ಕೇರಳದಲ್ಲಿ ಮತ್ತೆ ಕೊರೊನಾ ಹೆಚ್ಚಳ; ರಾಜ್ಯಕ್ಕೆ ಕೋವಿಡ್ ಆತಂಕ, ಆರೋಗ್ಯ ಇಲಾಖೆಯಿಂದ ಸಭೆ

| Updated By: ಆಯೇಷಾ ಬಾನು

Updated on: Dec 17, 2023 | 7:06 AM

ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಈ ನಡುವೆ ಕೇರಳದಲ್ಲೂ ಕೊರೊನಾ ಏರಿಕೆ ಕಂಡಿದೆ. ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಪಕ್ಕದ ರಾಜ್ಯ ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಮ್ಮಲ್ಲಿಯೂ ಕೊರೊನಾ ಏರಿಕೆಯ ಆತಂಕ ಶುರುವಾಗಿದೆ.

ಕೇರಳದಲ್ಲಿ ಮತ್ತೆ ಕೊರೊನಾ ಹೆಚ್ಚಳ; ರಾಜ್ಯಕ್ಕೆ ಕೋವಿಡ್ ಆತಂಕ, ಆರೋಗ್ಯ ಇಲಾಖೆಯಿಂದ ಸಭೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.17: ಕೊವಿಡ್ ಮುಗಿಯದ ಕಥೆ‌. ವೈರಸ್ ಜೊತೆ ಬದುಕಲು ಕಲಿಯಬೇಕು ಎಂದು ಹೇಳುವ ವೈದ್ಯರ ಮಾತು ಪದೇ ಪದೇ ಪ್ರೂವ್ ಆಗ್ತಿದೆ. ವರ್ಷಗಳಿಂದ ಸೈಲೆಂಟ್ ಇದ್ದ ವುಹಾನ್ ವೈರಸ್ ಹೊಸ ರೂಪದೊಂದಿಗೆ ಮತ್ತೆ ವೈಲೆಂಟ್ ಆಗಲು ಹೊಂಚು ಹಾಕಿದೆ. ವೈರಲ್ ಫೀವರ್ ಹಾಗೂ ಸಾಂಕ್ರಾಮಿಕ ಖಾಯಿಲೆಗಳ ನಡುವೆ ರಾಜ್ಯದಲ್ಲಿ ಕೊವಿಡ್ (Covid 19) ಆತಂಕ ಶುರುವಾಗಿದೆ. ಇಷ್ಟು ದಿನ ಸೈಲೆಂಟ್ ಇದ್ದ ಕೊರೊನಾ (Coronavirus) ಈಗ ಮತ್ತೆ ರೂಪ ಬದಲಿಸಿ ಆರ್ಭಟಿಸಲು ಮುಂದಾಗಿದೆ. ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಆತಂಕ ಶುರುವಾಗಿದೆ.

ದೇವರನಾಡು ಕೇರಳಾದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಹೀಗಾಗಿ ನಮ್ಮಲಿಯೂ ಕೊರೊನಾ ಆತಂಕ ಮತ್ತೆ ಶುರುವಾಗಿದೆ. ಕಳೆದ ಮೂರು ವರ್ಷದಿಂದ ಭಾರತದಲ್ಲಿ ಮೊದಲ ಪ್ರಕರಣ ಕೇರಳದಲ್ಲೇ ಕಂಡು ಬಂದಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲಿ ಸಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಕೇರಳದಲ್ಲಿನ ಕೊರೊನಾ ಏರಿಕೆ ಆತಂಕ ರಾಜ್ಯಕ್ಕೆ ಡವ ಡವ ಶುರುವಾಗಿದೆ.

ಈಗಾಗಲೇ ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಈ ನಡುವೆ ಕೇರಳದಲ್ಲೂ ಕೊರೊನಾ ಏರಿಕೆ ಕಂಡಿದೆ. ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಪಕ್ಕದ ರಾಜ್ಯ ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಮ್ಮಲ್ಲಿಯೂ ಕೊರೊನಾ ಏರಿಕೆಯ ಆತಂಕ ಶುರುವಾಗಿದೆ.

ಜೆಎನ್.1 ಲಕ್ಷಣಗಳು?

  • ಜ್ವರ, ಕೆಮ್ಮು, ಸುಸ್ತು,
  • ಮೂಗು ಕಟ್ಟುವಿಕೆ,
  • ಸ್ರವಿಸುವ ಮೂಗು,
  • ಅತಿಸಾರ ಮತ್ತು ತಲೆನೋವು.

ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ, ರಾಜ್ಯ ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿದೆ. ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಂದ ಸಭೆ ನಡೆಸಲಾಯ್ತು ಸಚಿವರ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ರು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮುಂಜಾಗೃತ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡುರಾವ್, ಕೇರಳದಲ್ಲಿ ಕೊವಿಡ್ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 58 ಸಕ್ರಿಯ ಪ್ರಕರಣಗಳಿವೆ 47 ಜನರಿಗೆ ಹೋಮ್ ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕೋವಿಡ್ 19: ಕೇರಳದಲ್ಲಿ ಒಂದೇ ದಿನ 230 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 949ಕ್ಕೆ ಏರಿಕೆ

ಅಕ್ಟೋಬರ್ ನಲ್ಲಿ ಒಬ್ರು ಕೊವಿಡ್ ನಿಂದ ಮೃತ ಪಟ್ಟಿದ್ದಾರೆ. ಹೀಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ. ಕಳೆದೊಂದು ತಿಂಗಳಿನಿಂದ ಸಾಂಕ್ರಾಮಿಕ ಖಾಯಿಲೆಗಳು ಹೆಚ್ಚಾಗುತ್ತಿದ್ದಾವೆ. ವೈರಲ್ ಫಿವರ್, ಐಎಲ್ಐ ಸಾರಿ ಕೇಸ್ ಕಂಡು ಬಂದಲ್ಲಿ ಕೊವಿಡ್ ಟೆಸ್ಟ್ ಮಾಡ್ತೀವಿ. ಕೊವಿಡ್ ಟೆಸ್ಟ್ ಏರಿಕೆ ಮಾಡ್ತೀವಿ. ಕೊವಿಡ್ ಲಕ್ಷಣ ಕಂಡು ಬಂದ್ರೆ ಟೆಸ್ಟ್ ಮಾಡ್ತೀವಿ. ಮುಂದಿನ ಮೂರು ತಿಂಗಳಿಗೆ ಬೇಕಾದ ಕೊವಿಡ್ ಟೆಸ್ಟ್ ಖರೀದಿಗೆ ಸೂಚನೆ ನೀಡಿದ್ದು ಆಸ್ಪತ್ರೆಗಳಲ್ಲಿ ಮಾಕ್ ಡ್ರೀಲ್ ಮಾಡಲು ತಿಳಿಸಿದ್ದಾರೆ. ಔಷಧಿ, ಬೆಡ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಸಿದ್ಧತೆಗೆ ಸೂಚನೆ ನೀಡಿದ್ದೇವೆ. ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಲಾಗುತ್ತದೆ. ತಜ್ಞರ ಸಭೆ ಬಳಿಕ ಸೂಕ್ತ ಕ್ರಮವಹಿಸುವುದಾಗಿ ಆರೋಗ್ಯ ಸಚಿವರು ತಿಳಿಸಿದರು.

ಕೊವಿಡ್ ಪ್ರತಿ ಸಲ ತನ್ನ ಹೊಸ ರೂಪದಲ್ಲಿ ದಾಳಿ ಮಾಡಲು ಹೊಂಚು ಹಾಕ್ತಿದೆ. ಸದ್ಯ ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಉಪತಳಿ ಆತಂಕ ಹುಟ್ಟಿಸಿದೆ. ಮುಂಜಾಗ್ರತಾ ಕ್ರಮ ಅವಶ್ಯ  ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜ್ವರ, ಕೆಮ್ಮು, ಸುಸ್ತು, ಮೂಗು ಕಟ್ಟುವಿಕೆ, ಸ್ರವಿಸುವ ಮೂಗು, ಅತಿಸಾರ ಮತ್ತು ತಲೆನೋವು, ಉಸಿರಾಟದ ತೊಂದರೆ, ಆಯಾಸ, ಗಂಟಲು ನೋವು ಇದು ಹೊಸ ತಳಿಯ ಗುಣಲಕ್ಷಣಗಳಾಗಿದೆ. ಹೀಗಾಗಿ ಒಟ್ಟೊಟ್ಟಿಗೆ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ . ಒಟ್ಟಾರೆ ಕೋವಿಡ್ ಹೊಸ ತಳಿಯನ್ನು ಆರಂಭದಲ್ಲೇ ಕಟ್ಟಿ ಹಾಕಲು ಆರೋಗ್ಯ ಇಲಾಖೆ ಕೂಡ ಸನ್ನದ್ಧವಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ