ಬೆಂಗಳೂರು, ಅ.20: ಗುತ್ತಿಗೆದಾರನನ್ನು ಅಪಹರಿಸಿ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ನಗರದ ಯಶವಂತಪುರ ಠಾಣಾ ಪೊಲೀಸರು ಬಿಬಿಎಂಪಿ (BBMP) ಮಾಜಿ ಕಾರ್ಪೊರೇಟರ್ ಜಿ.ಕೆ.ವೆಂಕಟೇಶ್ ಅವರನ್ನು ಅಧಿಕೃತವಾಗಿ ಬಂಧಿಸಿದ್ದಾರೆ. ಕಿಡ್ನ್ಯಾಪ್ ಆಗಿದ್ದ ಗುತ್ತಿಗೆದಾರ ಚಂದ್ರು ದೂರಿನ ಮೇರೆಗೆ ವೆಂಕಟೇಶ್ ಬಂಧನವಾಗಿದೆ.
ಯಶವಂತಪುರ ವಾರ್ಡ್‌ನಲ್ಲಿ ಕಾಮಗಾರಿವೊಂದರ ಗುತ್ತಿಗೆ ಚಂದ್ರು ಪಾಲಾಗಿತ್ತು. ಇದರಿಂದ ಕೆಂಡಾಮಂಡಲವಾಗಿದ್ದ ಯಶವಂತಪುರದ ವಾರ್ಡ್ನ ಮಾಜಿ ಕಾರ್ಪೊರೇಟರ್ ಜಿ.ಕೆ.ವೆಂಕಟೇಶ್, ಎರಡು ದಿನಗಳ ಹಿಂದೆ ಅಪಹರಿಸಿ 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: ರಾಜಧಾನಿ ಬೆಂಗಳೂರು ಹೆಬ್ಬಾಗಿಲಲ್ಲೇ ನಡೀತು ಸಿನಿಮಾ ಶೈಲಿಯ ಕಿಡ್ನಾಪ್, ಎರಡು ದಿನಗಳ ಬಳಿಕ ಯುವಕನ ಮೃತದೇಹ ಪತ್ತೆ
ನಿನ್ನಿಂದ ನಷ್ಟ ಆಗಿದೆ, ಕಾಮಗಾರಿ ಕೈತಪ್ಪಿದೆ, ಅದನ್ನು ಭರಿಸುವಂತೆ ಬೆದರಿಕೆಯೂ ಹಾಕಿದ್ದರು. ಬಳಿಕ 3 ಕೋಟಿ ರೂಪಾಯಿ ಚೆಕ್ ಪಡೆದು ಹಲ್ಲೆ ಮಾಡಿ ಚಂದ್ರುನನ್ನು ಬಿಡುಗಡೆ ಮಾಡಿದ್ದರು. ಘಟನೆ ಸಂಬಂಧ ಚಂದ್ರು ಅವರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೆಂಕಟೇಶ್ ಅವರನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ವೆಂಕಟೇಶ್ ಅವರನ್ನು ಯಶ್ವಂತಪುರ ಠಾಣಾ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ