ಬೆಂಗಳೂರನ್ನ ಕಾಡುತ್ತಿದೆ ಕೊರೊನಾ; 2 ದಿನದಲ್ಲಿ 152ಕ್ಕೆ ಏರಿಕೆಯಾದ ಕಂಟೇನ್‌ಮೆಂಟ್ ಜೋನ್​ಗಳ ಸಂಖ್ಯೆ

| Updated By: ಆಯೇಷಾ ಬಾನು

Updated on: Jan 07, 2022 | 8:40 AM

ಬೊಮ್ಮನಹಳ್ಳಿ ವಲಯ-49, ಮಹದೇವಪುರ ವಲಯ-48, ಪಶ್ಚಿಮ ವಲಯ-16, ದಕ್ಷಿಣ ವಲಯ-15, ಪೂರ್ವ ವಲಯ-12, ಯಲಹಂಕ-10, ದಾಸರಹಳ್ಳಿ-3, ಆರ್.ಆರ್.ನಗರದಲ್ಲಿ 1 ಕಂಟೇನ್‌ಮೆಂಟ್ ಜೋನ್ನನ್ನು ಗುರುತಿಸಲಾಗಿದೆ.

ಬೆಂಗಳೂರನ್ನ ಕಾಡುತ್ತಿದೆ ಕೊರೊನಾ; 2 ದಿನದಲ್ಲಿ 152ಕ್ಕೆ ಏರಿಕೆಯಾದ ಕಂಟೇನ್‌ಮೆಂಟ್ ಜೋನ್​ಗಳ ಸಂಖ್ಯೆ
ಬೆಂಗಳೂರನ್ನ ಕಾಡುತ್ತಿದೆ ಕೊರೊನಾ; 2 ದಿನದಲ್ಲಿ 152ಕ್ಕೆ ಏರಿಕೆಯಾದ ಕಂಟೇನ್‌ಮೆಂಟ್ ಜೋನ್ಗಳ ಸಂಖ್ಯೆ
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ(Coronavirus) ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸದ್ಯ ಬೆಂಗಳೂರಿನಲ್ಲಿ ಕಂಟೇನ್‌ಮೆಂಟ್ ಜೋನ್‌ಗಳ(Containment Zone) ಸಂಖ್ಯೆಯನ್ನು ಏರಿಸಲಾಗಿದೆ. 2 ದಿನದಲ್ಲಿ 152ಕ್ಕೆ ಕಂಟೇನ್‌ಮೆಂಟ್ ಜೋನ್ಗಳ ಸಂಖ್ಯೆ ಏರಿಕೆಯಾಗಿದೆ. ಅದರಲ್ಲೂ ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಕಂಟೇನ್‌ಮೆಂಟ್ ಜೋನ್ಗಳು ಪತ್ತೆಯಾಗಿವೆ.

ಕಂಟೇನ್‌ಮೆಂಟ್ ಜೋನ್ಗಳ ಪಟ್ಟಿ
ಬೊಮ್ಮನಹಳ್ಳಿ ವಲಯ-49, ಮಹದೇವಪುರ ವಲಯ-48, ಪಶ್ಚಿಮ ವಲಯ-16, ದಕ್ಷಿಣ ವಲಯ-15, ಪೂರ್ವ ವಲಯ-12, ಯಲಹಂಕ-10, ದಾಸರಹಳ್ಳಿ-3, ಆರ್.ಆರ್.ನಗರದಲ್ಲಿ 1 ಕಂಟೇನ್‌ಮೆಂಟ್ ಜೋನ್ನನ್ನು ಗುರುತಿಸಲಾಗಿದೆ. ನಗರದ 8 ವಲಯಗಳಲ್ಲಿ ಕೊವಿಡ್ ಪಾಸಿಟಿವಿಟಿ ದರ ಏರಿಕೆಯಾಗಿದೆ. ಮಹದೇವಪುರ ಪಾಸಿಟಿವಿಟಿ ರೇಟ್ 3 % ರಷ್ಟು ಸಮೀಪ ತಲುಪಿದೆ.

ಕಂಟೇನ್‌ಮೆಂಟ್ ಜೋನ್ಗಳ ಪಟ್ಟಿ

8 ವಲಯಗಳಲ್ಲಿರುವ ಪಾಸಿಟಿವ್ ರೇಟ್ ಮತ್ತು ಕೇಸ್ಗಳ ಸಂಖ್ಯೆ
ಮಹದೇವಪುರ -201 ಕೇಸ್, ಪಾಸಿಟಿವಿಟಿ ರೇಟ್ -2.45%
ಪೂರ್ವ ವಲಯ -166 ಕೇಸ್, ಪಾಸಿಟಿವಿಟಿ ರೇಟ್ -2.30%
ಬೊಮ್ಮನಹಳ್ಳಿಯಲ್ಲಿ -126 ಕೇಸ್, ಪಾಸಿಟಿವಿಟಿ ರೇಟ್ -1.65%
ದಕ್ಷಿಣ ವಲಯದಲ್ಲಿ -113 ಕೇಸ್, ಪಾಸಿಟಿವಿಟಿ ರೇಟ್ -1.60%
ಪಶ್ಚಿಮ ವಲಯದಲ್ಲಿ -86 ಕೇಸ್, ಪಾಸಿಟಿವಿಟಿ ರೇಟ್ -1.09%
ಯಲಹಂಕ -57 ಕೇಸ್, ಪಾಸಿಟಿವಿಟಿ ರೇಟ್ -1.02%
ದಾಸರಹಳ್ಳಿ -16 ಕೇಸ್, ಪಾಸಿಟಿವಿಟಿ ರೇಟ್ -0.99%
ಆರ್.ಆರ್. ನಗರದಲ್ಲಿ -48 ಕೇಸ್, ಪಾಸಿಟಿವಿಟಿ ರೇಟ್ -0.95%

8 ವಲಯಗಳಲ್ಲಿರುವ ಪಾಸಿಟಿವ್ ರೇಟ್

ಬೆಂಗಳೂರಿಗೆ ಡಿಸೆಂಬರ್ ಕಂಟಕ
ಕಳೆದ ಮೂರು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಡಿಸೆಂಬರ್ ತಿಂಗಳು ಬೆಂಗಳೂರಿಗೆ ಕಂಟಕವಾಗಿ ಪರಿಣಮಿಸಿದೆ. ಡಿಸೆಂಬರ್ 2019 ಆರಂಭವಾದ ಕೋವಿಡ್ ಯುಹಾನ್ D61Gತಳಿ ಎಂಟ್ರಿ ಡಿಸೆಂಬರ್ 2020 ಗೆ ಡೆಲ್ಟಾ ತಳಿ ಪತ್ತೆ. ಡಿಸೆಂಬರ್ 2021 ಒಮಿಕ್ರಾನ್ ತಳಿ ಪತ್ತೆಯಾಗಿತ್ತು.

ಇದನ್ನೂ ಓದಿ: ತೃತಿಯ ರಂಗ ಸ್ಥಾಪನೆ ಮಾಡುವುದು ಸದ್ಯಕ್ಕೆ ಕಷ್ಟ ಕಷ್ಟ, ಬಿಜೆಪಿ ಒನ್ ಮ್ಯಾನ್ ಪಾರ್ಟಿಯಾಗಿದೆ – ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ

Published On - 12:08 pm, Wed, 5 January 22