ಕೊವಿಡ್19 ಸೆಲ್ಫ್ ಟೆಸ್ಟ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ; ವಿವರ ಓದಿರಿ

| Updated By: ganapathi bhat

Updated on: Jan 28, 2022 | 10:07 PM

ಮನೆಯಲ್ಲೇ ‌ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಿದ್ದು ಅದರ ವಿವರಗಳನ್ನು ಟ್ವಿಟರ್​ನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಂಚಿಕೊಂಡಿದ್ದಾರೆ. ಸೆಲ್ಫ್​​ ಟೆಸ್ಟ್ ವೇಳೆ ಪಾಸಿಟಿವ್ ಬಂದ್ರೆ ಅಪ್ಲೋಡ್​ ಮಾಡಬೇಕು.

ಕೊವಿಡ್19 ಸೆಲ್ಫ್ ಟೆಸ್ಟ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ; ವಿವರ ಓದಿರಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸೆಲ್ಫ್ ಕೊವಿಡ್ ಟೆಸ್ಟ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮನೆಯಲ್ಲೇ ‌ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಿದ್ದು ಅದರ ವಿವರಗಳನ್ನು ಟ್ವಿಟರ್​ನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಂಚಿಕೊಂಡಿದ್ದಾರೆ. ಸೆಲ್ಫ್​​ ಟೆಸ್ಟ್ ವೇಳೆ ಪಾಸಿಟಿವ್ ಬಂದ್ರೆ ಅಪ್ಲೋಡ್​ ಮಾಡಬೇಕು. ಐಸಿಎಂಆರ್​​ ಪೋರ್ಟಲ್​​ನಲ್ಲಿ ಅಪ್ಲೋಡ್‌ ಮಾಡಬೇಕು. https://cvstatus.icmr.gov.in ನಲ್ಲಿ ಅಪ್ಲೋಡ್ ಮಾಡಬೇಕು ಎಂದು ತಿಳಿಸಲಾಗಿದೆ. ಲಕ್ಷಣ ಇದ್ದು ನೆಗೆಟಿವ್ ಬಂದ್ರೆ RTPCR ಟೆಸ್ಟ್ ಮಾಡಿಸಬೇಕು. ಲಕ್ಷಣಗಳಿಲ್ಲದೇ ಇದ್ದಾಗ ನೆಗೆಟಿವ್ ಬಂದರೆ ಸಮಸ್ಯೆ ‌ಇಲ್ಲ ಎಂದು ಸೂಚಿಸಲಾಗಿದೆ.

ಕೊರೊನಾ ಸೆಲ್ಫ್ ಟೆಸ್ಟ್ ವೇಳೆ ಕೊವಿಡ್ 19 ಪಾಸಿಟಿವ್ ಬಂದರೆ ಇಲ್ಲಿ ನೀಡಿರುವ ಲಿಂಕ್ ಹಿಂಬಾಲಿಸಿ ಅಪ್ಲೋಡ್ ಮಾಡಿ.

ಕರ್ನಾಟಕ ಕೊರೊನಾ ವರದಿ

ಕರ್ನಾಟಕ ರಾಜ್ಯದಲ್ಲಿ ಇಂದು (ಜನವರಿ 28) ಹೊಸದಾಗಿ 31,198 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 37,23,694 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 33,96,093 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 50 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,804 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 2,88,767 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 15,199 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 16,81,674 ಕ್ಕೆ ಏರಿಕೆಯಾಗಿದೆ. 16,81,674 ಸೋಂಕಿತರ ಪೈಕಿ 15,04,941 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 8 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,554 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 1,60,178 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಇದನ್ನೂ ಓದಿ: ಕೊರೊನಾ ಹಿನ್ನೆಲೆ; ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪೂರ್ಣ ಕ್ಯಾರಿ ಓವರ್- ವಿವರ ಇಲ್ಲಿದೆ

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 31,198 ಜನರಿಗೆ ಕೊರೊನಾ ದೃಢ; 50 ಮಂದಿ ಸಾವು