ಕರ್ನಾಟಕಕ್ಕೆ ಕೊರೊನಾ ಕಂಟಕ; ಮುಂದಿನ 2 ವಾರದಲ್ಲಿ ಕೊವಿಡ್ ಪೀಕ್​ಗೆ, ಮಾಕ್ ಡ್ರಿಲ್​ಗೆ ಸೂಚನೆ

|

Updated on: Apr 10, 2023 | 2:13 PM

ಮುಂದಿನ 2 ವಾರದಲ್ಲಿ ಕೊವಿಡ್ ಕೇಸ್​ಗಳು ಪೀಕ್​ಗೆ ತಲುಪಲಿವೆ. ಹೀಗಾಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್​ಗೆ ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ.

ಕರ್ನಾಟಕಕ್ಕೆ ಕೊರೊನಾ ಕಂಟಕ; ಮುಂದಿನ 2 ವಾರದಲ್ಲಿ ಕೊವಿಡ್ ಪೀಕ್​ಗೆ, ಮಾಕ್ ಡ್ರಿಲ್​ಗೆ ಸೂಚನೆ
ಕೊರೊನಾವೈರಸ್
Image Credit source: IndiaToday
Follow us on

ಬೆಂಗಳೂರು: ರಾಜ್ಯದಲ್ಲಿ ಕೊವಿಡ್​ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಮುಂದಿನ 2 ವಾರದಲ್ಲಿ ಕೊವಿಡ್ ಕೇಸ್​ಗಳು ಪೀಕ್​ಗೆ ತಲುಪಲಿವೆ. ಹೀಗಾಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್​ಗೆ ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ. ಬೆಂಗಳೂರಿನ ಕೆ.ಸಿ.ಜನರಲ್​ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಆಕ್ಸಿಜನ್​ ಘಟಕ, ಆಕ್ಸಿಜನ್ ಜನರೇಟರ್, ಕೊವಿಡ್ ಉಪಕರಣಗಳ ಕಾರ್ಯನಿರ್ವಹಣೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ.

ಸಿಬ್ಬಂದಿ ಹಾಗೂ ವ್ಯವಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆಯೇ ಪರಿಶೀಲಿಸಲು ಕೇಂದ್ರ ಆರೋಗ್ಯ ಇಲಾಖೆಯ ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆಯ ಸಲಹೆಯಂತೆ ಮತ್ತೆ ಸಿದ್ಧತೆಗೆ ಆಸ್ಪತ್ರೆಗಳು ಮುಂದಾಗಿವೆ. ಮುಂದಿನ ಎರಡು ವಾರಗಳಲ್ಲಿ ಕೊವಿಡ್ ಏರಿಕೆಯ ಆತಂಕ ಶುರುವಾಗಿದೆ. ರಾಜ್ಯ ಸೇರಿ ದೇಶದಲ್ಲಿ ಕೊವಿಡ್ ಏರಿಕೆ ಹಿನ್ನಲೆ ವಿವಿಧ ಆಸ್ಪತ್ರೆಗಳಲ್ಲಿ ಇಂದು ಮಾಕ್ ಡ್ರಿಲ್ ನಡೆಯುತ್ತಿದೆ. ಈಗಾಲೇ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳ ಕೊವಿಡ್ ಏರಿಕೆ ನಿಯಂತ್ರಣಕ್ಕೆ ಸೂಚನೆ ನೀಡಿದ್ದು ರಾಜ್ಯ ಆರೋಗ್ಯ ಇಲಾಖೆ ಸಿದ್ಧತೆ ಶುರುಮಾಡಿದೆ. ಮತ್ತೆ ರಾಜ್ಯದಲ್ಲಿ ಕೊವಿಡ್ ಏರಿಕೆಯ ಆತಂಕ ಶುರುವಾಗಿದೆ.

ಇದನ್ನೂ ಓದಿ: ಕೊರೊನಾ ನಂತರ ಬೆಂಗಳೂರಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆಯತ್ತ: 2022ರಲ್ಲಿ 248 ಸಾವು

ದೆಹಲಿಯಲ್ಲಿ 700 ಹೊಸ ಕೇಸ್ ಪತ್ತೆ, ನಾಲ್ವರು ಸಾವು

ಇನ್ನು ಮತ್ತೊಂದೆಡೆ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 5,880 ಹೊಸ ಕೊವಿಡ್ ಕೇಸ್​ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 788 ಕೊವಿಡ್ ಕೇಸ್ ಪತ್ತೆ, ಒಬ್ಬರು ಸಾವು. ದೆಹಲಿಯಲ್ಲಿ 700 ಹೊಸ ಕೇಸ್ ಪತ್ತೆ, ನಾಲ್ವರು ಸಾವು. ದೇಶದಲ್ಲಿ ಕೊವಿಡ್ ಸೋಂಕಿತರ ಪ್ರಮಾಣ ಶೇಕಡಾ 6.91ರಷ್ಟಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 35,199ಕ್ಕೇರಿಕೆಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:13 pm, Mon, 10 April 23