Bengaluru: ಡಬಲ್ ಮರ್ಡರ್ ಪ್ರಕರಣ: ಆರೋಪಿಗಳು ಕಾಂಪೌಂಡ್ ಹಾರುವ ದೃಶ್ಯ ಸೆರೆಹಿಡಿದ ಪಕ್ಕದ ಮನೆಯ ಸಿಸಿ ಕ್ಯಾಮೆರಾ
ಕೋರಮಂಗಲದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಸಿಸಿಟಿವಿ ದೃಶ್ಯಾವಳಿ ಪೊಲೀಸರ ಕೈಸೇರಿದೆ. ಇದೇ ಸಿಸಿಟಿವಿ ಆಧರಿಸಿ ಖಾಕಿ ಪಡೆ, ಆರೋಪಿಗಳ ಮಾಹಿತಿ ಸಂಗ್ರಹಿಸಿದೆ.
ಬೆಂಗಳೂರು: ನಗರದ ಕೋರಮಂಗಲದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣ (Double murder case) ಸಂಬಂಧ ಪಕ್ಕದ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ (CC Camera Video) ಆರೋಪಿಗಳ ಹೆಜ್ಜೆ ಗುರುತು ಸೆರೆಹಿಡಿದೆ. ಆರೋಪಿಗಳು ಇಬ್ಬರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಡಿವಿಆರ್ ಹೊತ್ತೊಯ್ದಿದ್ದರು. ಆದರೆ ಆರೋಪಿಗಳು ಕಾಂಪೌಂಡ್ ಹತ್ತಿ ಇಳಿಯುವ ದೃಶ್ಯ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿ.17 ರ ರಾತ್ರಿ 10.10 ಕ್ಕೆ ಸರಿಯಾಗಿ ಮನೆಯ ಹಿಂಬದಿ ಕಾಂಪೌಂಡ್ ಜಂಪ್ ಮಾಡಿ ಬಂದಿದ್ದ. ಇದನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿದ್ದಾರೆ. ಕೋರಮಂಗಲ 6ನೇ ಬ್ಲಾಕ್ನಲ್ಲಿ ಕಾಂಟ್ರಾಕ್ಟರ್ ರಾಜಗೋಪಾಲ ರೆಡ್ಡಿ ಮನೆಯಲ್ಲಿ ಮನೆ ಕೆಲಸದವನನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿದ ಪ್ರಕರಣ ಇದಾಗಿದೆ. ಸದ್ಯ ಪೊಲೀಸರು ಪ್ರಮುಖ ಆರೋಪಿ ಜಗದೀಶ್, ಅಭಿಷೇಕ್, ಕಿರಣ್ ಎಂಬವರನ್ನು ಬಂಧಿಸಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ