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ದೇಶದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ಗೌರವ ಸಲ್ಲಿಸಿ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತೆ. ಪಾದಯಾತ್ರೆ ಮಾರ್ಗದಲ್ಲಿ ಪ್ರತಿ ಕಿ.ಮೀ.ಗೆ ಒಂದರಂತೆ 6 ಆ್ಯಂಬುಲೆನ್ಸ್, ವೈದ್ಯರ ತಂಡ ನಿಯೋಜನೆ ಮಾಡಲಾಗಿದ್ದು ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ. ಆ.15ರ ಸಂಜೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಂಗೀತ ಕಾರ್ಯಕ್ರಮ ನಡೆಯುವ ಮೂಲಕ ಫ್ರೀಡಂ ಮಾರ್ಚ್ಗೆ ತೆರೆ ಬೀಳಲಿದೆ. ಯಾವುದೇ ರಾಜಕೀಯ ಭಾಷಣ ಇರುವುದಿಲ್ಲ.

Published On - 4:37 pm, Sat, 13 August 22