ಇದಕ್ಕಿಂತ ಇನ್ಯಾವ ದಾಖಲೆ ಬೇಕು? ಲಂಚ ಸಂಕಲ್ಪಯಾತ್ರೆ, ಭ್ರಷ್ಟೋತ್ಸವ ಮಾಡಲು ಶಾ ರಾಜ್ಯಕ್ಕೆ ಬರ್ತಿದ್ದಾರೆ: ಪ್ರಿಯಾಂಕ್ ಖರ್ಗೆ
ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ಇನ್ಯಾವ ದಾಖಲೆ ಬೇಕು? ನಿನ್ನೆ ಬಹಳ ದೊಡ್ಡ ಮಟ್ಟದಲ್ಲಿ ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಾವು ಯಾವಾಗಲೂ ಹೇಳ್ತಿದ್ವಿ, ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿದ್ದಾರೆ ಅಂತ. ಅದಕ್ಕೆ ದಾಖಲೆ ಏನಿದೆ ಅಂತ ಕೇಳ್ತಿದ್ರು. ಸಾರ್ವಜನಿಕರ ವಲಯದಲ್ಲಿ ಇದು ಭ್ರಷ್ಟ ಸರ್ಕಾರ ಎನ್ನುವ ಅಭಿಪ್ರಾಯ ಇದೆ. ಮೋಸ್ಟ್ ಕರಪ್ಟ್ ಗವರ್ನಮೆಂಟ್ ಅಂತ ಜನ ಮಾತಾಡಿಕೊಳ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು: ಲಂಚ ಸಂಕಲ್ಪಯಾತ್ರೆ, ಭ್ರಷ್ಟೋತ್ಸವ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ಮಾಡಿದ್ದಾರೆ. ಲೋಕಾಯುಕ್ತ (Lokayukt) ದಾಳಿ ವೇಳೆ ಬಿಜೆಪಿ (BJP) ಶಾಸಕರ ಪುತ್ರ ಸಿಕ್ಕಿಬಿದ್ದಿದ್ದಾನೆ. ಏಳೂವರೆ ಕೋಟಿ ರೂಪಾಯಿ ಇವರಿಗೆ ಎಲ್ಲಿಂದ ಬಂತು. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಳಿ ಇಷ್ಟೊಂದು ಹಣವಿದ್ರೆ, ಇನ್ನು ಸಚಿವರು, ದೊಡ್ಡ ಸ್ಥಾನದಲ್ಲಿರುವವರ ಬಳಿ ಎಷ್ಟು ಹಣವಿರಬಹುದು. ನಾವು ‘ಪೇಸಿಎಂ’ ಅಭಿಯಾನ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ಇನ್ಯಾವ ದಾಖಲೆ ಬೇಕು? ನಿನ್ನೆ ಬಹಳ ದೊಡ್ಡ ಮಟ್ಟದಲ್ಲಿ ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಾವು ಯಾವಾಗಲೂ ಹೇಳ್ತಿದ್ವಿ, ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿದ್ದಾರೆ ಅಂತ. ಅದಕ್ಕೆ ದಾಖಲೆ ಏನಿದೆ ಅಂತ ಕೇಳ್ತಿದ್ರು. ಸಾರ್ವಜನಿಕರ ವಲಯದಲ್ಲಿ ಇದು ಭ್ರಷ್ಟ ಸರ್ಕಾರ ಎನ್ನುವ ಅಭಿಪ್ರಾಯ ಇದೆ. ಮೋಸ್ಟ್ ಕರಪ್ಟ್ ಗವರ್ನಮೆಂಟ್ ಅಂತ ಜನ ಮಾತಾಡಿಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಡೂರಿನಲ್ಲಿ ಅಮಿತ್ ಶಾ ಅವರು ನೀವು ಮೋದಿ ನೋಡಿ ಮತ ಹಾಕಿ. ಭ್ರಷ್ಟಾಚಾರ ಮುಕ್ತ ಆಡಳಿತ ಕೊಡ್ತೇವೆ ಅಂತ ಹೇಳಿದ್ದರು. ತಮ್ಮ ಸರ್ಕಾರದ ಹಣೆಬರಹ ಏನು ಅನ್ನೋದು ಅವರಿಗೆ ಗೊತ್ತಿದೆ ಅನ್ಸುತ್ತೆ. ಈಗ ಆಗಿರುವ ಬೆಳವಣಿಗೆ ನೋಡಿದರೇ ಅಮಿತ್ ಶಾ ಯಾಕೆ ಹೇಳಿದ್ರು ಅಂತ ಅರ್ಥ ಆಗುತ್ತಿದೆ. ನಾವು ದಾಖಲೆ ಸಹಿತ ಅಕ್ರಮ ಬಯಲಮಾಡಿದಾಗ ದಾಖಲೆ ಏನು ಅಂತ ಕೇಳ್ತಿದ್ರು, ಇದಕ್ಕಿಂತ ಮತ್ತೆ ಯಾವ ದಾಖಲೆ ಬೇಕು ಸ್ವಾಮಿ ಎಂದು ಟಾಂಗ್ ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Fri, 3 March 23