ಬೆಂಗಳೂರು: ಚೀನಾ, ಜಪಾನ್, ಕೊರಿಯಾ, ಅಮೆರಿಕ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ. ಓಮಿಕ್ರಾನ್ ಹೊಸ ರೂಪಾಂತರಿ ಮತ್ತೆ ಅಬ್ಬರಿಸೋಕೆ ಶುರುಮಾಡಿದೆ ಎಂಬ ಆತಂಕ ಹೆಚ್ಚಾಗಿದ್ದು ಎರಡು ವಾರಗಳ ಕಾದು ನೋಡುವ ತಂತ್ರಕ್ಕೆ ತಜ್ಞರು ಮುಂದಾಗಿದ್ದಾರೆ. ದೇಶದಲ್ಲಿ ಎರಡು ವಾರಗಳ ಬಳಿಕ ಕೊರೊನಾ ಆರ್ಭಟದ ಚಿತ್ರಣ ಸಿಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಒಂದು ವರ್ಷ ಬಳಿಕ ಮತ್ತೆ ಓಮಿಕ್ರಾನ್ ರೂಪಾಂತರಿಗಳು ಎಂಟ್ರಿ ಕೊಡುತ್ತಿವೆ. ಹೊಸ ರೂಪಾಂತರಿಯ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಹೆಚ್ಚು ಪತ್ತೆಯಾಗಿರುವ ಓಮಿಕ್ರಾನ್ ಉಪತಳಿ f7 ಸುಮಾರು ದೇಶಗಳಲ್ಲಿ ಕೇಸ್ ಹಾಗೂ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಜಪಾನ್ ನಲ್ಲಿ ಕೊರೊನಾ ಅಟ್ಟಹಾಸಕ್ಕೂ ಉಪತಳಿಗಳೇ ಕಾರಣ. ಅಮೇರಿಕಾದಲ್ಲಿ ನಿನ್ನೆ 384 ಜನರ ಸಾವಾಗಿದೆ. 68 ಸಾವಿರ ಕೊರೊನಾ ದೃಢಪಟ್ಟಿದೆ. ಭಾರತಕ್ಕೆ ಬೇರೆ ಬೇರೆ ದೇಶಗಳಿಂದ ದಿನ ಸುಮಾರು 250 ಫ್ಲೈಟ್ ಸಂಚಾರ ಮಾಡ್ತೀವಿ. ಹೀಗಾಗಿ ಆತಂಕ ಹೆಚ್ಚಾಗಿದೆ.
ಹೊಸ ಮಾರ್ಗಸೂಚಿ ಬಿಡುಗಡೆಗೆ ಮುಂದಾದ ಆರೋಗ್ಯ ಇಲಾಖೆ
ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾದ ಹಿನ್ನೆಲೆ ಕೊರೊನಾ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಚೀನಾ ಹಾಗೂ ಅಮೇರಿಕಾದಲ್ಲಿ ಸೋಂಕು ಗಣನೀಯ ಏರಿಕೆ ಕಾಣುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಹೊಸ ರೂಪಾಂತರಿಗಳ ಪತ್ತೆಗೆ ರಾಜ್ಯ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿದೆ. ಎಲ್ಲಾ ಪಾಸಿಟಿವ್ ಕೇಸ್ ಸಾಂಪಲ್ ಗಳನ್ನ ಜೀನೋಮ್ ಸೀಕ್ವೆನ್ಸಿಂಗ್ ಕಳಿಸುವಂತೆ ಸೂಚನೆ ನೀಡಿದ್ದು ಸೀಕ್ವೆನ್ಸಿಂಗ್ ಮಾಡಲು INSCOG ನ ಅನುಮತಿ ಪಡೆದ ಲ್ಯಾಬ್ ಗಳಿಗೆ ಕಳಿಸುವಂತೆ ಸೂಚನೆ ನೀಡಿದೆ.
ದೇಶದಲ್ಲಿ 5 ಪೋಲ್ಡ್ ಸೂತ್ರ ಪಾಲನೆ ಮಾಡೋ ಮೂಲಕ ಕೊವಿಡ್ ಆರ್ಭಟಕಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ. ಕಳೆದ ಸಭೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಗೆ ಹೊಸ ರೂಪಾಂತರಿಗಳ ಬಗ್ಗೆ ಎಚ್ಚರಿಕೆ ನೀಡಿದ್ದು ಟೆಸ್ಟ್, ಟ್ರಾಕ್, ಟ್ರೀಟ್, ವ್ಯಾಕ್ಸಿನೇಷನ್ ಅನುಸರಣೆ ಮಾಡುವಂತೆ ಸೂಚನೆ ಕೊಟ್ಟಿದೆ. ಮತ್ತೆ ಕೊರೊನಾ ಏರಿಕೆ ಕಂಡ್ರೆ ಕೊರೊನಾ ಮಾರ್ಗಸೂಚಿಗಳ ಜಾರಿ ಅಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.
ನಾವು ಕೂಡ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ
ಇನ್ನು ಕೊರೊನಾ ಸಂಬಂಧ ಮಾತನಾಡಿದ ಸಚಿವ ಸುಧಾಕರ್, ಕೊವಿಡ್ ಬಗ್ಗೆ ರಾಜ್ಯದ ಜನರು ಆತಂಕಪಡಬೇಕಿಲ್ಲ. ಕೊವಿಡ್ ಸಂಬಂಧ ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರಧಾನಿ ಮೋದಿ ಕೂಡ ಸಲಹೆಗಳನ್ನು ನೀಡಲಿದ್ದಾರೆ. ನಾವು ಕೂಡ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:59 am, Thu, 22 December 22